More

    ಅಧಿಕೃತ ಶಾಲೆ ಪ್ರಕಟಿಸಿ, ಅನಧಿಕೃತ ಶಾಲೆ ಮರೆತ ಸರ್ಕಾರ

    ಬೆಂಗಳೂರು ಪ್ರತಿ ವರ್ಷ ರಾಜ್ಯದ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಿ ಇಂತಹ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಡಿ ಎಂದು ನಿರ್ದೇಶನ ನೀಡುತ್ತಿದ್ದ ಶಿಕ್ಷಣ ಇಲಾಖೆ, ಈ ಬಾರಿ ಅಧಿಕೃತ ಶಾಲೆಗಳ ಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಅನಧಿಕೃತ ಶಾಲೆಗಳನ್ನು ಪ್ರಕಟಿಸದೆ, ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ.

    ಈಗಾಗಲೇ ಖಾಸಗಿ ಶಾಲೆಗಳು 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳನ್ನು ಆರಂಭಿಸಿವೆ. ಈಗ ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದೆ. ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಾರ ಏ.25ರಂದೇ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಬೇಕಿತ್ತು. ಒಂದು ತಿಂಗಳು ತಡವಾಗಿಯಾದರೂ ಅನಧಿಕೃತ ಶಾಲೆಗಳ ಪಟ್ಟಿಯನ್ಜು ಪ್ರಕಟಿಸುವ ಧೈರ್ಯವನ್ನು ಶಿಕ್ಷಣ ಇಲಾಖೆ ತೋರಿಸಿಲ್ಲ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಮೂಲಕ ಖಾಸಗಿ ಅನಧಿಕೃತ ಶಾಲೆಗಳ ಮುಂದುವರಿಸುವಂತೆ ಪರೋಕ್ಷವಾಗಿ ಬೆಂಬಲ ಸೂಚಿಸಿದೆ. ಒಂದು ವೇಳೆ ಅನಧಿಕೃತವೆಂದು ೋಷಿಸಿದರೆ, ಸಂಬಂಧಪಟ್ಟ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಯಾಗುವುದಿಲ್ಲ ಎಂಬ ಲೆಕ್ಕಾಚಾರದ ಮೇಲೆ ಅಧಿಕೃತ ಶಾಲೆಗಳ ಪಟ್ಟಿಯನ್ನು ಮಾತ್ರ ಪ್ರಕಟಿಸಿದೆ ಎಂಬುದು ಪಾಲಕರ ಆರೋಪವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts