More

    VIDEO | ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಶತಮಾನದ ಎಸೆತಕ್ಕೆ 28 ವರ್ಷ

    ಬೆಂಗಳೂರು: ಆಸ್ಟ್ರೇಲಿಯಾದ ಸ್ಪಿನ್ನರ್ ಶೇನ್ ವಾರ್ನ್ ಮ್ಯಾಜಿಕ್ ಎಸೆತಗಳಿಂದ ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸುತ್ತಿದ್ದರು. 1993ರಲ್ಲಿ 23ರ ಹರೆಯದ ಶೇನ್ ವಾರ್ನ್ ಆಗಷ್ಟೇ ಕ್ರಿಕೆಟ್‌ನಲ್ಲಿ ಛಾಪು ಮೂಡಿಸುತ್ತಿದ್ದ ಯುವ ಸ್ಪಿನ್ನರ್. ಆ ವರ್ಷದ ಆಶಸ್ ಸರಣಿಯ ಆ ಒಂದು ಎಸೆತ ಅವರ ಸ್ಪಿನ್ ಮಾಂತ್ರಿಕತೆಯ ಬಗ್ಗೆ ಎಲ್ಲರೂ ಬೆರಗು ಮೂಡಿಸುವಂತೆ ಮಾಡಿತ್ತು. ‘ಶತಮಾನದ ಎಸೆತ’ ಎಂದೇ ಹೆಸರು ಪಡೆದ ಆ ಎಸೆತಕ್ಕೆ ಶುಕ್ರವಾರ 28ನೇ ವರ್ಷದ ಸಂಭ್ರಮ.

    1993ರ ಆಶಸ್ ಸರಣಿಯಲ್ಲಿ ಮ್ಯಾಂಚ್‌ಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಜೂನ್ 4ರಂದು ಸಾಗಿತ್ತು. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ನ 289 ರನ್‌ಗಳಿಗೆ ಪ್ರತಿಯಾಗಿ ಇಂಗ್ಲೆಂಡ್, 1 ವಿಕೆಟ್‌ಗೆ 80 ರನ್ ಗಳಿಸಿ ಉತ್ತಮ ಆರಂಭವನ್ನೇ ಪಡೆದಿತ್ತು. ಆಗ ಆಸೀಸ್ ನಾಯಕ ಅಲನ್ ಬಾರ್ಡರ್, ತಂಡದ ಯುವ ಸ್ಪಿನ್ನರ್ ಶೇನ್ ವಾರ್ನ್ ಕೈಗೆ ಚೆಂಡು ನೀಡಿದ್ದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮೈಕ್ ಗ್ಯಾಟಿಂಗ್ 4 ರನ್ ಗಳಿಸಿ ಇನಿಂಗ್ಸ್ ಬೆಳೆಸುವ ಪ್ರಯತ್ನದಲ್ಲಿದ್ದರು. ಆಗ ವಾರ್ನ್ ಎಸೆದ ಎಸೆತ ಗ್ಯಾಟಿಂಗ್‌ರನ್ನು ತಬ್ಬಿಬ್ಬಾಗಿಸಿ ಕ್ಲೀನ್ ಬೌಲ್ಡ್ ಮಾಡಿತ್ತು. ಔಟ್‌ಸೈಡ್ ಲೆಗ್‌ಸ್ಟಂಪ್‌ನಲ್ಲಿ ಪಿಚ್ ಆಗಿದ್ದ ಚೆಂಡು ಕ್ಷಿಪ್ರಗತಿಯಲ್ಲಿ ತಿರುವು ಪಡೆದುಕೊಂಡು ಗ್ಯಾಟಿಂಗ್‌ರ ಆಫ್​ ಸ್ಟಂಪ್ ಉರುಳಿಸಿತ್ತು. ನಂತರ ಇಂಗ್ಲೆಂಡ್ ಇನಿಂಗ್ಸ್ ದಿಕ್ಕತಪ್ಪಿತ್ತು. ಆಸೀಸ್ 179 ರನ್‌ಗಳಿಂದ ಜಯಿಸಿದ ಆ ಪಂದ್ಯದಲ್ಲಿ ವಾರ್ನ್ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವವನ್ನೂ ಪಡೆದಿದ್ದರು.

    ಇದನ್ನೂ ಓದಿ: PHOTO | ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಬಲಿಷ್ಠ ತಂಡ, ಕ್ರೀಡಾಪಟುಗಳ ಸಮವಸ್ತ್ರ ಅನಾವರಣ

    ವಾರ್ನ್‌ರ ಆ ಮ್ಯಾಜಿಕ್ ಎಸೆತಕ್ಕೆ ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ‘ಶತಮಾನದ ಎಸೆತ’ ಎಂದು ಹೆಸರು ನೀಡಿದ್ದಾರೆ. ಶುಕ್ರವಾರ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ವಾರ್ನ್ ಅವರ ಆ ಎಸೆತವನ್ನು ಸಂಭ್ರಮಿಸಿದ್ದು, ಐಸಿಸಿ ಕೂಡ ಆ ಎಸೆತವನ್ನು ಶತಮಾನದ ಎಸೆತ ಎಂದೇ ಸ್ಮರಿಸಿಕೊಂಡಿದೆ. ಈಗ 51ನೇ ವಯಸ್ಸಿನವರಾಗಿರುವ ವಾರ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ 708 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 293 ವಿಕೆಟ್ ಕಬಳಿಸಿ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

    PHOTO | ಕ್ರಿಕೆಟ್ ಜನಕರ ನಾಡಿನಲ್ಲಿ ಟೀಮ್ ಇಂಡಿಯಾ ಕ್ವಾರಂಟೈನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts