ಆರ್​​ಎಸ್​​ಎಸ್​​ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಯಾರು?

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಎರಡನೇ ಅತ್ಯುನ್ನತ ಹುದ್ದೆ ಸರ ಕಾರ್ಯವಾಹ ಆಗಿ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗಿದ್ದಾರೆ. ಆರೆಸ್ಸೆಸ್ ವಲಯದಲ್ಲಿ ದತ್ತಾಜಿ ಎಂದೇ ಕರೆಯಲ್ಪಡುವ ದತ್ತಾತ್ರೇಯ ಹೊಸಬಾಳೆ ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದಲ್ಲಿ. 1955ರ ಡಿ.1ರಂದು ಆರೆಸ್ಸೆಸ್ ಕಾರ್ಯಕರ್ತರ ಮನೆಯಲ್ಲಿ ಜನಿಸಿದ ದತ್ತಾತ್ರೇಯ ಹೊಸಬಾಳೆ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಪದವೀಧರ. 1968ರಲ್ಲಿ ಆರೆಸ್ಸೆಸ್ ಸೇರಿ, 1972ರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಯಲ್ಲಿ ಸಕ್ರಿಯರಾದರು. 1978ರಿಂದ ಪೂರ್ಣ ಕಾಲಿಕ … Continue reading ಆರ್​​ಎಸ್​​ಎಸ್​​ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಯಾರು?