More

    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!

    ಬೆಂಗಳೂರು: ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್​ನ ಟ್ವಿಟರ್ ಖಾತೆ ಹೆಚ್ಚು ಸಕ್ರಿಯವಾಗುತ್ತಿದೆ. ಒಂದರ ಹಿಂದೆ ಒಂದರಂತೆ ಟ್ವೀಟ್ ಮಾಡುತ್ತಾ, ರಾಜ್ಯ ಬಿಜೆಪಿಯನ್ನು ಪ್ರಶ್ನಿಸುತ್ತಿದೆ. ಇದೀಗ ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವ್ಯಂಗ್ಯ ಚಿತ್ರಗಳನ್ನು ಬಳಸಿಕೊಂಡು ಕಾಲೆಳೆಯುವ ಕೆಲಸ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹರಿಬಿಟ್ಟಿರುವ ಫೋಟೋಗಳು ಮಾತ್ರ ಇದೀಗ ವೈರಲ್ ಆಗುತ್ತಿವೆ. 

    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು!! ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ..!! ಎಂದು ಬರೆದುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಕಾಲೆಳೆದಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ. ಇದು ಪ್ರೇಮದ ಮೊದಲ ಹಂತ! #40PercentLove ಎಂದು ಬರೆದು ಸಿ.ಟಿ.ರವಿ ಫೋಟೋ ಬಳಸಿ ವ್ಯಂಗ್ಯ ಮಾಡಲಾಗಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಕನಸಲ್ಲೂ ನೀನೇ, ಮನಸಲ್ಲೂ ನೀನೇ, ಉಸಿರಲ್ಲೂ ನೀನೇ, ಹೆಸರಲ್ಲೂ ನೀನೇ.. ಹೃದಯದ “ಆಕ್ಸಿಜನ್”! ಕಮಿಷನ್ ಕೊಡಿಸುವ, ಖಜಾನೆ ತುಂಬುವ “ಆಕ್ಸಿಜನ್” ಎಂದರೆ ಇವರಿಗೆ ಅದಮ್ಯ ಪ್ರೇಮ!! #40PercentLove ಎಂದು ಸಚಿವ ಸುಧಾಕರ್ ಅವರ ಫೋಟೋ ಬಳಸಿ ಟಾಂಗ್ ಕೊಡಲಾಗಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    “ಸರಸ ಸಲ್ಲಾಪದ ಸಿಡಿಗಳು” ಬಿಜೆಪಿಗರ ‘ಸಿಡಿ ಸಂಭ್ರಮ’ದ ಎಪಿಸೋಡ್‌ಗಳು ನೂರಾರಿವೆಯಂತೆ. ಯತ್ನಾಳರು ಹೇಳುವ ಸಿಡಿ ಸಿಡಿಯುವುದು ಯಾವಾಗ? #40PercentLove ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಶ್ನಿಸಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ.. ಆದರೆ ದ್ವೇಷವನ್ನೇ ಪ್ರೇಮಿಸಿದರೆ….!? ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು!! ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಂಗ್ರೆಸ್ ಲೇವಡಿ ಮಾಡಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಈ ಸ್ಪೆಷಲ್ ಡಾಕ್ಟರ್‌ಗೆ ಹೃದಯ ಬಡಿತವೂ ತಿಳಿಯುತ್ತದೆ. ಲೂಟಿ ಹೊಡೆತವೂ ತಿಳಿದಿದೆ! ಈ ಡಾಕ್ಟರ್‌ಗೂ ಲವ್ವಾಗಿದೆ – PSI ಹುದ್ದೆಗಳ ಮೇಲೆ! ಎಂದು ಬರೆದು ಸಚಿವ ಅಶ್ವಥ್ ನಾರಾಯಣ್ ಅವರನ್ನು ಕಾಂಗ್ಯಸ್ ವ್ಯಂಗ್ಯವಾಡಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಪ್ರೀತಿಯ ಪಯಣದ ಹಾದಿಯಲ್ಲಿ ಕೇವಲ ಕಲ್ಲು ಮುಳ್ಳುಗಳಷ್ಟೇ ಇರುವುದಿಲ್ಲ.. ರಸ್ತೆ ಗುಂಡಿಗಳು, ಕಿತ್ತು ಹೋದ ಡಾಂಬರು ಕೂಡ ಇರುತ್ತವೆ! ಏಕೆಂದರೆ ಅದು – #40PercentLove !! ಎಂದು ಬರೆದುಕೊಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕಾಂಗ್ರೆಸ್ ವ್ಯಂಗ್ಯವಾಡಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ! “ಸಚಿವ ಹುದ್ದೆ” ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ! #40PercentLove ಎಂದು ಶಾಸಕ ರೇಣುಕಾಚಾರ್ಯ ಅವರನ್ನು ಕಾಂಗ್ರೆಸ್ ಕಾಲೆಳೆದಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    “ಪ್ರೀತಿ ಮಧುರ, ತ್ಯಾಗ ಅಮರ” ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ.. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ!! ಎಂದು ಮಾಜಿ ಸಚಿವ ಈಶ್ವರಪ್ಪ ಅವರ ಫೋಟೋ ಬಳಸಿ ವ್ಯಂಗ್ಯವಾಡಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ! ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು! ಎಂದು ಸಚಿವ ಆರ್.ಅಶೋಕ್ ಅವರನ್ನು ಕಾಂಗ್ರೆಸ್ ವ್ಯಂಗ್ಯವಾಡಿದೆ.
    ಇದು #40PercentLove; ಪ್ರೇಮಿಗಳ ದಿನದಂದು ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್!
    ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು,
    ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ! ಎಂದು ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾಂಗ್ರೆಸ್ ಲೇವಡಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts