More

    ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಾರದರ್ಶಕ ಪಿಪಿಇ ಗೌನ್ ತೊಟ್ಟ ನರ್ಸ್​…!

    ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿನ ಆಸ್ಪತ್ರೆಯೊಂದರ ಪುರುಷರ ವಾರ್ಡ್​ನಲ್ಲಿ ನರ್ಸ್​ ಒಬ್ಬಳು ಒಳ ಉಡುಪಿನ ಮೇಲೆ ಪಾರದರ್ಶಕ ಪಿಪಿಇ ರಕ್ಷಣಾ ಗೌನ್ ಧರಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ​

    ದಕ್ಷಿಣ ಮಾಸ್ಕೋದಿಂದ 100 ಮೈಲಿ ದೂರದಲ್ಲಿರುವ ತುಳಾ ಹೆಸರಿನ ಆಸ್ಪತ್ರೆಯಲ್ಲಿ ಕರೊನಾ ರೋಗಿಯೊಬ್ಬರು ನರ್ಸ್​ ಫೋಟೋ ಸೆರೆಹಿಡಿದು ವೈರಲ್​ ಮಾಡಿದ್ದಾರೆ. ನರ್ಸ್​ ಉಡುಪಿನ ಬಗ್ಗೆ ರೋಗಿಗಳಿಂದ ಯಾವುದೇ ದೂರು ಇಲ್ಲದಿರುವ ಕಾರಣ ವೈದ್ಯಕೀಯ ಉಡುಪಗಳು ಅವಶ್ಯಕವಾಗಿದ್ದರೂ ಆಸ್ಪತ್ರೆಯ ಮುಖ್ಯಸ್ಥ ಆಕೆಯ ವಿರುದ್ಧ ಈವರೆಗೂ ಕ್ರಮಕೈಗೊಂಡಿಲ್ಲ.

    ಇದನ್ನೂ ಓದಿ: ತನ್ನ ಈ ಅಂಗದ ಫೋಟೋ ಮಾರಾಟ ಮಾಡಿಯೇ ಭರ್ಜರಿ ಹಣ ಗಳಿಸುತ್ತಿದ್ದಾಳೆ ಮೆಡಿಕಲ್​ ವಿದ್ಯಾರ್ಥಿನಿ…

    ಅಪರಿಚಿತ ನರ್ಸ್​ನ ವಯಸ್ಸು 20. ಪಿಪಿಇ ಗೌನ್​​ ಜತೆ ನರ್ಸ್​ ಯೂನಿಫಾರ್ಮ್​ ಧರಿಸುವುದರಿಂದ ತುಂಬಾ ಸೆಕೆಯಾಗುತ್ತದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೆ, ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಧರಿಸಿದ್ದ ಪಿಪಿಇ ಗೌನ್​ ಪಾರ್ದರ್ಶಕವಾಗಿದೆ ಎಂದು ನನಗೆ ತಿಳದೇ ಇರಲಿಲ್ಲ ಎಂದು ಆಸ್ಪತ್ರೆಯ ಮ್ಯಾನೇಜರ್​ ಬಳಿ ಸ್ಪಷ್ಟನೆ ನೀಡಿದ್ದಾಳೆ.

    ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಾರದರ್ಶಕ ಪಿಪಿಇ ಗೌನ್ ತೊಟ್ಟ ನರ್ಸ್​...!

    ಇದರ ಹೊರತಾಗಿಯೂ ನರ್ಸ್​ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡು ವರದಿ ನೀಡಲು ಪ್ರಾದೇಶಿಕ ಆರೋಗ್ಯ ಸಚಿವಾಲಯ ಆದೇಶಿಸಿದೆ. ಸಾಂಕ್ರಾಮಿಕ ರೋಗದ ಎಚ್ಚರಿಕೆಯ ನಡುವೆಯೂ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

    ಇದನ್ನೂ ಓದಿ: ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?​

    ಆರಂಭದಲ್ಲಿ ನರ್ಸ್​ ಒಳ ಉಡುಪು ಧರಿಸಿದ್ದಳು ಎಂದಿದ್ದ ಆಸ್ಪತ್ರೆಯ ಮುಖ್ಯಸ್ಥ ಬಳಿಕ ಅವಳು ಧರಿಸಿದ್ದು ಒಳ ಉಡುಪಲ್ಲ, ಬದಲಾಗಿ ಸ್ವಿಮ್ಮಿಂಗ್​ ಸ್ಯೂಟ್​ ಎಂದು ಹೇಳಿಕೆ ಬದಲಾಯಿಸಿದ್ದಾರೆ. ನರ್ಸ್​ ಸಾರ್ವಜನಿಕವಾಗಿಯೂ ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅಲ್ಲದೆ, ಆಕೆಯ ವಿರುದ್ಧ ತೆಗೆದುಕೊಂಡಿರುವ ಶಿಸ್ತು ಕ್ರಮದ ಬಗ್ಗೆಯೂ ಬಹಿರಂಗವಾಗಿಲ್ಲ.

    ಇನ್ನು ಕರೊನಾ ವಾರ್ಡ್​ನಲ್ಲಿರುವ ರೋಗಿಯೊಬ್ಬರು ಆಕೆಯ ಬಗ್ಗೆ ಮಾತನಾಡಿ, ಕೆಲವೊಂದು ಮುಜುಗರ ಬಿಟ್ಟರೆ, ಆಕೆ ಆ ರೀತಿ ಉಡುಪು ಧರಿಸಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: 13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ನರ್ಸ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ಆಕೆಯ ಬೆಂಬಲಕ್ಕೂ ನಿಂತಿದ್ದಾರೆ. ನರ್ಸ್ ಹಾಸ್ಯಪ್ರಜ್ಞೆ ಮೆಚ್ಚುವಂಥದ್ದು ಎಂದು ಸ್ಥಳೀಯ ಪತ್ರಕರ್ತರೊಬ್ಬರು ಹೊಗಳಿದ್ದಾರೆ. ಮತ್ತೊಬ್ಬರು ಎಲ್ಲರೂ ಆಕೆಯ ವಿರುದ್ಧ ಧ್ವನಿ ಏರಿಸುತ್ತಿದ್ದಾರೆ. ಆದರೆ, ಅದರಿಂದಾಗುವ ಸೆಕೆ ಎಷ್ಟೆಂಬುದರ ಬಗ್ಗೆ ಗಮನ ಹರಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ನರ್ಸ್​ಗೆ ಶಿಕ್ಷಿಸುವ ಬದಲು ಬಹುಮಾನ ನೀಡಿ. ಆಕೆಯ ದೈಹಿಕ ಸೌಂದರ್ಯ ನೋಡಿ ಯಾರೊಬ್ಬರು ಸಾಯಲು ಇಚ್ಛಿಸುವುದಿಲ್ಲ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾರೆ ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಮಹಿಳೆಯ ಶವದ ಜತೆ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ: ಆರೋಪಿ ಬಂಧಿಸಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್​!

    ಬೆಳಗಿನ ಉಪಾಹಾರ ತಯಾರಿಸಲು ಅಡುಗೆ ಮನೆ ಬಾಗಿಲು ತೆರೆದ ಮಹಿಳೆಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts