More

    ಮೂವರು ಪತ್ನಿಯರು ಮತ್ತು ಮೂರು ಅಸ್ಥಿಪಂಜರ! ನಿಗೂಢ ಪ್ರಕರಣ ಬೆನ್ನತ್ತಿ ಹೋದ ಪೊಲೀಸರು ಬೆಚ್ಚಿಬಿದ್ದಿದ್ದೇಕೆ?

    ಚಂಡೀಗಢ: ಮೂವರು ಮಹಿಳೆಯರನ್ನು ನಂಬಿಸಿ ಮದುವೆಯಾಗಿ ವಂಚಿಸಿದ ಆರೋಪದ ಮೇಲೆ ಹರಿಯಾಣ ಪಾಣಿಪತ್​ ಪೊಲೀಸರು ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.

    ಬಂಧಿತನನ್ನು ಅಶನ್​ ಸೈಫಿ ಎಂದು ಗುರುತಿಸಲಾಗಿದೆ. ಮದುವೆಯಾಗಿ ವಂಚಿಸಿರುವುದು ಗೊತ್ತಾದ ಬೆನ್ನಲ್ಲೇ ಎರಡನೇ ಪತ್ನಿ, ಮಗ ಮತ್ತು ಆತನ ಸಂಬಂಧಿಕರನ್ನು ಕೊಲೆ ಮಾಡಿರುವ ಆರೋಪ ಅಶಬ್​ ಮೇಲಿದೆ.

    ಅಶನ್​ ಬಂಧಿಸಿದ ಬೆನ್ನಲ್ಲೇ ಪಾಣಿಪತ್​ನ ಶಿವ್​ ನಗರ್​ ಏರಿಯಾದಲ್ಲಿ ಮಂಗಳವಾರ ಪತ್ತೆಯಾದ ಮೂರು ಅಸ್ಥಿಪಂಜರಗಳ ಅಂತಾರಾಜ್ಯ ನಿಗೂಢ ಪ್ರಕರಣವನ್ನು ಬಗೆಹರಿಸಿರುವುದಾಗಿ ಪಾಣಿಪತ್​ ಪೊಲೀಸರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿರಿ: ಕರ್ನಾಟಕದ ಬೈಕ್​ ಸವಾರನನ್ನು ತಡೆದ ತಮಿಳುನಾಡು ಪೊಲೀಸ್​: ಕಾರಣ ಗೊತ್ತಾದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಾ!

    ಏನಿದು ಮೂರು ಅಸ್ಥಿಪಂಜರಗಳ ಘಟನೆ?
    ಸರೋಜ್​ ಹೆಸರಿನ ಮಹಿಳೆ ಮಂಗಳವಾರ ತನ್ನ ಮನೆಯ ನವೀಕರಣ ಕೆಲಸ ಮಾಡುವಾಗ ಕೋಣೆಯೊಂದರಲ್ಲಿ ಮೂರು ಅಸ್ಥಿಪಂಜರಗಳು ಹೂತಿರುವುದು ಪತ್ತೆಯಾಗುತ್ತದೆ. ಆ ಮನೆಯನ್ನು 2017ರಲ್ಲಿ ಮಹಿಳೆ, ಸುಗರ್​ ಮಿಲ್​ನಲ್ಲಿ ಕೆಲಸ ಮಾಡುವ ಪವನ್​ ಎಂಬುವರಿಂದ ಖರಿದೀಸಿರುತ್ತಾರೆ.

    ಪವನ್​ ಎಂಬುವರು ಅಶನ್​ ಸೈಫಿ ಎಂಬುವರಿಂದ ಖರೀದಿಸಿರುವುದು ಪೊಲೀಸ್​ ತನಿಖೆಯಿಂದ ತಿಳಿಯುತ್ತದೆ. ಅಶನ್​ ಬೆನ್ನತ್ತಿ ಹೋದಾಗ ಅದೇ ಸಮಯದಲ್ಲಿ ಆತ ಉತ್ತರ ಪ್ರದೇಶದ ಭದೋಹಿಯಲ್ಲಿರುವ ಕಾಶಿರಾಮ್​ ಅವಾಸ್​ ಕಾಲನಿ ವಾಸವಿದ್ದ. ಇದೇ ವೇಳೆ ಅಶನ್​ ನೆರೆಯವರು ಆತನ ನಡವಳಿಕೆ ಮೇಲೆ ಸಂಶಯವನ್ನು ವ್ಯಕ್ತಪಡಿಸಿದ್ದರು. ಆತನ ಜಾಡು ಹಿಡಿದು ಹೋಗಿ ಅಶನ್​ನನ್ನು ಪೊಲೀಸರು ಬಂಧಿಸಿದರು.

    ಬಳಿಕ ನಡೆದ ಪೊಲೀಸ್​ ವಿಚಾರಣೆ ವೇಳೆ ಆರೋಪಿ ಅಶನ್​ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಎರಡನೇ ಪತ್ನಿ ನಜ್ನೀನ್​, ಸ್ವಂತ ಮಗ ಮತ್ತು 15 ವರ್ಷದ ಸಂಬಂಧಿಕನನ್ನು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಆತನನ್ನು ಪಾಣಿಪತ್​ನ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 10 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

    ಇದನ್ನೂ ಓದಿರಿ: VIDEO| ಹಿಟ್ನಾಳ್ ಟೋಲ್​ನಲ್ಲಿ ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗ ಥಳಿಸಿದ ಪುಂಡರ ಗುಂಪು..!

    ವೈವಾಹಿಕ ಸ್ಥಿತಿ
    ಸುಲಭವಾಗಿ ನಂಬುವ ಹಾಗೂ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ವರನಿಗಾಗಿ ಹುಡುಕಾಡ ನಡೆಸುವ​ ಮಹಿಳೆಯರೇ ಅಶನ್​ ಸೈಫಿಯ ಟಾರ್ಗೆಟ್​. ಅಶನ್​ ಕಾರ್ಪೆಂಟರ್​ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯು ಸಕ್ರಿಯನಾಗಿದ್ದ. ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಖಾತೆ ತೆರೆದು ಮಹಿಳೆಯರಿಗೆ ಗಾಳ ಹಾಕುತ್ತಿದ್ದ.

    ಇದೇ ವೆಬ್​ಸೈಟ್​ ಮೂಲಕ ಮುಂಬೈ ನಿವಾಸಿ ನಜ್ನೀನ್​ನನ್ನು ಭೇಟಿಯಾಗಿದ್ದ ಅಶನ್​ ಆಕೆಯನ್ನು ನಂಬಿಸಿ ಮದುವೆ ಆಗಿದ್ದ. ಆದರೆ, ತನ್ನ ಮೊದಲ ಮದುವೆ ಬಗ್ಗೆ ಆಕೆಗೆ ತಿಳಿಸಿರಲಿಲ್ಲ. ಮದುವೆ ಬಳಿಕ ಪಾಣಿಪತ್​ಗೆ ಸ್ಥಳಾಂತರವಾಗಿದ್ದ. ಇದೇ ವೇಳೆ ಈತ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಮೂರು ಮಕ್ಕಳೊಂದಿಗೆ ವಾಸವಿರುವ ಮೊದಲ ಪತ್ನಿಯ ಮನೆಗೂ ಭೇಟಿ ನೀಡಿದ್ದ.

    ಈ ವಿಚಾರ ನಜ್ನೀನ್​ಗೆ ಗೊತ್ತಾದಾಗ ಮೊದಲ ಪತ್ನಿಯನ್ನು ನೋಡಲು ನಜ್ನೀನ್​ ಒಪ್ಪಲಿಲ್ಲ. ಇದು ಇಬ್ಬರ ಸಂಬಂಧವನ್ನು ಹಂತ ಹಂತವಾಗಿ ಹಾಳುಗೆಡವಿತು. 2016ರಲ್ಲಿ ಕೊಲೆ ಮಾಡಲು ನಿರ್ಧಾರ ಮಾಡಿದ ಅಶನ್​, ತನ್ನ ಸಂಚಿನಂತೆ ಮೂವರಿಗೂ ವಿಷವುಣಿಸಿದ್ದ. ಬಳಿಕ ಮನೆಯಲ್ಲಿ ಹಳ್ಳ ತೆಗೆದು ಮೃತದೇಹಗಳನ್ನು ಹೂತಿಟ್ಟಿದ್ದ. ಬಳಿಕ ಮನೆಯನ್ನು ಪವನ್​ ಎಂಬುವರಿಗೆ ಮಾರಿದ್ದ.

    ಇದನ್ನೂ ಓದಿರಿ: VIDEO| ನಡು ರಸ್ತೆಯಲ್ಲೆ ಕಾರನ್ನೇರಿ ಕುಳಿತು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳೆ!

    ಸದ್ಯ ಪತ್ನಿ ನಜ್ನೀನ್​ (35), ಮಗ ಸೊಹೈಲ್​ (14) ಮತ್ತು ನಜ್ನೀನ್​ ಸಂಬಂಧಿ ಶಬೀರ್​ (15)ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊಲೆ ಬಳಿಕವೂ ಅಶನ್​ ಮೂರನೇ ಮದುವೆ ಆಗಿದ್ದಾನೆ. ಮೂರನೇ ಪತ್ನಿಯೊಂದಿಗೆ ಉತ್ತರ ಪ್ರದೇಶದ ಭದೋಹಿಯಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮಠದ ಆವರಣದಲ್ಲೇ ಸಾರಿಗೆ ಬಸ್​ ಚಾಲಕ ಆತ್ಮಹತ್ಯೆ! ಸಾವಿಗೆ ಕಾರಣ ಏನು?

    ಕೋವಿಡ್​ ಆಸ್ಪತ್ರೆಯ ಅಗ್ನಿ ಅವಘಡಕ್ಕೆ ಇಬ್ಬರು ಬಲಿ: ಮಾಲ್ ಒಳಗೆ ಆಸ್ಪತ್ರೆ ನೋಡಿದ್ದು ಇದೇ ಮೊದಲೆಂದ ಮೇಯರ್!

    ಇನ್ನೊಂದು ತಾಜ್​ಮಹಲ್; ನೈಜ ಘಟನೆ ಆಧಾರಿತ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts