More

    ಯೋಗ ಮಾಡಿದ ಮಾಜಿ ಕ್ರಿಕೆಟರ್​ ಮೊಹಮ್ಮದ್​ ಕೈಫ್​ ವಿರುದ್ಧ ಕೆಟ್ಟ ಟೀಕೆ, ವ್ಯಂಗ್ಯದ ಮಾತುಗಳು…

    ಮುಂಬೈ: ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಅಂದು ಹಲವು ಗಣ್ಯರು ತಾವು ಯೋಗ ಮಾಡುತ್ತಿರುವ ಫೋಟೋವನ್ನು ಶೇರ್​ ಮಾಡಿಕೊಂಡು ಯೋಗ ದಿನದ ಶುಭಾಶಯಗಳನ್ನು ಕೋರಿದ್ದಾರೆ.
    ಹಾಗೇ ಭಾರತದ ಮಾಜಿ ಕ್ರಿಕೆಟರ್ ಮೊಹಮ್ಮದ್​ ಕೈಫ್ ಅವರೂ ಕೂಡ ತಾವು ಯೋಗಾಸನ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ನೀವು ನಿಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುವುದನ್ನು ಮೊದಲು ಪ್ರೀತಿಸಿ. ಮನಸು, ದೇಹ..ನಮ್ಮ ಆತ್ಮದ ಬಗ್ಗೆ ಕಾಳಜಿ ಇರಬೇಕು ಎಂದು ಕೈಫ್​ ತಮ್ಮ ಫೋಟೋಕ್ಕೆ ಕ್ಯಾಪ್ಷನ್ ಬರೆದಿದ್ದಾರೆ.

    ಈ ಫೋಟೋಕ್ಕೆ ಕೆಲವರು ತುಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೈಪ್​ರನ್ನು ಫಿಟ್​ನೆಸ್​ ಮಾಸ್ಟರ್​ ಎಂದು ಕರೆದಿದ್ದಾರೆ. ಆದರೆ ಹಲವರು ಮೊಹಮ್ಮದ್​ ಕೈಫ್​ ಅವರನ್ನು ಸಿಕ್ಕಾಪಟೆ ಟ್ರೋಲ್​ ಮಾಡಿದ್ದಾರೆ. ಅದರಲ್ಲೂ ಮುಸ್ಲಿಂ ಮೂಲಭೂತವಾದಿಗಳೊಂದಷ್ಟು ಜನ ಕೈಫ್​ ಅವರನ್ನು ಟೀಕಿಸಿದ್ದಾರೆ. ವ್ಯಂಗ್ಯ ಮಾಡಿದ್ದಾರೆ. ಯೋಗವನ್ನು ಧರ್ಮದೊಟ್ಟಿಗೆ ಲಿಂಕ್​ ಮಾಡಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮವೊಂದರಲ್ಲಿ ಪ್ರಜ್ಞಾಶೂನ್ಯರಾಗಿ ಬಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​

    ಇಸ್ಲಾಂನಲ್ಲಿ ಯೋಗ ನಿಷಿದ್ಧ ಎಂದು ಓರ್ವರು ಕಾಮೆಂಟ್ ಬರೆದಿದ್ದಾರೆ. ಇದನ್ನೆಲ್ಲ ಬಿಟ್ಟು ದಿನಕ್ಕೆ ಐದು ಬಾರಿ ನಮಾಜ್​ ಮಾಡಿ ಎಂದೂ ಸಲಹೆ ಕೊಟ್ಟಿದ್ದಾರೆ. ಯಾರನ್ನು ಓಲೈಸಲು, ಯಾರ ಸಂತೋಷಕ್ಕಾಗಿ ನೀವು ಯೋಗ ಮಾಡುತ್ತಿದ್ದೀರಿ ಎಂದೂ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿಲ್ಲುತ್ತಿಲ್ಲ ಕರೊನಾ ಓಟ; ಕಳೆದ 24 ಗಂಟೆಯಲ್ಲಿ 14000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆ

    ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆ ಜೋರಾಗಿದೆ. ಕೈಫ್​ ಯೋಗ ಮಾಡಿದರೆ ಅದು ಅವರ ವೈಯಕ್ತಿಕ ಆಸಕ್ತಿ. ಅದಕ್ಕೆ ಯಾಕೆ ಹೀಯಾಳಿಸಬೇಕು ಎಂದು ಅನೇಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)

    https://www.instagram.com/p/CBrhuqsAY5o/

    ಯೋಗ ಮಾಡಿದ ಮಾಜಿ ಕ್ರಿಕೆಟರ್​ ಮೊಹಮ್ಮದ್​ ಕೈಫ್​ ವಿರುದ್ಧ ಕೆಟ್ಟ ಟೀಕೆ, ವ್ಯಂಗ್ಯದ ಮಾತುಗಳು...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts