More

    ಶುಕ್ರವಾರ ಆಗಸಕ್ಕೆ ನೆಗೆದ ಸ್ಪೈಸ್ ಜೆಟ್ ಷೇರು ಬೆಲೆ: ನಷ್ಟದಲ್ಲಿರುವ ಗೋ ಫಸ್ಟ್​ ವಿಮಾನಯಾನ ಸಂಸ್ಥೆ ಸ್ವಾಧೀನಕ್ಕೆ ಬಿಡ್​ ಸಲ್ಲಿಕೆ

    ಮುಂಬೈ: ಖಾಸಗಿ ವಲಯದ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಷೇರುಗಳ ಬೆಲೆ ಶುಕ್ರವಾರ ಭಾರಿ ಏರಿಕೆ ಕಂಡಿದೆ.

    ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರದಂದು ಸ್ಪೈಸ್‌ಜೆಟ್‌ ಷೇರಿನ ಬೆಲೆಯು ಇಂಟ್ರಾ ಡೇ ವಹಿವಾಟಿನಲ್ಲಿ ಶೇ. 13ರಷ್ಟು ಏರಿಕೆ ಕಂಡು 72.29 ರೂಪಾಯಿ ತಲುಪಿತು. ಕೊನೆಯಲ್ಲಿ ಶೇಕಡಾ 7.18ರಷ್ಟು ಏರಿಕೆಯೊಂದಿಗೆ 70.81 ರೂಪಾಯಿ ತಲುಪಿತು.

    ಷೇರು ಮಾರುಕಟ್ಟೆ ತಜ್ಞರ ಪ್ರಕಾರ, DGCA (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಜನವರಿ 2024 ರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅಂಕಿ-ಅಂಶಗಳ ಪ್ರಕಾರ, ಜನವರಿ 2024 ರಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಉಳಿಸಿಕೊಳ್ಳುವಲ್ಲಿ ಸ್ಪೈಸ್‌ ಜೆಟ್ ಯಶಸ್ವಿಯಾಗಿದೆ. ಸ್ಪೈಸ್‌ಜೆಟ್ ಜನವರಿ 2024 ರಲ್ಲಿ ತನ್ನ 5.6 ಶೇಕಡಾ ಮಾರುಕಟ್ಟೆ ಪಾಲನ್ನು ಉಳಿಸಿಕೊಂಡಿದೆ. ಪ್ರಯಾಣಿಕರ ದಟ್ಟಣೆಯು ಶೇಕಡಾ 4.7 ರಷ್ಟು ಹೆಚ್ಚಾಗಿದೆ ಎಂದೂ ಈ ಅಂಶಗಳು ತೋರಿಸುತ್ತವೆ.

    ಬ್ಯುಸಿ ಬೀ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸ್ಪೈಸ್‌ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ಜಂಟಿಯಾಗಿ, ನಷ್ಟದಲ್ಲಿರುವ ಗೋ ಫಸ್ಟ್​ ವಿಮಾಯಾನ ಸಂಸ್ಥೆ ಸ್ವಾಧೀನಕ್ಕೆ ಬಿಡ್ ಸಲ್ಲಿಸಿದ್ದಾರೆ. ಶುಕ್ರವಾರ (ಫೆಬ್ರವರಿ 16, 2024) ಸಲ್ಲಿಸಲಾದ ಬಿಡ್, ಭಾರತೀಯ ವಾಯುಯಾನ ವಲಯದ ಚಿತ್ರಣವನ್ನು ಬದಲಿಸುವ ಮತ್ತು ಉದ್ಯಮದಲ್ಲಿ ಗಣನೀಯ ಬೆಳವಣಿಗೆಗೆ ಸ್ಪೈಸ್‌ಜೆಟ್ ಸ್ಥಾನವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವ ಮಹತ್ವದ ಕಾರ್ಯತಂತ್ರದ ನಡೆಯನ್ನು ಸೂಚಿಸುತ್ತದೆ.

    ಬಿಡ್ ಅನ್ನು ಅಜಯ್ ಸಿಂಗ್ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಬ್ಯುಸಿ ಬೀ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸಲ್ಲಿಸಿದ್ದಾರೆ.

    ಹೊಸ ಏರ್‌ಲೈನ್‌ಗೆ ಆಪರೇಟಿಂಗ್ ಪಾಲುದಾರರಾಗಿ ಸ್ಪೈಸ್‌ಜೆಟ್‌ನ ಪಾತ್ರವು ಅಗತ್ಯ ಸಿಬ್ಬಂದಿ, ಸೇವೆಗಳು ಮತ್ತು ಉದ್ಯಮದ ಪರಿಣತಿಯನ್ನು ಒದಗಿಸುವುದನ್ನು ಒಳಗೊಂಡಿರುತ್ತದೆ.

    ಗೋ ಫಸ್ಟ್ ಅಗಾಧ ಸಾಮರ್ಥ್ಯವನ್ನು ಹೊಂದಿದ್ದು, ಸ್ಪೈಸ್ ಜೆಟ್ ಜೊತೆ ನಿಕಟವಾಗಿ ಕೆಲಸ ಮಾಡಿ ಪುನಶ್ಚೇತನಗೊಳಿಸಬಹುದು, ಎರಡೂ ವಾಹಕಗಳಿಗೆ ಇದು ಪ್ರಯೋಜನವನ್ನು ನೀಡಬಹುದು. ವಿಮಾನದ ವೇಳಾಪಟ್ಟಿಗಳು ಮತ್ತು ಗಮ್ಯಸ್ಥಾನಗಳನ್ನು ವ್ಯೂಹಾತ್ಮಕವಾಗಿ ಜೋಡಿಸುವ ಮೂಲಕ ಮಾರುಕಟ್ಟೆ ಪಾಲು ಹೆಚ್ಚಿಸಬಹುದು ಎಂದು ಅಜಯ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಫೋನ್ ಪೇ, ಗೂಗಲ್​ ಪೇಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿರುವುದೇಕೆ?

    9:5 ಬೋನಸ್, 1:2 ವಿಭಜನೆ, 21,185% ಲಾಭ: ಹಣ ಮಾಡುವ ಫಾರ್ಮಾ ಸ್ಟಾಕ್ ಮತ್ತೆ ಆಗಲಿದೆ ವಿಭಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts