More

    ಕೆಕ್ಕರಲ ಹಣ್ಣಿಗೆ ಹೆಚ್ಚಿದ ಬೇಡಿಕೆ

    ನ್ಯಾಮತಿ: ಶೂನ್ಯ ಬಂಡವಾಳದಲ್ಲಿ ವರ್ಷದ ಹಿಂಗಾರಿನಲ್ಲಷ್ಟೇ ಬೆಳೆಯುವ ವಿಶಿಷ್ಟ ಕೆಕ್ಕರಲ ಹಣ್ಣಿಗೆ ದಿನೇದಿನೆ ಬೇಡಿಕೆ ಹೆಚ್ಚಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಹಣ್ಣು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ.

    ಸೌತೇಕಾತಿಯನ್ನು ಹೋಲುವ ಈ ಹಣ್ಣು ಕಪ್ಪು ಮಣ್ಣಿನ ಪ್ರದೇಶದಲ್ಲಿ ಮಾತ್ರವೇ ಹೆಚ್ಚಿನ ಇಳುವರಿ ನೀಡುವ ಪರಿಣಾಮ ತಾಲೂಕಿನ ಆರುಂಡಿ, ಕೆಂಚಿಕೊಪ್ಪ ಮತ್ತು ರಾಮೇಶ್ವರ ಗ್ರಾಮದ ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ.

    ಈ ಹಣ್ಣು ಬೆಳೆಯಲು ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ. ಹಿಂಗಾರಿನ ಊಟದ ಜೋಳ ಅಥವಾ ಗೋವಿನ ಜೋಳದ ಮಧ್ಯದಲ್ಲಿ ಪರ್ಯಾಯವಾಗಿ ಬೆಳೆಯಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ಆರೈಕೆ, ಬಂಡವಾಳ ಹೂಡಿಕೆ ಇಲ್ಲದಿದ್ದರೂ ಆದಾಯ ಮಾತ್ರ ಕೈತುಂಬ ಸಿಗಲಿದೆ. ಇದರಿಂದ ಪ್ರತಿ ಎಕರೆಗೆ 60 ರಿಂದ 70 ಸಾವಿರ ರೂ. ಆದಾಯ ಗಳಿಸಬಹುದಾಗಿದೆ ಎನ್ನುತ್ತಾರೆ ರೈತರು.

    ಶಿವರಾತ್ರಿ ಮುನ್ನ ಜನವರಿ, ಫೆಬ್ರವರಿ ತಿಂಗಳಲ್ಲಿ ಫಸಲು ಬರುವುದರಿಂದ ಈ ಸಮಯದಲ್ಲಿ ಬೇಡಿಕೆ ಹೆಚ್ಚು. ಈ ಸಂದರ್ಭ ರೈತರೇ ಹಣ್ಣನ್ನು ನ್ಯಾಮತಿ ಪಟ್ಟಣ ಮತ್ತಿತರ ಕಡೆಗಳಲ್ಲಿ ತಂದು ಮಾರಾಟ ಮಾಡುತ್ತಾರೆ.

    ಹಣ್ಣು ಚೆನ್ನಾಗಿ ಬಲಿತು ಸುವಾಸನೆ ಬೀರಿದಾಗ ತಿನ್ನಲು ರುಚಿಕರ. ಕೊಬ್ಬರಿ, ಬೆಲ್ಲದೊಂದಿಗೆ ಅಥವಾ ಹೋಳಿಗೆ ಸೀಕರಣೆಯೊಂದಿಗೆ ತಿನ್ನಬಹುದು.

    ಶೂನ್ಯ ಬಂಡವಾಳ ಹಾಗೂ ಸ್ಥಳೀಯವಾಗಿ ಹೆಚ್ಚಿನ ಬೇಡಿಕೆ ಇರುವ ಕೆಕ್ಕರಲ ಹಣ್ಣನ್ನು ರೈತರು ಇರುವ ಬೆಳೆಯ ಮಧ್ಯದಲ್ಲ್ಲಿಯೇ ಪರ್ಯಾಯವಾಗಿ ಬೆಳೆದು ಹೆಚ್ಚಿನ ಆದಾಯ ಗಳಿಸಬಹುದು.
    ಎ.ಎಸ್.ಪ್ರತಿಮಾ, ಸಹಾಯಕ ಕೃಷಿ ಅಧಿಕಾರಿ, ಹೊನ್ನಾಳಿ.

     

    ಕೆಕ್ಕರಲ ಹಣ್ಣಿನ ಬೀಜ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಹಾಗಾಗಿ, ಈ ವರ್ಷ ಬೆಳೆದ ಮಾಗಿದ ಹಣ್ಣಿನ ಬೀಜ ಸಂಗ್ರಹಿಸಿ ಮುಂದಿನ ವರ್ಷ ಹಿಂಗಾರು ಜೋಳದೊಟ್ಟಿಗೆ ಬಿತ್ತನೆ ಮಾಡುತ್ತೇವೆ. ಯಾವುದೇ ಖರ್ಚಿಲ್ಲದೇ ಎಕರೆಗೆ 60 -70 ಸಾವಿರ ರೂ. ಗಳಿಸುತ್ತಿದ್ದೇವೆ.
    ಭರಮಪ್ಪ, ರೈತ, ಕೆಂಚಿಕೊಪ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts