More

    ಹತ್ತು ದಿನಗಳಾದರೂ ನಂದೇ ಇಲ್ಲ ಅನಿಲ ಬಾವಿಗೆ ಹೊತ್ತಿದ ಬೆಂಕಿ; ಜಾಗತಿಕ ತಜ್ಞರ ನೆರವು

    ನವದೆಹಲಿ: ಭಾರತ ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಬಹುತೇಕ ವಿದೇಶವನ್ನೇ ಅವಲಂಭಿಸಿದೆ. ಅದರಲ್ಲೂ ಹೆಚ್ಚಿನ ಪಾಲು ಕೊಲ್ಲಿ ರಾಷ್ಟ್ರಗಳಿಂದಲೇ ಬರುತ್ತೆ. ಸೀಮಿತವಾಗಿರುವ ಪಳೆಯುಳಿಕೆ ಇಂಧನ ಲಭ್ಯತೆ ನಮ್ಮ ದೇಶದಲ್ಲಿ ಅಷ್ಟಾಗಿಲ್ಲ. ಅದರಲ್ಲೂ ಇರುವುದನ್ನು ಉಳಿಸಿಕೊಳ್ಳುವುದೀಗ ಸವಾಲಾಗಿ ಪರಿಣಮಿಸಿದೆ.

    ಕಳೆದ 20 ದಿನಗಳಿಂದ ಸೋರಿಕೆಯಾಗುತ್ತಿದ್ದ ಅಸ್ಸಾಂ ಬಾಗ್​ಜಾನ್​ ನೈಸರ್ಗಿಕ ಅನಿಲ ಬಾವಿಗೆ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಆರಿಲ್ಲ. ಒಂದು ವಾರದಲ್ಲಿ ಬೆಂಕಿಯನ್ನು ನಿಯಂತ್ರಿಸುವ ವಿಶ್ವಾಸ ವ್ಯಕ್ತಪಡಿಸಿದ ಸರ್ಕಾರಕ್ಕೀಗ ದೊಡ್ಡ ತಲೆನೋವು ಎದುರಾಗಿದೆ.

    ಇದನ್ನೂ ಓದಿ; ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ; ನಿಗೂಢವಾಗುತ್ತಿದೆ ಆತ್ಮಹತ್ಯೆ ಕಾರಣ

    ಆಯಿಲ್​ ಇಂಡಿಯಾ ಲಿಮಿಟೆಡ್​ ಅಧೀನದಲ್ಲಿರುವ ಅನಿಲ ಬಾವಿಯ ಬೆಂಕಿ ನಂದಿಸಲು ಅಸ್ಸಾಂ ಹಾಗೂ ಕೇಂದ್ರ ಸರ್ಕಾರಗಳು ಜಾಗತಿಕ ಪರಿಣತರ ಮೊರೆ ಹೋಗಿವೆ. ಆದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

    ಬೆಂಕಿಯ ಕೆನ್ನಾಲಿಗೆ ಆಗಸಕ್ಕೆ ಚಾಚಿದ್ದು, ಹತ್ತಾರು ಕಿ.ಮೀ ದೂರದಿಂದಲೂ ಗೋಚರಿಸುತ್ತದೆ. ಬೆಂಕಿಯಿಂದಾಗಿ ಸುತ್ತಲಿನ ಪ್ರದೇಶದಲ್ಲಿ 50 ಮನೆಗಳು, ಕಟ್ಟಡಗಳು, ಚಹಾ ತೋಟಗಳು, ಮರಗಳು, ಬೆಂಕಿಯ ಝಳಕ್ಕೆ ನಾಶವಾಗಿವೆ. ರಕ್ಷಣಾ ಕಾಯಾಚರಣೆಯಲ್ಲಿ ಇಬ್ಬರು ಅಗ್ನಿಶಾಮಕ ಯೋಧರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

    ಇದನ್ನೂ ಓದಿ; ದೆಹಲಿ ಗಲಭೆಯಲ್ಲಿ ಝಾಕೀರ್​ ನಾಯ್ಕ್​ ಕೈವಾಡ…? ಭಾರತಕ್ಕೆ ಒಪ್ಪಿಸಲು ಮಲೇಷ್ಯಾಗೆ ಒತ್ತಡ

    ಸುತ್ತಲಿನ ಹಳ್ಳಿಗಳ 1600ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬೆಂಕಿಯಿಂದಾಗಿ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಕಿ ನಂದಿಸಲು 30 ದಿನಗಳಾದರೂ ಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ.

    ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts