More

    ಒಮಿಕ್ರಾನ್ ಉಪತಳಿ ಹೆಚ್ಚು ಅಪಾಯಕಾರಿ; ಪಟನಾದಲ್ಲಿ ಬಿಎ.12 ಸೋಂಕು ಪತ್ತೆ

    ನವದೆಹಲಿ: ದೇಶದಲ್ಲಿ ಕರೊನಾ ಸಾಂಕ್ರಾಮಿಕತೆ ನಾಲ್ಕನೇ ಅಲೆಯ ಭೀತಿ ಎದುರಾಗಿರುವ ಬೆನ್ನಲ್ಲೇ ಬಿಹಾರ ರಾಜಧಾನಿ ಪಟನಾದಲ್ಲಿ ಗುರುವಾರ ಒಮಿಕ್ರಾನ್ ರೂಪಾಂತರಿಯ ಹೊಸ ಪ್ರಭೇದದ ಒಂದು ಪ್ರಕರಣ ಪತ್ತೆಯಾಗಿದೆ. ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಐಜಿಐಎಂಎಸ್) ಪತ್ತೆಯಾಗಿರುವ ಬಿಎ.12 ಪ್ರಭೇದವು ಮೂರನೇ ಅಲೆ ವೇಳೆ ಪತ್ತೆಯಾದ ಬಿಎ.2 ಉಪ-ತಳಿಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ದೆಹಲಿಯಲ್ಲಿ ಬಿಎ.12 ಪ್ರಭೇದದ ಮೂರು ಪ್ರಕರಣಗಳು ಪತ್ತೆಯಾಗಿದ್ದು ಈಗ ಪಟನಾದಲ್ಲೂ ಕಂಡು ಬಂದಿರುವುದು ಕಳವಳ ಮೂಡಿಸಿದೆ. ಪರೀಕ್ಷೆ ನಡೆಸಲಾದ 13 ಸ್ಯಾಂಪಲ್​ಗಳ ಪೈಕಿ ಒಂದರಲ್ಲಿ ಬಿಎ.12 ತಳಿ ಪತ್ತೆಯಾಗಿದೆ. ಉಳಿದ 13ರಲ್ಲಿ ಬಿಎ.2 ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ದೇಶದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಮಿಕ್ರಾನ್ ಪ್ರಭೇದದ ಸ್ಯಾಂಪಲ್​ಗಳ ಜಿನೋಮ್ ಸೀಕ್ವೆನ್ಸಿಂಗ್ ನಡೆಸಿದಾಗ ಮಾರಕ ಬಿಎ.12 ಉಪ-ತಳಿ ಕಂಡುಬಂದಿದೆ ಎಂದು ಐಜಿಐಎಂಎಸ್​ನ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆ ನಮೃತಾ ಕುಮಾರಿ ಹೇಳಿದ್ದಾರೆ. ‘ಬಿಎ.12 ಪ್ರಭೇದವು ಬಿಎ.2ಗಿಂತ ಹತ್ತು ಪಟ್ಟು ಅಧಿಕ ಅಪಾಯಕಾರಿಯಾಗಿದೆ. ಅದರಿಂದ ರಕ್ಷಣೆ ಪಡೆಯಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅಗತ್ಯ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

    ಮಂಗಳೂರು ರೌಡಿಶೀಟರ್ ಕಕ್ಕೆ ರಾಹುಲ್ ಬರ್ಬರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts