More

    ಭಾಷೆ ಗೊತ್ತಿಲ್ಲದಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ಮಹಿಳೆ ಅನರ್ಹ!

    ಗಂಜಾಮ್: ನಾಮಪತ್ರದ ವೇಳೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿರುವುದು ಮತ್ತು ಒಡಿಶಾದಲ್ಲಿದ್ದುಕೊಂಡು ಒಡಿಯಾ ಭಾಷೆ ಬರದಿದ್ದಕ್ಕೆ ಮಹಿಳೆಯೊಬ್ಬರನ್ನು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಘಟನೆ ಗಂಜಾಮ್​ ಜಿಲ್ಲೆಯಲ್ಲಿ ನಡೆದಿದೆ.

    1994ರ ಒಡಿಶಾ ಗ್ರಾಮ ಪಂಚಾಯಿತಿ ಕಾಯ್ದೆ ಪ್ರಕಾರ ಒಡಿಯಾವನ್ನು ಬರೆಯಲು ಮತ್ತು ಮಾತನಾಡಲು ಗೊತ್ತಿಲ್ಲದಿದ್ದರೆ ಆ ವ್ಯಕ್ತಿಯು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಸ್ಥಾನವನ್ನು ಹೊಂದಲು ಅನರ್ಹನಾಗಿರುತ್ತಾನೆ ಮತ್ತು ಅಂತಹ ವ್ಯಕ್ತಿಯು ಯಾವುದೇ ಹುದ್ದೆಗೆ ಸ್ಪರ್ಧಿಸಲು ಸಾಧ್ಯವಿಲ್ಲ.

    ಇದನ್ನೂ ಓದಿರಿ: ‘ಸಿಡಿ ಲೇಡಿ’ ಹೆಸರಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್! ಸ್ಯಾಂಡಲ್​ವುಡ್​ನಲ್ಲಿ ವಿವಾದ ಎಬ್ಬಿಸಲಿದ್ಯಾ?

    ಎಂ. ಲಕ್ಷ್ಮಿ ಎಂಬುವರು ಗಂಜಾಮ್​ ಜಿಲ್ಲೆಯ ಛತ್ರಪುರ್​ ಬ್ಲಾಕ್​ ಅಡಿಯಲ್ಲಿ ಬರುವ ಆರ್ಯಪಲಿ ಗ್ರಾಮ ಪಂಚಾಯಿತಿಯಿಂದ 2017ರಲ್ಲಿ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಲಕ್ಷ್ಮಿ ಆಯ್ಕೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಲಕ್ಷ್ಮೀ ಅವರಿಗೆ ಒಡಿಯಾ ಭಾಷೆ ಗೊತ್ತಿಲ್ಲ ಎಂದು ಆರೋಪಿಸಲಾಗಿತ್ತು.

    ಸುದೀರ್ಘ ವಿಚಾರಣೆ ಬಳಿಕ ಗುರುವಾರ ಲಕ್ಷ್ಮೀ ಅವರ ಸದಸ್ಯ ಸ್ಥಾನವನ್ನು ನ್ಯಾಯಾಲಯ ಅನರ್ಹಗೊಳಿಸಿದೆ. ಲಕ್ಷ್ಮೀ ಅವರಿಗೆ ಒಡಿಯಾ ಗೊತ್ತಿಲ್ಲ ಎಂಬುದು ಸ್ಪಷ್ಟವಾದ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. (ಏಜೆನ್ಸೀಸ್​)

    ಆರ್​​ಎಸ್​​ಎಸ್​​ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಯಾರು?

    ಇಲ್ಲಿ ಪೊಲೀಸ್​ ಹುದ್ದೆಗೆ ಸೇರುವ ಮುನ್ನ ಹುಡುಗಿಯರು ಕನ್ಯತ್ವ ಪರೀಕ್ಷೆಯಲ್ಲಿ ಪಾಸ್​ ಆಗ್ಲೇಬೇಕು!

    ಮುಂದುವರೆದ ಅಧ್ಯಾಯ ಸಿನಿಮಾ ವಿಮರ್ಶೆ: ಕಳಚಿದ ಕೊಂಡಿಗಳ ಹುಡುಕಾಟದಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts