More

    ನಿವೃತ್ತಿ ವೇತನ ಬಿಡುಗಡೆಗೆ ಲಂಚ ಕೇಳಿದ ಅಧಿಕಾರಿ ಅಮಾನತು

    ಬೆಂಗಳೂರು: ಪರಿಷ್ಕೃತಗೊಂಡ ಪಿಂಚಣಿಯ ಬಾಕಿ ಮೊತ್ತ ಬಿಡುಗಡೆಗೆ 50 ಸಾವಿರ ಲಂಚ ಕೇಳಿದ್ದ ಬೆಸ್ಕಾಂ ಕೆಂಗೇರಿ ವಿಭಾಗದ ಲೆಕ್ಕಾಧಿಕಾರಿ ಗಿರೀಶ್ ಅವರನ್ನು ಅಮಾನತು ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಶೇಷಾದ್ರಿಪುರದ ಶಿರೂರು ಆಟದ ಮೈದಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ನಾಗರಿಕರ ಅಹವಾಲು ಆಲಿಸುವ ವೇಳೆ ವ್ಯಕ್ತಿಯೊಬ್ಬರು ತಮ್ಮ ಅಳಲು ವ್ಯಕ್ತಪಡಿಸಿದ್ದನ್ನು ಆಧರಿ ಡಿಸಿಎಂ ಅವರು ಲಂಚ ಪಡೆದ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಿದರು.

    ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸಿ 2007ರಲ್ಲಿ ನಿವೃತ್ತಿ ಹೊಂದಿದ್ದೇನೆ. 15 ವರ್ಷಗಳಿಂದ ಅಲೆದರೂ ಪರಿಹಾರ ಸಿಕ್ಕಿಲ್ಲ ಎಂದು ಎಸ್.ಎಂ. ಗೋವಿಂದಪ್ಪ ಡಿಸಿಎಂ ಬಳಿ ಸಮಸ್ಯೆ ಹೇಳಿಕೊಂಡರು. ತಕ್ಷಣವೇ ಬೆಸ್ಕಾಂ ಹಿರಿಯ ಅಧಿಕಾರಿಗಳನ್ನು ಕರೆದು ಲಂಚ ಪಡೆದಾತನನ್ನು ಅಮಾನತು ಮಾಡಿ ಶೀಘ್ರವೇ ನಿವೃತ್ತಿ ವೇತನ ಬಿಡಿಗಡೆಗೆ ಸೂಚಿಸಿದರು. ಇದಕ್ಕೆ ಗೋವಿಂದಪ್ಪ ಅವರು ಡಿಸಿಎಂಗೆ ಧನ್ಯವಾದ ಹೇಳಿದರು.

    ಕಾರ್ಯಕ್ರಮದಲ್ಲಿ ಖಾತಾ ಬದಲಾವಣೆ, ಸೂರಿನ ಸೌಲಭ್ಯ, ಗೃಹಲಕ್ಷ್ಮೀ ಯೋಜನೆಗೆ ಹೆಸರು ಸೇರ್ಪಡೆಗೆ ಅಡ್ಡಿ, ರೇಷನ್ ಕಾರ್ಡ್, ಜಲಮಂಡಲಿ ಬಿಲ್ ಸಮಸ್ಯೆ, ಸ್ಲಮ್ ಬೋರ್ಡ್‌ನಿಂದ ಬಸವರಿಗೆ ಮನೆಗಳ ಹಂಚಿಕೆ ಸೇರಿ ಇತ್ಯಾದಿ ದೂರುಗಳು ಸಲ್ಲಿಕೆಯಾದವು. ಸುಮಾರು 3,000ಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts