More

    ಗ್ರಾಪಂ ಎದುರು ವೃದ್ಧನಿಂದ ಪ್ರತಿಭಟನೆ

    ಅಕ್ಕಿಆಲೂರ: ನಮಗೆ ಸೇರಿದ ಆಸ್ತಿಯನ್ನು ಸ್ಥಳೀಯ ಗ್ರಾಪಂ ಅಕ್ರಮವಾಗಿ ಬೇರೆಯವರ ಹೆಸರಿಗೆ ನೋಂದಣಿ ಮಾಡಿದೆ ಎಂದು ಆರೋಪಿಸಿ 80 ವರ್ಷದ ವೃದ್ಧ ಮಲ್ಲಿಕಾರ್ಜುನ ಗೊಂದಿ ಹಾಗೂ ಕುಟುಂಬಸ್ಥರು ಗ್ರಾಪಂ ಕಾರ್ಯಲಯದ ಎದುರು ಪ್ರತಿಭಟನೆ ನಡೆಸಿದರು.

    ಪಟ್ಟಣದ ಮಾರುತಿ ನಗರದಲ್ಲಿನ ನನಗೆ ಸೇರಿದ 50*60 ಅಳತೆಯ ನಿವೇಶನದಲ್ಲಿರುವ ಮೂರು ಮನೆಗಳ ಆಸ್ತಿಯನ್ನು 2016ರಲ್ಲಿ ಸ್ಥಳೀಯ ಗ್ರಾಪಂ ಅಕ್ರಮವಾಗಿ ಕವಿತಾ ಮುರುಳೀಧರ ಜನಿವಾರ ಎಂಬುವರ ಹೆಸರಿಗೆ ವರ್ಗಾವಣೆ ಮಾಡಿದೆ. ಇದು ನಡೆದು 5 ವರ್ಷ ಕಳೆದರೂ ನನ್ನ ಗಮನಕ್ಕೆ ಬಂದಿರರಿಲ್ಲ. ಕಳೆದ ನವೆಂಬರ್ 9ರಂದು ಮನೆಯ ಕರಬಾಕಿ ತುಂಬಲು ಗ್ರಾಪಂಗೆ ಹೋದಾಗ ಅಕ್ರಮ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

    ಅಕ್ರಮವಾಗಿ ಆಸ್ತಿ ವರ್ಗಾವಣೆ ಮಾಡಿಸಿಕೊಂಡವರು, ಆಸ್ತಿಯ ಮೇಲೆ ಸ್ಥಳೀಯ ಖಾಸಗಿ ಬ್ಯಾಂಕ್ ಒಂದರಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದಾರೆ ಎನ್ನಲಾಗಿದೆ. ನನ್ನ ಸಹಿ ನಕಲು ಮಾಡಿ, ನಾನು ಬದುಕಿರುವಾಗಲೆ ನನಗೆ ಸೇರಿದ ಆಸ್ತಿಯನ್ನು ಬೇರೆಯವರ ಹೆಸರಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಗೊಂದಿ ಕುಟುಂಬಸ್ಥರು ಆರೋಪಿಸಿದರು.

    ನ್ಯಾಯಾಲಯ, ಕೇಸ್ ಅಂತ, ನನ್ನ ಆಸ್ತಿ ನನಗೆ ಸೇರದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕಾರಣರಾಗಿರುವ ಅಂದಿನ ಪಿಡಿಒ ಮತ್ತು ಅಧ್ಯಕ್ಷರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಮಲ್ಲಿಕಾರ್ಜುನ ಗೊಂದಿ, ಪತ್ನಿ ಶಾಂತಮ್ಮ ಗೊಂದಿ ಮತ್ತು ಪುತ್ರರಾದ ರೇಖಾ ಗೊಂದಿ ಹೊಳೆಬಸಪ್ಪ ಗೊಂದಿ ಒತ್ತಾಯಿಸಿದರು.

    2016ರಲ್ಲಿ ಬೇರೆಯವರ ಹೆಸರಿಗೆ ವರ್ಗಾವಣೆ ಆಗಿದೆ. ಹೇಗೆ ಆಗಿದೆ ನನಗೂ ಗೊತ್ತಿಲ್ಲ. ಆದರೆ, ವರ್ಗಾವಣೆಯಾಗಲು ಬೇಕಾದ ಅಗತ್ಯ ದಾಖಲೆ ಇವೆ. ಸದ್ಯ ಪ್ರಕರಣ ಕೋರ್ಟ್​ನಲ್ಲಿದ್ದು, ಅಲ್ಲಿ ಬಗೆಹರಿದರೆ, ಗ್ರಾಪಂನಲ್ಲಿ ಮತ್ತೆ ಅವರ ಹೆಸರಿಗೆ ಮೊದಲಿನಂತೆ ಮಾಡಿಕೊಡಬಹುದು.
    | ಪ್ರವೀಣಕುಮಾರ ಬಿಜ್ಜೂರ, ಅಕ್ಕಿಆಲೂರ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts