More

    ಭಾರತ ಹಾಕಿ ತಂಡಗಳಿಗೆ ಪ್ರಾಯೋಜಕತ್ವ ವಿಸ್ತರಿಸಿದ ಒಡಿಶಾ ಸರ್ಕಾರ

    ಭುವನೇಶ್ವರ: ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳಿಗೆ ಒಡಿಶಾ ಸರ್ಕಾರ ಇನ್ನು 10 ವರ್ಷಗಳ ಕಾಲ ಪ್ರಾಯೋಜಕತ್ವ ವಿಸ್ತರಿಸಲು ನಿರ್ಧರಿಸಿದೆ. ಈ ಕುರಿತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಂಗಳವಾರ ಘೋಷಿಸಿದರು. ಸದ್ಯ ಪ್ರಾಯೋಜಕತ್ವದ ಅವಧಿ 2023ರವರೆಗೂ ಇದ್ದು, ಅಲ್ಲಿಂದ 10 ವರ್ಷಗಳ ಕಾಲ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ಪಟ್ನಾಯಕ್ ತಿಳಿಸಿದ್ದಾರೆ. ಹಾಕಿ ಇಂಡಿಯಾ ಜತೆಗಿನ ಒಪ್ಪಂದವನ್ನು ಮುಂದುವರಿಸಲಿದ್ದು, ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳ ಆಟಗಾರರನ್ನು ಸನ್ಮಾನಿಸಿ ಮಾತನಾಡಿದ ಅವರು, ಹಾಕಿಯಲ್ಲಿ ಗತವೈಭವ ಮರುಕಳಿಸಬೇಕು ಎಂದು ಹಾರೈಸಿದರು. 

    ಇದನ್ನೂ ಓದಿ: ಸ್ವರ್ಣ ಸಾಧಕ ನೀರಜ್ ಅಸ್ವಸ್ಥ, ತವರಿನ ಸ್ವಾಗತ ಸಮಾರಂಭ ಮೊಟಕು

    ಸನ್ಮಾನ ಸಮಾರಂಭಕ್ಕೂ ಮುನ್ನ ಮೊದಲು ಎರಡು ತಂಡಗಳಿಗೂ ಭರ್ಜರಿ ಸ್ವಾಗತ ನೀಡಲಾಯಿತು. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೋಟೆಲ್‌ವರೆಗೂ ಆಟಗಾರರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಒಡಿಶಾ ಸರ್ಕಾರ 2018ರ ಫೆಬ್ರವರಿಯಿಂದ ಎರಡು ತಂಡಗಳಿಗೆ ಪ್ರಾಯೋಜಕತ್ವ ವಹಿಸಿಕೊಂಡಿದೆ. ಐದು ವರ್ಷಗಳಿಗೆ ಅವಧಿಗೆ 140 ಕೋಟಿ ರೂಪಾಯಿಗೆ ಹಾಕಿ ಇಂಡಿಯಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಮಹಿಳಾ ತಂಡ 4ನೇ ಸ್ಥಾನ ಪಡೆದಿತ್ತು.

    ಇದನ್ನೂ ಓದಿ: VIDEO: ಗೋಲ್‌ಕೀಪರ್ ಶ್ರೀಜೇಶ್‌ಗೆ ಪ್ರಧಾನಿ ಮೋದಿ ನೀಡಿದ ಸಲಹೆ ಏನು ಗೊತ್ತೇ?, 

    ಎರಡು ತಂಡಗಳ ಆಟಗಾರರಿಗೆ ನವೀನ್ ಪಟ್ನಾಯಕ್ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಿದರೆ, ತಂಡದ ಸಹಾಯಕ ಸಿಬ್ಬಂದಿಗೆ ತಲಾ 5 ಲಕ್ಷ ರೂಪಾಯಿ ನೀಡಿದರು. ಅಲ್ಲದೆ, ಹಾಕಿ ಇಂಡಿಯಾಗೆ 50 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದರು. ಭಾರತ ತಂಡ ಕಂಚಿನ ಪದಕ ಜಯಿಸಿರುವುದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಉಡುಗೊರೆ ಎಂದು ನಾಯಕ ಮನ್‌ಪ್ರೀತ್ ಸಿಂಗ್ ಇದೇ ವೇಳೆ ಸ್ಮರಿಸಿದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts