More

  ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

  ನ್ಯಾಮತಿ: ತಾಲೂಕಿನ ಸಾಲಬಾಳು ಗ್ರಾಮದ ರೈತ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  ಸಾಲಬಾಳು ಗ್ರಾಮದ ಸತೀಶ ನಾಯ್ಕ (28) ಮೃತ ರೈತ. ಬೀಜ, ಗೊಬ್ಬರ ಮತ್ತಿತರ ಕೃಷಿ ಚಟುವಟಿಕೆಗಾಗಿ ಸಾಲ ಮಾಡಿಕೊಂಡಿದ್ದ.

  ಗ್ರಾಮದ 2.10 ಎಕರೆ ಜಮೀನಿನಲ್ಲಿ ಅಡಕೆ, ಮೆಕ್ಕೆಜೋಳ ಬೆಳೆದಿದ್ದ. ಮಳೆ ಬಾರದೆ, ಬೆಳೆ ಒಣಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  ಜಮೀನು ಅಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗೆ ಹೊನ್ನಾಳಿ ಪಿಎಲ್‌ಡಿ ಬ್ಯಾಂಕ್ 1.40 ಲಕ್ಷ, ಧರ್ಮಸ್ಥಳ ಸಂಘದಲ್ಲಿ 50 ಸಾವಿರ ಹಾಗೂ ಕೈಗಡ 5ಲಕ್ಷ ಸಾಲ ಮಾಡಿರುವುದಾಗಿ ಮೃತ ರೈತನ ಪತ್ನಿ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts