ಮುಂಬೈ: ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್ ಲವರ್ಬಾಯ್ ಅವತಾರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಈ ಸಲ ರಗಡ್ ಅವತಾರದಲ್ಲಿ ಎದುರಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಓಂ ಶೀರ್ಷಿಕೆಯ ಹೊಸ ಸಿನಿಮಾ ಶುರುವಾಗಿದ್ದು, ಅದರ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿದೆ. ಆದರೆ, ಮೆಚ್ಚುಗೆಗಿಂತ ಕಾಪಿ ಎಂಬ ಪದವನ್ನೇ ಈ ಪೋಸ್ಟರ್ಗೆ ನೆಟ್ಟಿಗರು ಹೆಚ್ಚು ಬಳಸುತ್ತಿದ್ದಾರೆ.
ಇದನ್ನೂ ಓದಿ: ತಾಕತ್ತಿದ್ರೆ ನಮ್ಮಲ್ಲಿಗೆ ಬರಲಿ; ನಟಿ ಕಂಗನಾಗೆ ಚಾಲೆಂಜ್, ಅವರ ಸಿನಿಮಾಗಳಿಗೆ ಬಹಿಷ್ಕಾರ
ಕಪಿಲ್ ವರ್ಮಾ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾದಲ್ಲಿ ರಗಡ್ ಅವತಾರದಲ್ಲಿ ಆದಿತ್ಯಾ ಕಾಣಿಸಿಕೊಂಡಿದ್ದು, ಪೋಸ್ಟರ್ನಲ್ಲಿ ಗನ್ ಹಿಡಿದು ಗುಂಡಿನ ಮಳೆ ಸುರಿಸುವ ಆ್ಯಕ್ಷನ್ನಲ್ಲಿ ಎದುರಾಗಿದ್ದಾರೆ. ಅವರ ಆ ಲುಕ್ ಥೇಟ್ ಭಾಗಿ 3 ಚಿತ್ರದ ಪೋಸ್ಟರ್ ಅನ್ನೇ ಹೋಲುತ್ತಿರುವುದಕ್ಕೆ ನೆಟ್ಟಿಗರು ಪೋಸ್ಟರ್ ಬಗ್ಗೆ ಬಗೆ ಬಗೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
1st Poster.#OmTheBattleWithin
not Happy with This poster&Looks also not up-to the Mark. waiting for Aditya Action&Hope this film make public Happy.
Why???
U CAN MAKE BETTER POSTER, THIS POSTER REMEMBRING ME BAGHI3 POSTER, SAME TO SAME THE ONLY DIFFERENCE #FACE.#AdityaRoyKapur pic.twitter.com/UEnaZRInT2— Raj Malhotra( N.F ) (@RajMalhotraSing) December 4, 2020
ಪೋಸ್ಟರ್ನಿಂದ ಅಷ್ಟೇನೂ ಕುತೂಹಲ ಮೂಡಲಿಲ್ಲ. ನೋಡಲು ಭಾಗಿ 3 ಪೋಸ್ಟರ್ ರೀತಿಯಲ್ಲಿಯೇ ಇದೆ. ಮುಖ ಅಷ್ಟೇ ಬದಲಿ ಮಾಡಲಾಗಿದೆ. ಇನ್ನೂ ಬೇರೆ ರೀತಿಯಲ್ಲಿ ಮಾಡಬಹುದಿತ್ತು. ಹಾಗಾಗಿ ಸಿನಿಮಾದಲ್ಲಿನ ನಿಮ್ಮ ಆ್ಯಕ್ಷನ್ ನೋಡಲು ಕಾತರರಾಗಿದ್ದೇವೆ ಎಂಬ ಕಮೆಂಟ್ಗಳು ಬಂದಿವೆ. ಭಾಗಿ 3ಚಿತ್ರದಿಂದ ಸ್ಫೂರ್ತಿ ಪಡೆಯಲಾಗಿದೆ.
ಇದನ್ನೂ ಓದಿ: ಸಂಭಾವನೆ ಕಡಿಮೆ ಮಾಡಿಕೊಂಡ್ರು ಪೂಜಾ … ಯಾಕೆ?
ಜೀ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಾಣ ವಾಗುತ್ತಿರುವ ಈ ಚಿತ್ರಕ್ಕೆ ಅಹ್ಮದ್ ಖಾನ್, ಶೈರಾ ಖಾನ್ ಬಂಡವಾಳ ಹೂಡುತ್ತಿದ್ದಾರೆ. 2021ರ ಮಧ್ಯೆದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.