More

    ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

    ಕಲಬುರಗಿ: ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌.ಡಿ.ಪಾಟೀಲ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸಿಐಡಿ ವಶದಲ್ಲಿರುವ ಆರೋಪಿಗೆ ಖಾನಾವಳಿಯ ಊಟ ಹಿಡಿಸುತ್ತಿಲ್ಲ. ಮಾಂಸಾಹಾರ ಊಟ ಬೇಕೆಂದು ಪೊಲೀಸರ ಹತ್ತಿರ ಬೇಡಿಕೆ ಇಟ್ಟಿದ್ದಾನೆ. ಆದರೆ, ಪೊಲೀಸರು ಇದನ್ನು ಒಪ್ಪದೇ ಸಸ್ಯಹಾರಿ ಊಟವನ್ನೇ ನೀಡಿದ್ದು, ಡಿ ಹೈಡ್ರೇಟ್​ ಆಗಿ ವಾಂತಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಇದರಿಂದ ನಿತ್ರಾಣಗೊಂಡ ಪಾಟೀಲ್​ಗೆ ಪೊಲೀಸರೇ ಬಿಸಿನೀರು ಕುಡಿಸಿ, ಬಳಿಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವ್ರ ಹೊಟ್ಟೆ ನೋವು ಎಂದು ಹೇಳಿರುವ ಕಾರಣ ಪಾಟೀಲ್​ಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಲಾಗಿದೆ. ನಾಳೆ ಮಧ್ಯಾಹ್ನಕ್ಕೆ ವರದಿ ಬರಲಿದ್ದು, ಸಿಐಡಿ ತಂಡ ಇದಕ್ಕಾಗಿ ಕಾಯುತ್ತಿದೆ.

    ಮೇ 4 ರಿಂದ ಎಲ್‌ಐಸಿ ಷೇರು ಖರೀದಿಗೆ ಸಾರ್ವಜನಿಕರಿಗೆ ಅವಕಾಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts