More

    21ರಂದು ಅಭಿಮಾನಿ ಬಳಗದಿಂದ ಪ್ರತಿಭಟನೆ

    ಬೈಲಹೊಂಗಲ: ರೈತರಿಗೆ ಸಮರ್ಪಕ ವಿದ್ಯುತ್ ನೀಡದ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ನಾಡಿನ ರೈತ ಸಮುದಾಯ ನಿರ್ಣಯಿಸಿದ್ದು, ಅ.21ರಂದು ಮೆರವಣಿಗೆ ಮೂಲಕ ತೆರಳಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

    ಪಟ್ಟಣದ ಗೃಹ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಬರ ಮತ್ತು ವಿದ್ಯುತ್‌ವ್ಯತ್ಯಯದಿಂದ ರೈತ ಸಮುದಾಯ ತತ್ತರಿಸಿದೆ. ಹೆಸ್ಕಾಂ ಅಧಿಕಾರಿಗಳು ರೈತರಿಗೆ ಹಗಲಿನಲ್ಲಿನ ಏಳು ಗಂಟೆ ತ್ರೀೇಸ್ ಮತ್ತು ರಾತ್ರಿ 12 ಗಂಟೆ ಸಿಂಗಲ್ ೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಅನ್ನದಾತರ ನಿದ್ರೆಗೆಡಿಸಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗತೊಡಗಿದೆ. ಹಾಗಾಗಿ, ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗದಿಂದ ಹಾಗೂ ವಿವಿಧ ರೈತ ಸಂಘಟನೆಗಳ ಆಶ್ರಯದಲ್ಲಿ ಅ.21 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಚನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದೆ ಎಂದರು.

    ಮಡಿವಾಳಪ್ಪ ಹೋಟಿ, ರಾಜು ಕುಡಸೋಮಣ್ಣವರ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತ ಲೋಡಶೆಡ್ಡಿಂಗ್‌ಮಾಡುತ್ತಿರುವುದರಿಂದ ಶೇಂಗಾ, ಗೋವಿನಜೋಳ, ಸೋಯಾ, ಉದ್ದು, ಹೆಸರು ಹಾಗೂ ಕಬ್ಬು ನೀರಿಲ್ಲದೆ ಒಣಗಿ ಹೋಗುತ್ತಿವೆ. ಹಗಲಿನಲ್ಲಿ 6 ಗಂಟೆಯಾದರೂ ತ್ರೀಫೇಸ್ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಬೈಲಹೊಂಗಲ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

    ಐ.ಎಲ್.ಪಾಟೀಲ, ಪುರಸಭೆ ಸದಸ್ಯರಾದ ಶಿವಾನಂದ ಕೋಲಕಾರ, ಸುಧೀರ ವಾಲಿ, ಮುಖಂಡರಾದ ಮಹೇಶ ಹರಕುಣಿ, ಗಂಗಪ್ಪ ಗುಗ್ಗರಿ, ವಿಜಯ ಪತ್ತಾರ, ರಿತೇಶ ಪಾಟೀಲ, ಆನಂದ ಮೂಗಿ, ಮುರಗೇಶ ಗುಂಡ್ಲೂರ, ಬಾಳನಗೌಡ ಪಾಟೀಲ, ಅಶೋಕ ಗುಂಡ್ಲೂರ, ಚಂದನ ಕೌಜಲಗಿ, ಬಸವರಾಜ ನೇಸರಗಿ, ಮಡಿವಾಳಪ್ಪ ಚಿಕ್ಕೊಪ್ಪ, ಶ್ರೀಶೈಲ ಹಂಪಿಹೊಳಿ, ರುದ್ರಪ್ಪ ದೇಗಾಂವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts