More

  ಕಾಲಂ ಹಾಕಿ ಮೇಲ್ಸೇತುವೆ ನಿರ್ಮಿಸಲು ಆಗ್ರಹ

  ಬೋರಗಾಂವ: ನಿಪ್ಪಾಣಿ ತಾಲೂಕಿನ ಮಾಂಗುರು ಕ್ರಾಸ್ ಹತ್ತಿರ ಕಾಲಂ ಹಾಕಿ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಮಾಜಿ ಕೃಷಿ ಸಚಿವ ಶರದ ಪವಾರ ನೇತೃತ್ವದಲ್ಲಿ ಯುವ ಮುಖಂಡ ಉತ್ತಮ ಪಾಟೀಲ ಮತ್ತು ಇತರರು ದೆಹಲಿಯಲ್ಲಿ ಶುಕ್ರವಾರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದರು.

  ಉತ್ತಮ ಪಾಟೀಲ ಮಾತನಾಡಿ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ನೀರು ದಾಟಿ ಹೋಗಲು ಅವಕಾಶವಿಲ್ಲದಂತೆ ಮಂಗುರು ಕ್ರಾಸ್ ಹತ್ತಿರ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಹೀಗಾಗಿ ಈ ಸೇತುವೆ ಮಳೆಗಾಲದಲ್ಲಿ ಪ್ರವಾಹಕ್ಕೆ ದಾರಿ ಮಾಡಿಕೊಡಲಿದೆ. ಇದರಿಂದ ನೀರು ದಾಟಿ ಹೋಗಲು ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸುವ ಹೊಸ ಯೋಜನೆ ರೂಪಿಸುವಂತೆ ಮನವರಿಕೆ ಮಾಡಿದರು.

  ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿತಿನ್ ಗಡ್ಕರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜತೆಗೆ ಕಾಲಂ ಹಾಕಿ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನಿಡಿದರು.

  ನದಿತೀರ ಬಚಾವ ಕ್ರಿಯಾ ಸಮಿತಿಯ ಕೆ.ಡಿ.ಪಾಟೀಲ, ಚಂದ್ರಶೇಖರ ಸಾವಂತ, ಅಜಿತ ಪಾಟೀಲ, ದೀಪಕ ಪಾಟೀಲ, ಸುದೀಪ ವಾಲ್ಕೆ, ಶಿವಾಜಿ ಪಾಟೀಲ, ಅಮೋಲ ಪಾಟೀಲ, ನಾನಾಸಾಹೇಬ ಪಾಟೀಲ, ಲಕ್ಷ್ಮೀಕಾಂತ ಪಾಟೀಲ, ನಿರಂಜನ ಪಾಟೀಲ, ರಾಜೇಖಾನ್ ಜಮಾದಾರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts