More

    ದೂರದರ್ಶನದಲ್ಲಿ ಇಂದಿನಿಂದ ಟೋಕಿಯೊ ಒಲಿಂಪಿಕ್ಸ್​ ಕ್ರೀಡಾಪಟುಗಳ ಕಿರುಚಿತ್ರ ಪ್ರಸಾರ

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ಗೆ ದಿನಗಣನೆ ಆರಂಭಗೊಂಡಿದೆ. ಇನ್ನು 50 ದಿನಗಳಷ್ಟೇ ಬಾಕಿ ಉಳಿದಿವೆ. ಕೋವಿಡ್​-19ನಿಂದಾಗಿ ಕ್ರೀಡಾಕೂಟ ಮುಂದೂಡಿಕೆ, ರದ್ದುಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇತ್ತ ಭಾರತ ಕೂಡ ಒಲಿಂಪಿಕ್ಸ್​ಗೆ ಸರ್ವರೀತಿಯಲ್ಲೂ ಸಜ್ಜಾಗುತ್ತಿದೆ. ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಕ್ರೀಡಾಪಟುಗಳ ಕ್ರೀಡಾ ಜರ್ನಿ ಕುರಿತು ಕಿರುಚಿತ್ರ ನಿರ್ಮಾಣ ಮಾಡಿದ್ದು, ಪ್ರತಿದಿನ ದೂರದರ್ಶನದಲ್ಲಿ ಪ್ರಸಾರ ಮಾಡಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಗುರುವಾರದಿಂದ (ಜೂನ್​ 3) ಈ ಕಿರುಚಿತ್ರ ಪ್ರಸಾರವಾಗಲಿದೆ. ಒಲಿಂಪಿಕ್ಸ್​ ಕಿ ಆಶಾ ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

    ಇದನ್ನೂ ಓದಿ: ತಾಯಿ-ಅಕ್ಕನನ್ನು ಕಳೆದುಕೊಂಡು ಮನಸು ಚೂರಾಗಿದೆ ಎಂದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

    ಭಾರತೀಯ ಕ್ರೀಡಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ರೀಡಾಪಟುಗಳ ಕುರಿತು ಕಿರುಚಿತ್ರ ಪ್ರಸಾರವಾಗಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು, ಕ್ರೀಡಾಪಟುಗಳು ದೇಶದ ಆಸ್ತಿ, ದೇಶಕ್ಕಾಗಿ ಅವರ ವೈಯಕ್ತಿಕ ಜೀವನವನ್ನೇ ಬದಿಗಿಟ್ಟು ಶ್ರಮಹಾಕುತ್ತಿದ್ದಾರೆ. ಇಂಥ ಚಿತ್ರಗಳನ್ನು ನಿರ್ಮಿಸುವ ಮೂಲಕ ಅವರಿಗೆ ಮತ್ತಷ್ಟು ಉತ್ತೇಜನ ನೀಡಲಾಗುವುದು. ಇಡೀ ಯುವ ಸಮೂಹವೇ ಈ ಕಿರುಚಿತ್ರಗಳನ್ನು ವೀಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಐಪಿಎಲ್​ ಭಾಗ-2ಕ್ಕೆ ಆಗಮಿಸದಿದ್ದರೆ ವಿದೇಶಿ ಆಟಗಾರರಿಗೆ ಕಾದಿದೆ ಶಾಕ್​..!, 

    ಜೂನ್​ 3 ರಂದು ಪಿವಿ ಸಿಂಧು ಅವರ ಕಿರುಚಿತ್ರ ಪ್ರಸಾರಗೊಳ್ಳಲಿದೆ. 2016ರ ರಿಯೋ ಒಲಿಂಪಿಕ್ಸ್​ ನಲ್ಲಿ ಸಿಂಧು ಬೆಳ್ಳಿ ಪದಕ ಜಯಿಸಿದ್ದರು. ಇದಾದ ಬಳಿಕ ರೆಸ್ಲರ್​ ವಿನೇಶ್​ ಪೋಗಟ್​, ಜಾವಲೆನ್​ ಥ್ರೋಪಟು ನೀರಜ್​ ಚೋಪ್ರಾ, ಬಾಕ್ಸರ್​ ಎಂಸಿ ಮೇರಿ ಕೋಮ್​, ರೆಸ್ಲರ್​ ಭಜರಂಗ್​ ಪೂನಿಯಾ ಸೇರಿದಂತೆ ಇನ್ನಿತರ ಕ್ರೀಡಾಪಟುಗಳು ಕಿರುಚಿತ್ರ ಪ್ರಸಾರವಾಗಲಿದೆ.

    VIDEO: ತಂದೆ ಬರ್ತ್​ಡೇ ಪಾಟಿರ್ಯಲ್ಲಿ ಎಬಿ ಡಿವಿಲಿಯರ್ಸ್​ ಹಾಡಿದ ಹಾಡುಗಳಿಗೆ ಅಭಿಮಾನಿಗಳು ಫಿದಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts