PHOTO | ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಬಲಿಷ್ಠ ತಂಡ, ಕ್ರೀಡಾಪಟುಗಳ ಸಮವಸ್ತ್ರ ಅನಾವರಣ

oly web
Published on

ನವದೆಹಲಿ: ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 100ಕ್ಕೂ ಅಧಿಕ ಕ್ರೀಡಾಪಟುಗಳನ್ನು ಒಳಗೊಂಡ ಒಟ್ಟಾರೆ 190 ಸದಸ್ಯರ ಬಲಿಷ್ಠ ಭಾರತ ತಂಡ ಭಾಗವಹಿಸಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ ತಿಳಿಸಿದರು.

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಗುರುವಾರ ಭಾರತೀಯ ಒಲಿಂಪಿಕ್ ತಂಡದ ಸಮವಸ್ತ್ರವನ್ನು ಅನಾವರಣಗೊಳಿಸಿದ ವೇಳೆ ಮಾತನಾಡಿದ ಬಾತ್ರಾ, 56 ಪುರುಷರು ಮತ್ತು 44 ಮಹಿಳೆಯರನ್ನು ಒಳಗೊಂಡಂತೆ 100 ಕ್ರೀಡಾಪಟುಗಳು ಈಗಾಗಲೆ ಒಲಿಂಪಿಕ್ಸ್ ಅರ್ಹತೆ ಗಳಿಸಿದ್ದು, ಇನ್ನೂ 25-35 ಕ್ರೀಡಾಪಟುಗಳು ಅರ್ಹತೆ ಗಳಿಸುವ ನಿರೀಕ್ಷೆ ಇದೆ ಎಂದರು.

ಟೋಕಿಯೊದಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧೆ ಮತ್ತು ಅಭ್ಯಾಸದ ವೇಳೆ ಧರಿಸುವ ಸಮವಸ್ತ್ರಕ್ಕೆ ಚೀನಾದ ಕ್ರೀಡಾ ಉಡುಪುಗಳ ಕಂಪನಿ ಲೀ ನಿಂಗ್ ಪ್ರಾಯೋಜಕನಾಗಿದ್ದರೆ, ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದ ಪಥ ಸಂಚಲನದ ವೇಳೆ ಕ್ರೀಡಾಪಟುಗಳು ಧರಿಸುವ ಸಮವಸ್ತ್ರಕ್ಕೆ ಸ್ವದೇಶಿ ಉಡುಪುಗಳ ಕಂಪನಿ ರೇಮಂಡ್ಸ್ ಪ್ರಾಯೋಜಕನಾಗಿದೆ.

ಟೋಕಿಯೊ ಒಲಿಂಪಿಕ್ಸ್ ಜುಲೈ 23ರಂದು ಆರಂಭಗೊಳ್ಳಲಿದ್ದು, ಇನ್ನು 50 ದಿನಗಳಷ್ಟೇ ಬಾಕಿ ಉಳಿದಿದೆ. ನೀರಜ್ ಚೋಪ್ರಾ, ಭಜರಂಗ್ ಪೂನಿಯಾ, ರವಿ ದಹಿಯಾ, ಸುಮಿತ್ ಮಲಿಕ್ ಮತ್ತು ಸೀಮಾ ಬಿಸ್ಲಾ ಸಹಿತ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ 6 ಕ್ರೀಡಾಪಟುಗಳು ಸಮಾರಂಭದಲ್ಲಿದ್ದರು. ಬಿ.ಪಿ. ಬೈಷ್ಯಾ ಭಾರತೀಯ ಒಲಿಂಪಿಕ್ ತಂಡದ ಚೀಫ್​ ಡಿ ಮಿಷನ್ ಆಗಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net