More

    ಹಾಡಿಗೆ ಅಧಿಕಾರಿಗಳ ಭರ್ಜರಿ ಕುಣಿತ

    ಶಹಾಬಾದ್: ತಾಲೂಕ ಆಡಳಿತದಿಂದ ಬುಧವಾರ ಹಮ್ಮಕೊಂಡಿದ್ದ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ತಹಸೀಲ್ದಾರ್, ತಾಪಂ ಇಒ, ಕಸಾಪ ತಾಲೂಕು ಅಧ್ಯಕ್ಷ ಸೇರಿ ಎಲ್ಲರೂ ಕನ್ನಡ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

    ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಹಸೀಲ್ದಾರ್ ಗುರುರಾಜ ಸಂಗಾವಿ ಮೆರವಣಿಗೆಗೆ ಚಾಲನೆ ನೀಡಿದರು. ರೈಲು ನಿಲ್ದಾಣ, ಭಾರತ ಚೌಕ್, ಸರ್ದಾರ್ ವಲ್ಲಭಭಾಯಿ ಪಟೇಲ್ ಚೌಕ್, ಸುಭಾಷ ಚೌಕ್, ಶಾಸ್ತಿç ಚೌಕ್ ಸೇರಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಮಾರ್ಗ ಮಧ್ಯದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಎಲ್ಲ ಅಧಿಕಾರಿಗಳು ಕುಣಿದು ಸಂಭ್ರಮಿಸಿದರು.

    ತಾಪಂ ಇಒ ಮಲ್ಲಿನಾಥ ರಾವೂರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಕೆಂಬಾವಿ, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ, ಶಿಶು ಅಭಿವೃದ್ಧಿ ಅಧಿಕಾರಿ ಡಾ.ವಿಜಯಲಕ್ಷ್ಮೀ ಹೇರೂರ, ಪ್ರೌರಾಯುಕ್ತೆ ಪಂಕಜಾ ಆಂಜನೇಯ, ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಯಲ್ಲಪ್ಪ, ಜೆಸ್ಕಾಂ ಇಎಎ ಯೂನೂಸ್, ಪ್ರಮುಖರಾದ ಕನಕಪ್ಪ ದಂಡಗುಲಕರ್, ಅಣವೀರ ಇಂಗಿನಶೆಟ್ಟಿ, ಸೂರ್ಯಕಾಂತ ಕೋಬಾಳ, ಶಿವರಾಜ ಕೋರೆ, ನಾಗಪ್ಪ ಬೆಳಮಗಿ, ಶರಣು ಪಗಲಾಪುರ, ಚನ್ನಬಸಪ್ಪ ಕೊಲ್ಲೂರ, ನಿಂಗಣ್ಣ ಹುಳಗೋಳ, ಶರಣು ವಸ್ತçದ, ಕೆ.ರಮೇಶ ಭಟ್ಟ, ವಿಶ್ವನಾಥ ಫಿರೋಜಾಬಾದ್ ಇತರರಿದ್ದರು. ಬನ್ನಪ್ಪ ಸೈದಾಪುರ ನಿರೂಪಣೆ ಮಾಡಿದರು. ಜಗನ್ನಾಥ ಹೊಸ್ಮನಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts