More

    78 ವರ್ಷ ವಯಸ್ಸಾದರೂ ಕಡಿಮೆಯಾಗದ ಹುಮ್ಮಸ್ಸು! ಇಳಿವಯಸ್ಸಿನಲ್ಲಿ ಪಂಚಾಯಿತಿಗೆ ಆಯ್ಕೆಯಾದ ಲಕ್ಷ್ಮಮ್ಮ

    ಕೋಲಾರ: ಜಿಲ್ಲೆಯ 152 ಗ್ರಾಪಂಗಳ 2720 ಚುನಾಯಿತ ಸದಸ್ಯರ ಪೈಕಿ ಲಕ್ಷ್ಮಮ್ಮ (78 ವರ್ಷ) ಅತಿ ಹಿರಿಯ ಸದಸ್ಯೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

    ಕೋಲಾರ ತಾಲೂಕಿನ ಹೋಳೂರು ಗ್ರಾಪಂನ ಬ್ಲಾಕ್-1ರಲ್ಲಿ ಪ.ಜಾತಿ (ಮ) ಮೀಸಲಿನಲ್ಲಿ ಸ್ಪರ್ಧಿಸಿದ್ದ ಲಕ್ಷ್ಮಮ್ಮ (ಜೆಡಿಎಸ್ ಬೆಂಬಲಿತ) 420 ಮತ ಪಡೆದಿದ್ದಾರೆ. ಎದುರಾಳಿ ವೆಂಕಟಲಕ್ಷ್ಮಮ್ಮ 65 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಲಕ್ಷ್ಮಮ್ಮ ನಾಮಪತ್ರ ಸಲ್ಲಿಸುವಾಗ ಗ್ರಾಪಂಗೆ ಹೋಗಿದ್ದು ಬಿಟ್ಟರೆ ಪ್ರಚಾರಕ್ಕೂ ಹೋಗಿಲ್ಲ. ಇದೇ ಕ್ಷೇತ್ರದ ಗ್ರಾಪಂ ಮಾಜಿ ಸದಸ್ಯರೂ ಆಗಿರುವ ಪುತ್ರ ನಾರಾಯಣಸ್ವಾಮಿ ತಾಯಿ ಪರ ಮತಯಾಚಿಸಿದ್ದರು. ಮತ ಎಣಿಕೆ ದಿನವೂ ಮಗನ ಮೂಲಕ ಫಲಿತಾಂಶ ತಿಳಿದುಕೊಂಡಿದ್ದರು.

    ಗ್ರಾಪಂ ಪಿಡಿಒ ಎಸ್.ರಮೇಶ್ ಅವರಿಂದ ಶುಕ್ರವಾರ ಆಯ್ಕೆ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ನನ್ನ ಮಗ ಮಾಡಿರುವ ಅಭಿವೃದ್ಧಿ ಕಾರ್ಯ ನೋಡಿ ಜನ ನನಗೆ ವೋಟು ಹಾಕಿದ್ದಾರೆ. ನನಗೆ ವಯಸ್ಸಾಗಿರಬಹುದು. ಆದರೆ ಊರಿನಲ್ಲಿ ಆಗಬೇಕಾದ ಕೆಲಸ ಕಾರ್ಯ ಮಾಡಿಕೊಡುತ್ತೇನೆ ಎಂದು ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಹೋಳೂರು ಗ್ರಾಪಂ 20 ಸದಸ್ಯ ಬಲ ಹೊಂದಿದ್ದು, 13 ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.

    2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

    ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts