More

    ಮಾರ್ಚ್ 19ಕ್ಕೆ ‘ಒಂದು ಗಂಟೆಯ ಕಥೆ’ ಸಿನಿಮಾ ಬಿಡುಗಡೆ

    ಬೆಂಗಳೂರು: ‘ಒಂದು ಗಂಟೆಯ ಕಥೆ’ ಎಂಬ ಚಿತ್ರ ಕಳೆದ ಮಾರ್ಚ್​ನಲ್ಲೇ ಬಿಡುಗಡೆಯಾಗಬೇಕಿತ್ತು. ಅಷ್ಟರಲ್ಲಿ ಲಾಕ್​ಡೌನ್ ಬಂದಿದ್ದರಿಂದ ಚಿತ್ರ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿ, ಈಗ ಮಾರ್ಚ್ 19ಕ್ಕೆ ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿದೆ. ರಾಷ್ಟ್ರದಲ್ಲಿ ಇತ್ತೀಚೆಗೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಕರಣಗಳನ್ನು ಆಧರಿಸಿ ಈ ಚಿತ್ರ ನಿರ್ವಣವಾಗಿದ್ದು, ಹಾಸ್ಯಮಯವಾಗಿ ತೆರೆಗೆ ಬರುತ್ತಿದೆ. ಇದು ಸಂಪೂರ್ಣ ಹೆಣ್ಣುಮಕ್ಕಳ ಪರವಾದ ಚಿತ್ರವಾದರೂ, ಎಲ್ಲರೂ ನೋಡಲೇಬೇಕಾದ ಚಿತ್ರ ಎನ್ನುತ್ತಾರೆ ನಿರ್ದೇಶಕ ರಾಘವ ದ್ವಾರ್ಕಿ. ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುವುದರ ಜತೆಗೆ ಕಶ್ಯಪ್ ದಾಕೋಜು. ಕೆ.ಎಸ್. ದುಶ್ಯಂತ್ ಜತೆಗೆ ಸೇರಿಕೊಂಡು ನಿರ್ವಿುಸಿದ್ದಾರೆ.

    ‘ಒಂದು ಗಂಟೆಯ ಕಥೆ’ ಚಿತ್ರದಲ್ಲಿ ನಾಯಕನಾಗಿ ಅಜಯ್ ರಾಜ್, ನಾಯಕಿಯಾಗಿ ಶನಾಯಾ ಕಾಟ್ವೆ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಯಶವಂತ ಸರದೇಶಪಾಂಡೆ, ಸ್ವಾತಿಶರ್ವ, ಪ್ರಕಾಶ್ ತುಮ್ಮಿನಾಡು, ಚಿದಾನಂದ್, ಚಂದ್ರಕಲಾ, ಆನಂದ್, ನಾಗೇಂದ್ರ ಷಾ, ಪ್ರಶಾಂತ್ ಸಿದ್ದಿ ಸೇರಿದಂತೆ ಒಟ್ಟು 123 ಕಲಾವಿದರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಕೆಲಸಕ್ಕೆ ಹೋಗಿದ್ದ ಹೆಂಡತಿ ತಡವಾಗಿ ಮನೆಗೆ ಬಂದಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ!; ಪತ್ನಿಯ ಶೀಲದ ಕುರಿತು ಅನುಮಾನ?

    ಕಳಸದ ಯುವತಿ ದುಬೈನಲ್ಲಿ ಸಾವು; ಒಂದು ವರ್ಷದ ಹಿಂದಷ್ಟೇ ಆಗಿತ್ತು ವಿವಾಹ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts