More

    ಸಿನಿಮೀಯ ಶೈಲಿಯಲ್ಲಿ ವೃದ್ಧನ ಅಪಹರಣ! ಬೆದರಿಸಿ ಆಸ್ತಿಪತ್ರಕ್ಕೆ ಸಹಿ ಪಡೆದರು!

    ಬೆಂಗಳೂರು : ಮನೆಯನ್ನು ಕಬಳಿಸುವ ಉದ್ದೇಶದಿಂದ ಸಿನಿಮೀಯ ಶೈಲಿಯಲ್ಲಿ 87 ವರ್ಷದ ವೃದ್ಧನನ್ನು ಅಪಹರಿಸಿದ ದುಷ್ಕರ್ಮಿಗಳು, ಬಲವಂತವಾಗಿ ಸಹಿ ಮಾಡಿಸಿ ಆಸ್ತಿಯನ್ನು ಬೇರೆಯವರ ಹೆಸರಿಗೆ ನೋಂದಣಿ ಮಾಡಿಸಲು ಯತ್ನಿಸಿದ್ದಾರೆ. ಅಪಹರಣಕ್ಕೊಳಗಾದ ಮಲ್ಲತ್ತಹಳ್ಳಿಯ ನಿವಾಸಿ ರಾಘವ ರಾವ್ (87) ಕೊಟ್ಟ ದೂರಿನ ಆಧಾರದ ಮೇಲೆ ಜ್ಞಾನಭಾರತಿ ಪೊಲೀಸರು, ಪ್ರಭು ಮತ್ತು ಇತರರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

    ಮಲ್ಲತ್ತಹಳ್ಳಿ ರೈಲ್ವೆ ಲೇಔಟ್ ಭವಾನಿ ನಗರದಲ್ಲಿ ಹೊಂದಿದ್ದ ಸ್ವಂತ ಮನೆಯಲ್ಲಿ ರಾಘವ್ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಪಿಂಚಣಿ ಹಣದಲ್ಲಿ ಜೀವನ ನಿರ್ವಹಿಸುತ್ತಿದ್ದರು. ಮೈಸೂರಿನಲ್ಲಿದ್ದ ಇವರ ಮಗಳು ಆಗಾಗ ಬಂದು ಕುಶಲೋಪರಿ ವಿಚಾರಿಸಿ ಹೋಗುತ್ತಿದ್ದರು. ಲಾಕ್‌ಡೌನ್ ಜಾರಿಯಾದ ಬಳಿಕ ಇವರ ಮನೆಗೆ ಯಾರೂ ಅಷ್ಟಾಗಿ ಬರುತ್ತಿರಲಿಲ್ಲ.

    ಇದನ್ನೂ ಓದಿ: ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ಇದನ್ನು ಅರಿತ ಪ್ರಮುಖ ಆರೋಪಿ ಏ.6 ರಂದು ಬೆಳಗ್ಗೆ ಸಹಚರರ ಜತೆ ಅಕ್ರಮವಾಗಿ ಮನೆಗೆ ಪ್ರವೇಶಿಸಿ, ಪ್ರಭು ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ. ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದಾಗ ಏಕಾಏಕಿ ನಾಲ್ವರು ರಾಘವ್ ಅವರನ್ನು ಬಿಗಿಯಾಗಿ ಹಿಡಿದುಕೊಂಡು ಬೀರುವನ್ನು ಒಡೆದು ಅದರೊಳಗಿದ್ದ ಆಸ್ತಿಗೆ ಸಂಬಂಧಿಸಿದ ದಾಖಲೆ ಹಾಗೂ ಬ್ಯಾಂಕ್ ಪಾಸ್ ಬುಕ್‌ಗಳನ್ನು ತೆಗೆದುಕೊಂಡಿದ್ದಾರೆ. ನಂತರ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಊರುಗಳಿಗೆ ಸುತ್ತಾಡಿಸಿದ್ದರು.

    ಬೆಳಗ್ಗೆ ಯಾವುದೋ ವೃದ್ಧಾಶ್ರಮದಲ್ಲಿ ಇಟ್ಟು ರಾತ್ರಿ ಹೊತ್ತು ಕಾರಿನಲ್ಲಿ ಸುತ್ತಾಡಿಸುತ್ತಿದ್ದರು. ಪ್ರಭು ಸಹಚರನೋರ್ವ ಏ.19 ರಂದು ವೃದ್ಧಾಶ್ರಮದಿಂದ ನಾಗರಭಾವಿಯಲ್ಲಿರುವ ಕೆನರಾ ಬ್ಯಾಂಕ್‌ಗೆ ಕರೆದೊಯ್ದು 20 ಸಾವಿರ ರೂ. ಡ್ರಾ ಮಾಡಿಕೊಂಡಿದ್ದ. ನಂತರ ರಾಜಾಜಿನಗರದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ, ‘ನಾವು ಹೇಳಿದಲ್ಲಿ ಸಹಿ ಹಾಕಬೇಕು. ಇಲದ್ಲಿದ್ದರೆ ನಿಮ್ಮನ್ನು ಅಲ್ಲೇ ಸಾಯಿಸಿ ಬಿಡುವುದಾಗಿ’ ಜೀವ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ ರಾಘವ್ ಆರೋಪಿಗಳು ಹೇಳಿದ ಪತ್ರಗಳಿಗೆ ಸಹಿ ಹಾಕಿದ್ದರು. ಆಗಾಗ್ಗೆ ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಹಣ ಡ್ರಾ ಮಾಡಿಸುತ್ತಿದ್ದರು. ಈ ನಡುವೆ ತಂದೆ ಕಾಣೆಯಾಗಿರುವ ಬಗ್ಗೆ ಜು.5 ರಂದು ರಾಘವ ಅವರ ಮಗಳು ಜ್ಞಾನ ಭಾರತೀ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಿಸಲು ಸಜ್ಜಾಯ್ತು ಈ ರಾಜ್ಯ! 2026 ರೊಳಗೆ ಜನನ ದರ ಇಳಿಸುವ ಗುರಿ

    ಆರೋಪಿಯ ಹುಡುಕಾಟ: ಕತ್ತಲೆ ಸಮಯದಲ್ಲಿ ಕಾರಲ್ಲಿ ಸುತ್ತಾಡುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ಕಣ್ಣು ದೃಷ್ಟಿ ಸಮಸ್ಯೆಯಿದ್ದ ಕಾರಣ ಎಲ್ಲೆಲ್ಲಿ ಸುತ್ತಾಡಿಸುತ್ತಿದ್ದರು ಎಂಬುದು ಗೊತ್ತಾಗುತ್ತಿರಲಿಲ್ಲ. ಪ್ರಭು ಅಕ್ರಮವಾಗಿ ತಮ್ಮ ಆಸ್ತಿಯನ್ನು ಬೇರೆಯವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುವ ಕ್ರಯ ಪತ್ರ ರದ್ದು ಮಾಡಬೇಕು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ರಾಘವ ರಾವ್ ಹೇಳಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದ್ದು, ಪ್ರಮುಖ ಆರೋಪಿ ಪ್ರಭುವಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆತ ಸಿಕ್ಕ ಬಳಿಕ ನಿಜಾಂಶ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ತಾಲಿಬಾನ್​ ಆತಂಕ: ಕಂದಹಾರ್​ನ ಭಾರತೀಯ ದೂತಾವಾಸ ತೆರವು

    ವಿಶ್ವವಿಖ್ಯಾತ ದೊಡ್ಡ ಆಲದ ಮರ ವೀಕ್ಷಣೆಗೆ ಪ್ರವಾಸಿಗರ ದಂಡು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts