More

    ಮೂಕಾಂಬಿಕಾ ಎಕ್ಸ್‌ಪ್ರೆಸ್ ಎಂದೇ ಹೆಸರಾಗಿದ್ದ ಕೊಬ್ಬರಿ ಹೋರಿ ಚಾಮುಂಡಿ ಇನ್ನಿಲ್ಲ; ದುಃಖ ವ್ಯಕ್ತಪಡಿಸಿದ ಅಭಿಮಾನಿಗಳು

    ಹಾವೇರಿ: ತನ್ನ ತೀಕ್ಷ್ಣ ನೋಟ, ಕಟ್ಟುಮಸ್ತಾದ ದೇಹ ಸಿರಿಯ ಮೂಲಕ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ರಟ್ಟಿಹಳ್ಳಿ ತಾಲೂಕಿನ ಚಾಮುಂಡಿ ಹಾಗೂ ಮೂಕಾಂಬಿಕಾ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದ ಕೊಬ್ಬರಿ ಹೋರಿ ಶುಕ್ರವಾರ ಅಸುನೀಗಿದೆ.

    ಹೋರಿ ಬೆದರಿಸುವ ಅಥವಾ ಕೊಬ್ಬರಿ ಹೋರಿ ಸ್ಪರ್ಧೆಯ ಅಖಾಡದಲ್ಲಿ ಚಾಮುಂಡಿ ಭರ್ಜರಿ ಹವಾ ಸೃಷ್ಟಿಸಿತ್ತು. ರಟ್ಟಿಹಳ್ಳಿ- ಮಾಸೂರು ಸೇರಿದಂತೆ ಜಿಲ್ಲೆ, ಪಕ್ಕದ ಜಿಲ್ಲೆ, ಹೊರ ರಾಜ್ಯಗಳ ಸ್ಪರ್ಧೆಗಳಲ್ಲೂ ಅನೇಕ ಬಹುಮಾನ, ಪ್ರಶಸ್ತಿ, ಬಿರುದುಗಳನ್ನು ಚಾಮುಂಡಿ ತನ್ನದಾಗಿಸಿಕೊಂಡಿತ್ತು.

    ಅನಾರೋಗ್ಯಕ್ಕೆ ತುತ್ತಾಗಿದ್ದ ಚಾಮುಂಡಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ. ಮನೆ ಸದಸ್ಯನಂತೆ ಸಾಕಿದ್ದ ಮಾಲೀಕರು ಹಾಗೂ ಅಭಿಮಾನಿಗಳು ಚಾಮುಂಡಿಯ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನಕಲಕುವಂತಿತ್ತು. ಹೋರಿಯ ದರ್ಶನಕ್ಕೆ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ.

    ಆರು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿದ್ದ ಪೊಲೀಸ್ ಅಧಿಕಾರಿ ಇನ್ನಿಲ್ಲ; ಇನ್​ಸ್ಪೆಕ್ಟರ್ ಪ್ರಾಣ ತೆಗೆದ ಕ್ಯಾನ್ಸರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts