More

    ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಆದಿವಾಸಿಗಳ ಕಡೆಗಣನೆ

    ಬಾಳೆಹೊನ್ನೂರು: ನೂರಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಹಸಲರನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ ಎಂದು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್ ಆರೋಪಿಸಿದರು.

    ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದಿರುವ ಶೋಷಿತ ವರ್ಗ ಹಸಲರ ಸಮುದಾಯಕ್ಕೆ ಸರ್ಕಾರಿ, ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನಗಳಿಲ್ಲ. ಜಿಲ್ಲೆಯಲ್ಲಿ 22 ಸಾವಿರಕ್ಕೂ ಹೆಚ್ಚು ಸಮುದಾಯದ ಜನರಿದ್ದಾರೆ. ಬಹುತೇಕರು ಬೇರೆಯವರ ಹಂಗಿನಲ್ಲಿ ಬದುಕಿದ್ದಾರೆ ಎಂದರು.

    ಹಕ್ಕುಪತ್ರ, ದಾಖಲೆ, ವಸತಿ ಸೌಲಭ್ಯಕ್ಕಾಗಿ ಅನೇಕ ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ವಿಲೇವಾರಿ ಮಾಡದೇ ನಿರ್ಲಕ್ಷಿಸಲಾಗುತ್ತಿದೆ. ಮೀಸಲಾತಿ ಅನುದಾನದಲ್ಲೂ ಸಾಲ ಸೌಲಭ್ಯ, ಅಭಿವೃದ್ಧಿ ಯೋಜನೆಗಳು ಕನಸಿನ ಮಾತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಲ್ಯಾಂಪ್ ಸೊಸೈಟಿ ಉಪಾಧ್ಯಕ್ಷ ಕೆಂಪಣ್ಣ ಮಾತನಾಡಿ, ಪಜಾ, ಪ.ಪಂಗಡಕ್ಕಿರುವ ಮೀಸಲಾತಿ ಉಳ್ಳವರ ಪಾಲಾಗುತ್ತಿದೆ. ನೇರ ಸಾಲ ಸೇರಿ ವಿವಿಧ ಸೌಲಭ್ಯಗಳು ನಮ್ಮ ಸಮುದಾಯಕ್ಕೆ ಸಿಗದಿರುವುದು ವಿಷಾದನೀಯ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts