More

    ಕುತೂಹಲ ಕೆರಳಿಸಿದೆ ನಟಿ ಹರಿಪ್ರಿಯಾ ಪೋಸ್ಟ್​; ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!’

    ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆಯಾಗಲಿದ್ದಾರೆ, ಇಂದು ಗುಟ್ಟಾಗಿ ನಿಶ್ಚಿತಾರ್ಥವೂ ಆಗಿಬಿಟ್ಟಿದೆ ಎಂಬ ಸುದ್ದಿ ಸ್ಯಾಂಡಲ್​ವುಡ್​ನಲ್ಲಿ ಹರಿದಾಡುತ್ತಿರುವ ಬೆನ್ನಿಗೇ ಹರಿಪ್ರಿಯಾ ಸೋಷಿಯಲ್​ ಮೀಡಿಯಾ ಪೋಸ್ಟೊಂದು ಕುತೂಹಲ ಕೆರಳಿಸಿದೆ.

    ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದರೂ ಆ ಬಗ್ಗೆ ಅವರಿಬ್ಬರಲ್ಲಿ ಯಾರೂ ತುಟಿ ಪಿಟಿಕ್ ಎಂದಿರಲಿಲ್ಲ. ಇಂದು ಅವರಿಬ್ಬರ ನಿಶ್ಚಿತಾರ್ಥವೂ ನೆರವೇರಿದೆ ಎಂಬ ಗುಲ್ಲು ಹಬ್ಬಿದ್ದರೂ ಖಚಿತ ಮಾಹಿತಿ ಬಹಿರಂಗಗೊಂಡಿಲ್ಲ.

    ಇದನ್ನೂ ಓದಿ: ಸದ್ದಿಲ್ಲದೆ ನಡೆಯಿತಾ ವಸಿಷ್ಠ, ಹರಿಪ್ರಿಯಾ ನಿಶ್ಚಿತಾರ್ಥ? ಸ್ಯಾಂಡಲ್​ವುಡ್​ನಲ್ಲಿ ಹೀಗೊಂದು ಸುದ್ದಿ …

    ಆದರೆ ಸಂಜೆಯ ನಂತರ ಸೋಷಿಯಲ್ ಮೀಡಿಯಾದಲ್ಲಿ ಹರಿಪ್ರಿಯಾ ಮಾಡಿರುವ ಪೋಸ್ಟ್ ಈಗ ಹರಿದಾಡುತ್ತಿರುವ ಸುದ್ದಿಗೆ ರೆಕ್ಕೆಪುಕ್ಕ ನೀಡುವಂತಿದೆ. ವಸಿಷ್ಠ ಸಿಂಹ ಅವರನ್ನು ಹರಿಪ್ರಿಯಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಸಿಂಹದ ಕೈಯಲ್ಲಿ ಹೆಣ್ಣು ಮಗುವೊಂದು ಇರುವಂಥ ಫೋಟೋ ಹಾಗೂ ಅದರ ಜತೆಗೆ ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!❤️’ ಎಂಬ ಶೀರ್ಷಿಕೆ ಕೂಡ ಹಾಕಿರುವುದು ಸದ್ಯದ ಸುದ್ದಿಗಳನ್ನು ಸ್ಪಷ್ಟಪಡಿಸುವಂತಿದೆ. ಮಾತ್ರವಲ್ಲ, ಅಭಿಮಾನಿಗಳಲ್ಲಿ ಈ ವಿಚಾರವಾಗಿ ಇಬ್ಬರ ಕುರಿತ ಕುತೂಹಲವನ್ನು ಅದು ಹೆಚ್ಚಿಸಿದೆ.

    ಆರು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿದ್ದ ಪೊಲೀಸ್ ಅಧಿಕಾರಿ ಇನ್ನಿಲ್ಲ; ಇನ್​ಸ್ಪೆಕ್ಟರ್ ಪ್ರಾಣ ತೆಗೆದ ಕ್ಯಾನ್ಸರ್​

    ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts