More

    ಮತ್ತೆ ಸದ್ದು ಮಾಡುತ್ತಿರುವ ವೋಟರ್ ಐಡಿ ಪ್ರಕರಣ; ಮನೆಮನೆಗೆ ತೆರಳಿ ಮಾಹಿತಿ ಕಲೆಹಾಕುತ್ತಿದ್ದ ಇಬ್ಬರನ್ನು ಹಿಡಿದು ಸ್ಥಳೀಯರು

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವೋಟರ್ ಐಡಿ ದುರ್ಬಳಕೆ ಪ್ರಕರಣ ಚರ್ಚೆಯಾಗುತ್ತಿದ್ದು, ಇದೀಗ ಮತ್ತೆ ವೋಟರ್ ಐಡಿ ಪ್ರಕರಣ ಸದ್ದು ಮಾಡಿದೆ. ಅದರಲ್ಲೂ ಮನೆಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದ ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ.

    ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಮತದಾರರ ಕುಟುಂಬ ಸದಸ್ಯರ ಮಾಹಿತಿ ಇಟ್ಟುಕೊಂಡು ಯಶವಂತಪುರ ಬಿ.ಕೆ.ನಗರ 8ನೇ ಅಡ್ಡರಸ್ತೆಯಲ್ಲಿ ಮನೆ ಮನೆ ಸರ್ವೇ ಮಾಡುತ್ತಿದ್ದ ಶ್ಯಾಮ್ ಮತ್ತು ಗೋಪಿ ಎಂಬಿಬ್ಬರನ್ನು ಸ್ಥಳೀಯರು ಹಾಗೂ ಮಾಜಿ ಕಾರ್ಪೋರೇಟರ್​ ವೆಂಕಟೇಶ್ ಹಿಡಿದಿದ್ದಾರೆ.

    ಸಿಕ್ಕಿಹಾಕಿಕೊಂಡಿರುವವರ ಬಳಿ ಸಿಕ್ಕ ಮಾಹಿತಿ ಪುಸ್ತಕದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಆರ್.ಆರ್.ನಗರ ಪರಾಜಿತ ಅಭ್ಯರ್ಥಿ ಕುಸುಮಾ ಅವರ ಫೋಟೋ ಕಂಡುಬಂದಿದೆ. ಅಲ್ಲದೆ ಆರೋಪಿಗಳ ಬಳಿ ಬಿಬಿಎಂಪಿ ಹೊಸ ವೋಟರ್ ಲಿಸ್ಟ್ ಪತ್ತೆಯಾಗಿದೆ ಎಂದು ವೆಂಕಟೇಶ್ ಆರೋಪ ಮಾಡಿದ್ದಾರೆ.

    ಇದುವರೆಗೂ ನಮಗೆ ಸಿಗದ ವೋಟರ್ ಐಡಿ ಲಿಸ್ಟ್ ಇವರ ಬಳಿ ಬಂದಿರುವುದು ಹೇಗೆ ಎಂದು ವೆಂಕಟೇಶ್ ಪ್ರಶ್ನೆ ಮಾಡಿದ್ದು, ಅಕ್ರಮವಾಗಿ ಮತದಾರರ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಯುವಕರ ವಿಚಾರಣೆ ನಡೆಯುತ್ತಿದೆ.

    ಕುತೂಹಲ ಕೆರಳಿಸಿದೆ ನಟಿ ಹರಿಪ್ರಿಯಾ ಪೋಸ್ಟ್​; ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!’

    ಆರು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿದ್ದ ಪೊಲೀಸ್ ಅಧಿಕಾರಿ ಇನ್ನಿಲ್ಲ; ಇನ್​ಸ್ಪೆಕ್ಟರ್ ಪ್ರಾಣ ತೆಗೆದ ಕ್ಯಾನ್ಸರ್​

    ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts