More

    ಮದುವೆಗೆ ಒಪ್ಪದ ಪಾಲಕರು: ಪೊಲೀಸ್​ ಠಾಣೆಯಲ್ಲೇ ಶಾಸ್ತ್ರೋಕ್ತವಾಗಿ ವಿವಾಹವಾದ ಪ್ರೇಮಿಗಳು!

    ಭುವನೇಶ್ವರ್​: ಪ್ರೇಮಿಗಳಿಬ್ಬರ ಪಾಲಿಗೆ ಪೊಲೀಸ್​ ಠಾಣೆಯೊಂದು ಮದುವೆ ಮಂಟಪವಾಗಿ ಬದಲಾದ ಅಪರೂಪದ ಘಟನೆ ಒಡಿಶಾದದಲ್ಲಿ ನಡೆದಿದೆ. ಠಾಣೆಯ ಸಿಬ್ಬಂದಿಗಳೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿ, ಆಶೀವರ್ದಿಸಿದ್ದಾರೆ.

    ವಿವರಣೆಗೆ ಬರುವುದಾದರೆ, ಗೌಡಗಢ​ ಗ್ರಾಮದ ಸುಶೀಲ್​ ಕುಮಾರ್​ ಸಾಹು ಮತ್ತು ಮುರ್ಸುಂದಿ ಗ್ರಾಮದ ಲಿಪ್ಸಾ ಸಾಹು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಪ್ರೀತಿಗೆ ಇಬ್ಬರ ಮನೆಯವರಿಂದಲೂ ವಿರೋಧ ಇತ್ತು. ಹೀಗಾಗಿ ಇಬ್ಬರು ಸುವರ್ಣಪುರ ಜಿಲ್ಲೆಯ ಬಿರ್ಮಹಾರಾಜಪುರ ಮಾಡೆಲ್​ ಪೊಲೀಸ್​ ಠಾಣೆಗೆ ತೆರಳಿ ಇಬ್ಬರ ಪ್ರೇಮ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ, ಮದುವೆ ಮಾಡಿಸಿಕೊಡಬೇಕೆಂದು ಕೇಳಿಕೊಂಡಿದ್ದರು. ಠಾಣೆಯ ಸಿಬ್ಬಂದಿ ಇಬ್ಬರ ಪ್ರೀತಿಯನ್ನು ಒಪ್ಪಿ ಠಾಣೆಯಲ್ಲಿ ಮದುವೆ ಮಾಡಿಸಿದ್ದಾರೆ.

    ಇದನ್ನೂ ಓದಿ: ಸ್ನೇಹಿತನಿಂದಲೇ ನಂಬಿಕೆ ದ್ರೋಹ: ಮನನೊಂದು ಜೀವನ ಕೊನೆಗೊಳಿಸಿದ ಬಿ.ಟೆಕ್​ ವಿದ್ಯಾರ್ಥಿನಿ

    ಈ ಬಗ್ಗೆ ಮಾತನಾಡಿರುವ ಲಿಪ್ಸಾ ಸಾಹು, ಕಳೆದ ಐದು ವರ್ಷಗಳಿಂದ ನಾವಿಬ್ಬರು ಪ್ರೀಸುತ್ತಿದ್ದೆವು. ಆದರೆ, ನಮ್ಮ ಕುಟುಂಬದವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ನಾವು ಪೊಲೀಸ್​ ಠಾಣೆಯ ಮೆಟ್ಟಿಲೇರಿದೆವು. ಬಳಿಕ ನಮ್ಮ ಕುಟುಂಬಸ್ಥರನ್ನು ಕರೆಹಿಸಿ, ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದರು ಎಂದು ಹೇಳಿದ್ದಾರೆ.

    ಸುಶೀಲ್​ ಕುಮಾರ್​ ಸಾಹು ಮಾತನಾಡಿ, ಐದು ವರ್ಷಗಳ ಪ್ರೇಮ ಸಂಬಂಧದ ಹೊರತಾಗಿಯೂ ಲಿಪ್ಸಾ ಅವರ ಕುಟುಂಬ ಆಕೆಗೆ ಬೇರೆ ಮದುವೆ ನಿಗದಿ ಮಾಡಿದ್ದರು. ಇದರಿಂದ ಪೊಲೀಸರ ಸಮ್ಮುಖದಲ್ಲಿ ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದೆವು. ಪೊಲೀಸ್​ ಠಾಣೆಗೆ ತೆರಳಿ ನಮ್ಮ ಪ್ರೇಮ ವಿಚಾರವನ್ನು ತಿಳಿಸಿದ ಬಳಿಕ ನಮ್ಮ ಕುಟುಂಬಸ್ಥರನ್ನು ಠಾಣೆಗೆ ಕರೆಯಿಸಿ, ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟರು ಎಂದು ಹೇಳಿದ್ದಾರೆ.

    ಬಿರ್ಮಹಾರಾಜಪುರ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಪದ್ಮಸಿನಿ ಮೆಹರ್ ಮಾತನಾಡಿ, ಮುರ್ಸುಂಧಿಯ ಲಿಪ್ಸಾ ಸಾಹು ಮತ್ತು ಗೌಡಗಡದ ಸುಶೀಲ್ ಕುಮಾರ್ ಸಾಹು ಕಳೆದ ಐದು ವರ್ಷಗಳಿಂದ ಸಂಬಂಧ ಹೊಂದಿದ್ದರು. ಆದರೆ, ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳಿದ್ದು, ಹುಡುಗಿಯ ಮದುವೆಯನ್ನು ಬೇರೆಡೆ ನಿಶ್ಚಯಿಸಲಾಗಿತ್ತು. ಪ್ರೇಮಿಗಳು ನಮ್ಮ ಬಳಿಗೆ ಬಂದು ಸಹಾಯ ಕೇಳಿದರು. ನಾವು ಕುಟುಂಬಗಳನ್ನು ಕರೆದು ಮದುವೆ ಮಾಡುವಂತೆ ಮನವೊಲಿಸಿದೆವು ಎಂದಿದ್ದಾರೆ.

    ಇದನ್ನೂ ಓದಿ: ಹೆಸರಿಗೆ ಬ್ಯೂಟಿ ಪಾರ್ಲರ್​ ಆದ್ರೆ ಮಾಡ್ತಿದ್ದದ್ದು ನೀಚ ಕೃತ್ಯ: ಕಿಲಾಡಿ ಲೇಡಿಯ ಬ್ಯಾಗಲ್ಲಿತ್ತು ಅಕ್ರಮದ ರಹಸ್ಯ

    ಎರಡು ಕುಟುಂಬಗಳ ಸಮ್ಮುಖದಲ್ಲಿ ಶಾಂತಿಯುತವಾಗಿ ಮದುವೆ ನಡೆದಿದ್ದು, ಎಲ್ಲರು ಈಗ ಸಂತೋಶವಾಗಿಯೇ ಇದ್ದಾರೆ. ಕೆಲವು ಸ್ಥಳೀಯರು ಕೂಡ ಮದುವೆಗೆ ಸಾಕ್ಷಿಯಾಗಿ ನವಜೋಡಿಯನ್ನು ಆಶೀರ್ವದಿಸಿದ್ದಾರೆ. ಪೊಲೀಸರು ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ. (ಏಜೆನ್ಸೀಸ್​)

    ಹರಾಜಿನಲ್ಲಿ ರಥದ ನಂದಿಧ್ವಜ ಗೆದ್ದವರು ಶಾಸಕರಾಗ್ತಾರೆಂಬ ನಂಬಿಕೆ: 16 ಲಕ್ಷಕ್ಕೆ ಧ್ವಜ ಖರೀದಿಸಿದ ಕುಣಿಗಲ್​ ಶಾಸಕ!

    ಸ್ನೇಹಿತನಿಂದಲೇ ನಂಬಿಕೆ ದ್ರೋಹ: ಮನನೊಂದು ಜೀವನ ಕೊನೆಗೊಳಿಸಿದ ಬಿ.ಟೆಕ್​ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts