More

    ಒಲಿಂಪಿಕ್ಸ್‌ನಲ್ಲಿ ಇಂದು ಭಾರತಕ್ಕೆ ಏನೇನು ಸ್ಪರ್ಧೆ, ಯಾವ ಕ್ರೀಡೆಯಲ್ಲಿದೆ ಪದಕ ನಿರೀಕ್ಷೆ?

    ಟೋಕಿಯೊ: ಒಲಿಂಪಿಕ್ಸ್‌ನ 4ನೇ ದಿನವಾದ ಮಂಗಳವಾರ ಭಾರತದ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿರುವ ಮಿಶ್ರ ವಿಭಾಗದ ಸ್ಪರ್ಧೆ ಮಂಗಳವಾರ ನಡೆಯಲಿದ್ದು, ಟೋಕಿಯೊದಲ್ಲಿ 4ನೇ ದಿನವಾದರೂ ಶೂಟರ್‌ಗಳು ಪದಕ ಗೆದ್ದುಕೊಡುವ ನಿರೀಕ್ಷೆ ಇದೆ.

    ಇಂದು ಭಾರತದ ಕ್ರೀಡಾಸ್ಪರ್ಧೆಗಳು:

    ಶೂಟಿಂಗ್: ಬೆಳಗ್ಗೆ 5.30: ಮಿಶ್ರ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತು: ಮನು ಭಾಕರ್-ಸೌರಭ್ ಚೌಧರಿ, ಯಶಸ್ವಿನಿ ದೇಸ್ವಾಲ್-ಅಭಿಷೇಕ್ ಶರ್ಮ ಜೋಡಿ ಕಣಕ್ಕೆ, 8.07: ಫೈನಲ್; ಬೆಳಗ್ಗೆ 9.45: ಮಿಶ್ರ 10 ಮೀ. ಏರ್ ರೈಫಲ್ ಅರ್ಹತಾ ಸುತ್ತು: ದಿವ್ಯಾಂಶ್ ಸಿಂಗ್ ಪನ್ವರ್-ಇಲವೆನಿಲ್ ವಲರಿವನ್, ಅಂಜುಂ ಮೌಡ್ಗಿಲ್-ದೀಪಕ್ ಕುಮಾರ್ ಜೋಡಿ ಕಣಕ್ಕೆ, ಬೆಳಗ್ಗೆ 12.22: ಫೈನಲ್.

    ಬ್ಯಾಡ್ಮಿಂಟನ್: ಬೆಳಗ್ಗೆ 8.30: ಪುರುಷ ಡಬಲ್ಸ್ ಎ ಗುಂಪು: ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್‌ಗೆ ಬ್ರಿಟನ್‌ನ ವೆಂಡಿ-ಲೇನ್ ಎದುರಾಳಿ.

    ಬಾಕ್ಸಿಂಗ್: ಬೆಳಗ್ಗೆ 11.33: ಮಹಿಳೆಯರ 69 ಕೆಜಿ ವಿಭಾಗದ 16ರ ಘಟ್ಟ: ಲವ್ಲಿನಾ ಬೋರ್ಗೊಹೈನ್‌ಗೆ ಜರ್ಮನಿಯ ನಾಡಿನ್ ಅಲೆಟ್ಜ ಎದುರಾಳಿ.

    ಹಾಕಿ: ಬೆಳಗ್ಗೆ 6.30: ಪುರುಷರ ವಿಭಾಗದಲ್ಲಿ ಸ್ಪೇನ್ ಎದುರಾಳಿ (ಎ ಗುಂಪು).

    ಸೈಲಿಂಗ್: ಬೆಳಗ್ಗೆ 8.35: ಮಹಿಳೆಯರ ಲೇಸರ್ ರೇಡಿಯಲ್: 5-6ನೇ ರೇಸ್‌ನಲ್ಲಿ ನೇತ್ರಾ ಕುಮಾನನ್ ಸ್ಪರ್ಧೆ; ಬೆಳಗ್ಗೆ 8.45: ಪುರುಷರ ಲೇಸರ್ ವಿಭಾಗ: 4-5-6ನೇ ರೇಸ್‌ನಲ್ಲಿ ವಿಷ್ಣು ಸರವಣನ್ ಸ್ಪರ್ಧೆ; ಬೆಳಗ್ಗೆ 11.50: 49ಇಆರ್ ವಿಭಾಗ: 1-2-3ನೇ ರೇಸ್: ಕೆಸಿ ಗಣಪತಿ-ವರುಣ್ ಠಕ್ಕರ್ ಕಣಕ್ಕೆ.

    ಟೇಬಲ್ ಟೆನಿಸ್: ಬೆಳಗ್ಗೆ 8.30: ಪುರುಷರ ಸಿಂಗಲ್ಸ್: ಶರತ್ ಕಮಲ್‌ಗೆ 3ನೇ ಸುತ್ತಿನಲ್ಲಿ ಚೀನಾದ ಮಾ ಲಾಂಗ್ ಎದುರಾಳಿ.

    *ನೇರಪ್ರಸಾರ: ಸೋನಿ ಟೆನ್​ 2, 3, ಡಿಡಿ ಸ್ಪೋರ್ಟ್ಸ್​

    *22: ಕ್ರೀಡಾಸ್ಪರ್ಧೆಯ 4ನೇ ದಿನವಾದ ಮಂಗಳವಾರ ಒಟ್ಟು 22 ಸ್ವರ್ಣ ಪದಕಗಳು ಪಣಕ್ಕಿವೆ. ಈಜಿನಲ್ಲಿ 4, ರೋಯಿಂಗ್, ಜುಡೋ, ಶೂಟಿಂಗ್, ಟೇಕ್ವಾಂಡೊ, ವೇಟ್‌ಲಿಫ್ಟಿಂಗ್‌ನಲ್ಲಿ ತಲಾ 2, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಫೆನ್ಸಿಂಗ್, ಈಕ್ವೆಸ್ಟ್ರಿಯನ್, ಡೈವಿಂಗ್, ಮೌಂಟೇನ್ ಬೈಕಿಂಗ್, ಕನೋಯಿಂಗ್, ಸಾಫ್ಟ್​ಬಾಲ್, ಟ್ರಯಥ್ಲಾನ್‌ನಲ್ಲಿ ತಲಾ 1 ಚಿನ್ನದ ಪದಕ ನಿರ್ಧಾರವಾಗಲಿದೆ.

    ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts