More

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ‘ಓಂಕಾರ್ 108 ಪ್ಲಸ್’ ನೀರು ಮಾರುಕಟ್ಟೆಗೆ

    ಹುಬ್ಬಳ್ಳಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ‘ಓಂಕಾರ್ 108 ಪ್ಲಸ್’ ಎನ್ನುವ ನೀರಿನ ಹೊಸ ಬ್ರಾಂಡ್ ಅನ್ನು ಹುಬ್ಬಳ್ಳಿಯ ಸಂಕೇಶ್ವರ ಬಿವರೇಜಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಲ್ಲದೆ, ‘ಓಂಕಾರ್ ಡೆಲಿವರಿ’ ಆ್ಯಪ್ ಸಿದ್ಧಪಡಿಸಿದ್ದು, ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಿದೆ.

    ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಕೇಶ್ವರ ಬಿವರೇಜಸ್ ಪ್ರೊಪ್ರೈಟರ್ ರವೀಂದ್ರ ಸಂಕೇಶ್ವರ ಅವರು ಈ ವಿಷಯ ಪ್ರಕಟಿಸಿದರು. ‘ಆರೋಗ್ಯವೇ ಭಾಗ್ಯ’ ಅಂಶವನ್ನು ಪ್ರಧಾನವಾಗಿರಿಸಿಕೊಂಡು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ನೀರಿನಲ್ಲಿ ಕ್ಷಾರೀಯ (ಆಲ್ಕಲೈನ್) ಶಕ್ತಿ ಇದೆ. ನೀರು ಕುಡಿಯುವ ವ್ಯಕ್ತಿಗೆ ಈ ಅಂಶ ಅಗತ್ಯವಾಗಿ ಬೇಕು ಎಂದು ಹೇಳಿದರು.

    ಆ್ಯಸಿಡಿಕ್ ಪ್ರಮಾಣ ಹೆಚ್ಚು ಇದ್ದರೆ ಕ್ಯಾನ್ಸರ್‌ನಂತಹ ಅನೇಕ ಮಾರಕ ಕಾಯಿಲೆಗಳು ಬರುತ್ತವೆ. ಹಾಗಾಗಿಯೇ ಬಿಎಸ್‌ಐ ಪ್ರಮಾಣಿತ ಪಿಎಚ್-8 ಅಂಶವನ್ನು ಓಂಕಾರ್ 108 ಪ್ಲಸ್ ಹೊಂದಿದ್ದು, ನೀರು ಕುಡಿದ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ, ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ. 15 ಲೀಟರ್ ಕ್ಯಾನ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದರು.

    ಕ್ಷಾರೀಯ ಅಂಶವಿರುವ ನೀರನ್ನು ದೇಶದಲ್ಲಿಯೇ ಪ್ರಥಮವಾಗಿ ಸಿದ್ಧಪಡಿಸಿದ್ದು, ರಾಜ್ಯದ ವಿವಿಧ ತಾಲೂಕುಗಳಲ್ಲಿ ಓಂಕಾರ್ 108 ಪ್ಲಸ್ ನೀರು ಒದಗಿಸುವ ಮಳಿಗೆಗಳನ್ನು ತೆರೆಯಲಾಗುವುದು. ಮುಂದೆ ದೇಶದ ವಿವಿಧ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

    2003ರಲ್ಲಿ ಓಂಕಾರ್ ಬ್ರಾಂಡ್ ಮಾರುಕಟ್ಟೆಗೆ ಬಂದಿದೆ. ಈಗಾಗಲೆ ಓಂಕಾರ್, ಚೆಸ್, ಓಮೀ ಹಾಗೂ ಕೋಮಿನ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಸರು ಮಾಡಿವೆ. ಅಲ್ಲದೆ, ಆಹಾರ ಉತ್ಪನ್ನದಲ್ಲೂ ಮುಂಚೂಣಿಯಲ್ಲಿದೆ. ಸಂಕೇಶ್ವರ ಬಿವರೇಜಸ್ ಆರೋಗ್ಯಕರ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

    ನೀರಿನ ಉತ್ಪನ್ನಗಳ ಮೇಲೆ ಸದಾ ಕೆಮಿಕಲ್, ಮೈಕ್ರೋಬಯಾಲಜಿ ತಜ್ಞರ ಕಣ್ಗಾವಲಿದೆ. ಹೀಗಾಗಿ, ಉತ್ಪಾದನೆ ವೇಳೆ ಪ್ರತಿ ಹಂತದಲ್ಲೂ ಕಾಳಜಿ ವಹಿಸಲಾಗುತ್ತದೆ. ನೀರಿನ ಕ್ಯಾನ್‌ಗಳ ಸರಬರಾಜಿನ ಸಂದರ್ಭದಲ್ಲಿ ಕರೊನಾ ಸೋಂಕು ತಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ವಿವರಿಸಿದರು. ಉಪಾಧ್ಯಕ್ಷರಾದ ಸಂತೋಷ ಭಾವಿಕಟ್ಟಿ, ವಿಲಾಸ್ ಸೋಗಿಕರ್ ಸುದ್ದಿಗೋಷ್ಠಿಯಲ್ಲಿದ್ದರು.

    ಜೀವನಶೈಲಿ ಬದಲಾಗಬೇಕು…ವಿದೇಶಿ ವಸ್ತುಗಳನ್ನು ಯಾವ ಕಾರಣಕ್ಕೂ ಕೊಳ್ಳಬಾರದು: ಡಾ. ವಿಜಯ ಸಂಕೇಶ್ವರ

    ಕರೊನಾ ವೈರಸ್​ ಬಿಕ್ಕಟ್ಟನ್ನು ಪ್ರಧಾನಿ ಮೋದಿ ಉತ್ತಮವಾಗಿ ನಿಭಾಯಿಸಿದ್ದಾರೆ: ಡಾ. ವಿಜಯ ಸಂಕೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts