More

    ನಿಲ್ಲುತ್ತಿಲ್ಲ ಕರೊನಾ ಓಟ; ಕಳೆದ 24 ಗಂಟೆಯಲ್ಲಿ 14000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆ

    ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 4.40 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 14,933 ಕರೊನಾ ಹೊಸ ಪ್ರಕರಣಗಳು ಪತ್ತೆಯಾಗಿದೆ.

    ದೇಶದಲ್ಲಿ ಒಟ್ಟು 4,40, 215 ಸೋಂಕಿತರು ಇದ್ದು, 2, 48,190 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 14,011 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. 1,78,014 ಸಕ್ರಿಯ ಕರೊನಾ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ನಿವೃತ್ತಿಯಾದ ಒಂದೇ ತಿಂಗಳಲ್ಲಿ ಗುಂಡು ಹಾರಿಸಿಕೊಂಡು ಎಎಸ್​ಐ ಆತ್ಮಹತ್ಯೆ

    ವಿಶ್ವವನ್ನೇ ನಲುಗಿಸುತ್ತಿರುವ ಕೊವಿಡ್​-19ಗೆ ಇನ್ನೂ ಲಸಿಕೆ ಕಂಡು ಹಿಡಿದಿಲ್ಲ. ದೇಶದಲ್ಲಿ ಅನೇಕ ಕಡೆ ಬಹುತೇಕ ಎಲ್ಲ ಚಟುವಟಿಕೆಗಳೂ ಪ್ರಾರಂಭವಾಗಿವೆ. ಜನರೂ ಕೂಡ ಸಹಜವಾಗಿ ಓಡಾಟ ಪ್ರಾರಂಭಿಸಿದ್ದಾರೆ. ಆದರೆ ನಗರಗಳಲ್ಲಿ ಕರೊನಾ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ.

    ಮಹಾರಾಷ್ಟ್ರ, ದೆಹಲಿಗಳೆಲ್ಲ ಕರೊನಾದಿಂದ ತತ್ತರಿಸುತ್ತಿವೆ. ಹಾಗೇ ಮೇಘಾಲಯದಲ್ಲಿ ಅತ್ಯಂತ ಕಡಿಮೆ ಅಂದರೆ 44 ಕರೊನಾ ಸೋಂಕಿತರು ಇದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: ಒಬ್ಬ ವ್ಯಕ್ತಿಗೆ ಕರೊನಾ ಇದೆಯೆಂದು ಆತನ ನೆರೆಹೊರೆಯವರಿಗೆ ತಿಳಿಸಿದ ಡಾಕ್ಟರ್ ಗತಿ ಏನಾಯ್ತು ನೋಡಿ….

    ಅತಿಥಿ ಶಿಕ್ಷಕರ ಅನಿಶ್ಚಿತತೆ; ಬದುಕಿಗಾಗಿ ತರಕಾರಿ ಮಾರಾಟ…ಪಂಕ್ಚರ್​ ಶಾಪ್​ನಲ್ಲಿ ಕೆಲಸ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts