More

    ಆಟೋ, ಐಟಿ ಷೇರುಗಳ ನಾಗಾಲೋಟ: ಸತತ 4ನೇ ದಿನವೂ ಮಾರುಕಟ್ಟೆಯಲ್ಲಿ ಗೂಳಿಯ ಗೆಲುವಿನ ಓಟ

    ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕಗಳು ಸತತ ನಾಲ್ಕನೇ ದಿನದ ವಹಿವಾಟಿನಲ್ಲಿ ಏರುಗತಿ ಪ್ರವೃತ್ತಿ ಮುಂದುವರಿಸಿದವು. ನಿಫ್ಟಿ ಸೂಚ್ಯಂಕವು 22 ಸಾವಿರ ಅಂಕಗಳ ಗಡಿಯನ್ನು ಮತ್ತೊಮ್ಮೆ ದಾಟಿತು. ಜಾಗತಿಕ ಮಾರುಕಟ್ಟೆಗಳಲ್ಲಿ ದೃಢವಾದ ಪ್ರವೃತ್ತಿಯ ಮಧ್ಯೆ, ಎಲ್ & ಟಿ, ಇನ್ಫೋಸಿಸ್ ಮತ್ತು ಎಂ & ಎಂ ರೀತಿಯ ಬ್ಲೂ ಚಿಪ್‌ ಕಂಪನಿಗಳ ಷೇರುಗಳ ಲಾಭದಿಂದ ಸೂಚ್ಯಂಕಗಳು ಏರಿಕೆ ಕಂಡವು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 376.26 ಅಂಕಗಳು ಅಥವಾ ಶೇಕಡಾ 0.52 ಏರಿಕೆಯಾಗಿ 72,426.64 ಕ್ಕೆ ತಲುಪಿತು. ಇಂಟ್ರಾಡೇ ವಹಿವಾಟಿನಲ್ಲಿ ಈ ಸೂಚ್ಯಂಕವು ಗರಿಷ್ಠ 72,545.33 ಮತ್ತು ಕನಿಷ್ಠ 72,218.10 ಅಂಕಗಳನ್ನು ಮುಟ್ಟಿತ್ತು.

    ಎನ್‌ಎಸ್‌ಇ ನಿಫ್ಟಿ ಕೂಡ 129.95 ಅಂಕಗಳು ಅಥವಾ ಶೇಕಡಾ 0.59 ರಷ್ಟು ಏರಿಕೆಯಾಗಿ 22,040.70 ಅಂಕಗಳಿಗೆ ಮುಟ್ಟಿತು.

    ಬಿಎಸ್​ಇ ಸೂಚ್ಯಂಕಗಳ ಪ್ರಮುಖ ಕಂಪನಿಯಾದ ವಿಪ್ರೋ ಷೇರುಗಳ ಬೆಲೆ ಶೇಕಡಾ 4.79ರಷ್ಟು ಏರಿಕೆಯಾಯಿತು. ಎಂ & ಎಂ, ಎಲ್ & ಟಿ, ಟಾಟಾ ಮೋಟಾರ್ಸ್, ಮಾರುತಿ, ಇನ್ಫೋಸಿಸ್, ನೆಸ್ಲೆ ಇಂಡಿಯಾ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಕಂಪನಿಯ ಷೇರುಗಳು ಕೂಡ ಹೆಚ್ಚಳವನ್ನು ದಾಖಲಿಸಿದವು.

    ಎಲೆಕ್ಟ್ರಿಕ್ ಮೊಬಿಲಿಟಿ ಸಹಯೋಗಕ್ಕಾಗಿ ಎಲೆಕ್ಟ್ರಿಕ್ ವಾಹನ ಘಟಕಗಳಿಗಾಗಿ ಜರ್ಮನಿಯ ಆಟೋಮೋಟಿವ್ ಮೇಜರ್ ವೋಕ್ಸ್‌ವ್ಯಾಗನ್ ಗ್ರೂಪ್‌ ಜತೆ ಪೂರೈಕೆ ಒಪ್ಪಂದವನ್ನು ಘೋಷಿಸಿದ ನಂತರ M&M ಷೇರುಗಳು 3.96 ಪ್ರತಿಶತದಷ್ಟು ಏರಿಕೆಯಾಗಿ ರೂ 1,835.55 ಕ್ಕೆ ತಲುಪಿದವು.

    ಇದಕ್ಕೆ ವ್ಯತಿರಿಕ್ತವಾಗಿ, ಪವರ್‌ಗ್ರಿಡ್, ಎಸ್‌ಬಿಐ, ರಿಲಯನ್ಸ್, ಎನ್‌ಟಿಪಿಸಿ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಹಿನ್ನಡೆ ಕಂಡವು.

    ವಲಯವಾರು ಸೂಚ್ಯಂಕಗಳ ಪೈಕಿ, ಆಟೋ ಶೇ. 2.17ರಷ್ಟು ಏರಿಕೆ ಕಂಡಿದ್ದು, ರಿಯಾಲ್ಟಿ (ಶೇ. 1.53), ಗ್ರಾಹಕ ವಿವೇಚನೆ (ಶೇ. 1.41), ಕ್ಯಾಪಿಟಲ್ ಗೂಡ್ಸ್ (ಶೇ. 1.38) ಮತ್ತು ಹೆಲ್ತ್‌ಕೇರ್ (ಶೇ. 1.26) ವಲಯದ ಷೇರುಗಳು ಕೂಡ ಹೆಚ್ಚಳ ಕಂಡವು. ಯುಟಿಲಿಟಿಸ್​, ತೈಲ ಮತ್ತು ಅನಿಲ, ವಿದ್ಯುತ್ ಮತ್ತು ಇಂಧನ ವಲಯದ ಸೂಚ್ಯಂಕಗಳು ಶೇಕಡಾ 0.80 ರವರೆಗೆ ಕುಸಿದವು.

    ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.68 ರಷ್ಟು ಏರಿದರೆ, ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.78 ರಷ್ಟು ಲಾಭದೊಂದಿಗೆ ಮುಕ್ತಾಯವಾಯಿತು.

    ಏಷ್ಯಾದಲ್ಲಿ, ಜಪಾನ್‌ನ ನಿಕ್ಕಿ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಗಮನಾರ್ಹ ಲಾಭ ಕಂಡವು. ಚಾಂದ್ರಮಾನ ಹೊಸ ವರ್ಷದ ರಜಾದಿನಗಳಿಗಾಗಿ ಚೀನಾದ ಷೇರು ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಗುರುವಾರ ರಾತ್ರಿಯ ವಹಿವಾಟಿನಲ್ಲಿ ಅಮೆರಿಕ ಮಾರುಕಟ್ಟೆಯು ಹೆಚ್ಚಳ ಕಂಡಿತು.

    ಗುರುವಾರದ ಸೆಷನ್‌ನಲ್ಲಿ, ಬಿಎಸ್​ಇ ಸೂಚ್ಯಂಕವು 227.55 ಅಂಕಗಳಷ್ಟು ಏರಿಕೆಯಾಗಿ 72,050.38 ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 70.70 ಅಂಕಗಳ ಏರಿಕೆಯಾಗಿ 21,910.75 ಕ್ಕೆ ಮುಟ್ಟಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು, ರೂ 3,064.15 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.

    ಶುಕ್ರವಾರ ಆಗಸಕ್ಕೆ ನೆಗೆದ ಸ್ಪೈಸ್ ಜೆಟ್ ಷೇರು ಬೆಲೆ: ನಷ್ಟದಲ್ಲಿರುವ ಗೋ ಫಸ್ಟ್​ ವಿಮಾನಯಾನ ಸಂಸ್ಥೆ ಸ್ವಾಧೀನಕ್ಕೆ ಬಿಡ್​ ಸಲ್ಲಿಕೆ

    9:5 ಬೋನಸ್, 1:2 ವಿಭಜನೆ, 21,185% ಲಾಭ: ಹಣ ಮಾಡುವ ಫಾರ್ಮಾ ಸ್ಟಾಕ್ ಮತ್ತೆ ಆಗಲಿದೆ ವಿಭಜನೆ

    ಫೋನ್ ಪೇ, ಗೂಗಲ್​ ಪೇಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts