More

    ಪೌಷ್ಟಿಕ ಆಹಾರ ಸೇವನೆಯಿಂದ ಸದೃಢರಾಗಿ

    ಅರಕೇರಾ: ಗರ್ಭಿಣಿ ಸ್ತ್ರೀಯರು ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಬೇಕು. ಇದರಿಂದ ತಾಯಿ ಮತ್ತು ಮಗುವಿನ ಮಾನಸಿಕ, ದೈಹಿಕ ಸದೃಢತೆಗೆ ಸಹಕಾರಿಯಾಗುತ್ತದೆ ಎಂದು ಸಿಡಿಪಿಒ ವೆಂಕಟಪ್ಪ ಹೇಳಿದರು.

    ಇದನ್ನೂ ಓದಿ: ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ

    ತಾಲೂಕಿನ ಕ್ಯಾದಿಗ್ಗೇರಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪೋಷಣೆ ಅಭಿಯಾನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಮೊಳಕೆ ಕಾಳು, ಬೆಲ್ಲ, ಹಸಿರು ಸೊಪ್ಪು, ದ್ವಿದಳ ಧಾನ್ಯ, ಮೊಟ್ಟೆ ಇತ್ಯಾದಿ ಪೌಷ್ಟಿಕ ಆಹಾರ ಬಗ್ಗೆ ವಿವರಿಸಿ, ಬಾಲ್ಯ ವಿವಾಹ ಪದ್ಧತಿಯು ಸಮಾಜಕ್ಕೆ ಅಂಟಿಕೊಂಡ ಕಂಟಕವಾಗಿದೆ.

    ಹದಿಹರೆಯದವರ ಮದುವೆ ಮಾಡುವ ಯೋಚನೆ ಬಿಟ್ಟು ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು ಎಂದರು. ಅಂಗನವಾಡಿ ಮೇಲ್ವಿಚಾರಕಿ ಶಾಂತಾ ಬಾಯಿ ಮಾತನಾಡಿ, ಗರ್ಭಿಣಿಯರಲ್ಲಿ ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆಯ ಕೊರತೆ ಇದೆ. ಇದನ್ನು ತಡೆಯಲು ಪೌಷ್ಟಿಕ ಆಹಾರ ಸೇವನೆ ಮಾಡಬೇಕು.

    ಪ್ರತಿ ವಷರ್ ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನದ ಮೂಲಕ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ನೀಲಮ್ಮ ರಾಜಶೇಖರ ರಾಠೋಡ್, ಉಪಾಧ್ಯಕ್ಷ ವೆಂಕಟೇಶ ಚವ್ಹಾಣ್, ಪದ್ಮಾ ಶ್ರೀ ಕಿಷ್ಟಪ್ಪ ನಾಯಕ ಮಾ.ಪಾ, ಗ್ರಾಪಂ ಸದಸ್ಯರಾದ ಮಾಳಮ್ಮ, ಕಾರ್ಯದರ್ಶಿ ಲಿಂಗಪ್ಪ, ಶೃತಿ ಸಂಸ್ಕೃತಿ ಸಂಸ್ಥೆ ಸಂಯೋಜಕ ರಾಮಣ್ಣ ಎನ್.ಗಣೇಕಲ್, ಮುಖ್ಯ ಶಿಕ್ಷಕ ಹನುಂತ್ರಾಯ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts