More

    VIDEO ] ಹಾವಿನ ರಕ್ಷಣೆಗೂ ಹರಸಾಹಸಪಡಬೇಕು ನೋಡಿ…!

    ಅರಣ್ಯ ರಕ್ಷಕರು ಕೇವಲ ಹುಲಿ, ಸಿಂಹ, ಆನೆಗಳ ದಾಳಿ ಬಗ್ಗೆ ಎಚ್ಚರವಹಿಸುವುದು ಮಾತ್ರವಲ್ಲ, ಎಲ್ಲೆಂದರಲ್ಲಿ ಕಾಣುವ ಅಪಾಯಕಾರಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲೂ ಹರಸಾಹಸ ಪಡಬೇಕು. ಹಾವುಗಳೊಂದಿಗೆ ಸೆಣಸಾಡಿ ಸಂರಕ್ಷಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸ್ವಲ್ಪ ಅಲಕ್ಷ್ಯವಹಿಸಿದರೂ ಅವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇಷ್ಟೆಲ್ಲ ಅಪಾಯಗಳಿದ್ದರೂ ಹಲವು ಅರಣ್ಯಗಳಲ್ಲಿ ಸಿಬ್ಬಂದಿ ಸುರಕ್ಷತಾ ಪರಿಕರಗಳ ಕೊರತೆಯ ನಡುವೆಯೂ ವನ್ಯಜೀವಿಗಳನ್ನು ಉಪಾಯದಿಂದ ರಕ್ಷಿಸಬೇಕಾದ ಅನಿವಾರ್ಯತೆ ಇರುತ್ತದೆ.
    ಇಲ್ಲಿಯೂ ಅಂಥದ್ದೊಂದು ದೃಶ್ಯಾವಳಿ ಇದೆ ನೋಡಿ…

    ಗೋವಾ ಅರಣ್ಯ ಅಧಿಕಾರಿ ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಕೇವಲ ಒಂದು ಕೋಲಿನ ಸಹಾಯದಿಂದ ಹಾವನ್ನು ಹಿಡಿದು ರಕ್ಷಿಸಿದ್ದಾರೆ, ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಹಾವು ಕಚ್ಚುವ ಅಪಾಯವೇ ಇತ್ತು.
    ಇದು ನಡೆದದ್ದು ಗೋವಾದ ಕೋಟಿಗಾವೊ ಅಭಯಾರಣ್ಯದಲ್ಲಿ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಶೈಲೇಂದ್ರ ಸಿಂಗ್ ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
    ಎರಡು ನಿಮಿಷಗಳ ಈ ವಿಡಿಯೋದಲ್ಲಿ ಕಟ್ಟಡವೊಂದರ ಛಾವಣಿಯ ಹೆಂಚಿನ ಮಧ್ಯೆ ಅವಿತಿರುವ ಹಾವನ್ನು ಹುಡುಕಲು ಅರಣ್ಯ ಸಿಬ್ಬಂದಿ ಆ ಹೆಂಚನ್ನು ತೆಗೆದು ನಂತರ ಕೋಲಿನ ಸಹಾಯದಿಂದ ಉಪಾಯವಾಗಿ ಹಾವಿನ ಬಾಲ ಹಿಡಿದಿದ್ದಾರೆ. ಬಾಲ ಹಿಡಿದರೆ ಹಾವು ರೊಚ್ಚಿಗೇಳುವುದು ಸಹಜ. ಅಪಾಯಕಾರಿ ಎನಿಸಿದರೂ ಈ ಸಂದರ್ಭದಲ್ಲಿ ಅವರು ಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿ ಹಿಡಿದು ಚೀಲದಲ್ಲಿ ಹಾಕಿದ್ದಾರೆ.

    ಇದನ್ನೂ ಓದಿ: ಉದ್ಯಮಶೀಲತೆ ಅಭಿವೃದ್ಧಿಯತ್ತ ಸಾಗುತ್ತಿದೆ ಉತ್ತರ ಪ್ರದೇಶ

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಐಎಫ್​​ಎಸ್ ಅಧಿಕಾರಿ ಶೈಲೇಂದ್ರ ಸಿಂಗ್, “ಗೋವಾದ ಕೋಟಿಗಾವೊ ವನ್ಯಜೀವಿ ಅಭಯಾರಣ್ಯದಲ್ಲಿ ಅರಣ್ಯ ಅಧಿಕಾರಿಗಳು ಹಾವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಹುಲಿ, ಚಿರತೆ ಅಥವಾ ಆನೆಯ ರಕ್ಷಣೆಯನ್ನಷ್ಟೇ ಅಲ್ಲ, ಹಾವುಗಳ ಸಂರಕ್ಷಣೆಗೂ ಹರಸಾಹಸ ಪಡಬೇಕು” ಎಂದು ವಿವರಿಸಿದ್ದಾರೆ.
    ವಿಡಿಯೋವನ್ನು ನೋಡಿದ ಹಲವು ನೆಟ್ಟಿಗರು ಅಧಿಕಾರಿಯ ಧೈರ್ಯವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ 30,000 ಬಾರಿ ವೀಕ್ಷಣೆಗೆ ಒಳಪಟ್ಟಿದೆ.

    36 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸಾಗಿಸಲು ಸಜ್ಜಾಗಿದೆ ರೈಲ್ವೆ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts