More

    ಬೆಳಗಿನ ಉಪಾಹಾರ ತಯಾರಿಸಲು ಅಡುಗೆ ಮನೆ ಬಾಗಿಲು ತೆರೆದ ಮಹಿಳೆಗೆ ಕಾದಿತ್ತು ಶಾಕ್​!

    ಬೀಜಿಂಗ್​: ಕರೊನಾ ವೈರಸ್​ ಸೃಷ್ಟಿಸಿರುವ ಭೀತಿ ಎಂಥದ್ದು ಅಂದರೆ ಕನಸಲ್ಲೂ ಬಾವಲಿಗಳನ್ನು ಕಂಡರೆ ಹೆದರುವಂತಾಗಿದೆ. ಏಕೆಂದರೆ ಕರೊನಾ ಹುಟ್ಟಿನ ಮೂಲ ಬಾವಲಿ ಎನ್ನುವ ಸಾಕಷ್ಟು ವಾದಗಳು ಕೇಳಿಬರುತ್ತಿವೆ. ಅಂತಹದರಲ್ಲಿ ಮನೆಯ ತುಂಬೆಲ್ಲಾ ಬಾಲಿವಗಳೇ ಕಂಡರೆ ಏನಾಗಬಾರದು? ಇಲ್ಲೋರ್ವ ಮಹಿಳೆ ಅದೇ ಪರಿಸ್ಥಿತಿಯನ್ನು ಎದುರಿಸಿದ್ದಾಳೆ.

    ಇದನ್ನೂ ಓದಿ: ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?​

    ಕೇಂದ್ರ ಚೀನಾದ ಹೆನಾನ್​ ಪ್ರಾಂತ್ಯದ ಝೆಂಗ್​ಜಾವೋ ನಗರದ ನಿವಾಸಿ ‘ಷಿ’ ಹೆಸರಿನ ಮಹಿಳೆಗೆ ಕಳೆದ ಶುಕ್ರವಾರ ಬೆಳಗ್ಗೆ ಶಾಕ್​ ಒಂದು ಎದುರಾಗಿದೆ. ತಿಂಡಿ ತಯಾರಿಸಲು ಅಡುಗೆ ಮನೆ ಬಾಗಿಲು ತೆಗೆದ ಷಿ, ಕರೆಯದೆ ಬಂದ ಅತಿಥಿಗಳನ್ನು ಕಂಡು ಕಂಗಾಲಾದರು.

    ಅಷ್ಟಕ್ಕೂ ಆಗಿದ್ದೇನು ಅಂದರೆ, ಅಡುಗೆ ಮನೆಯ ಕಿಟಕಿಗಳ ಮೇಲೆ ಸುಮಾರು 30 ಬಾವಲಿಗಳು ತೆವಳುತ್ತಾ, ಹಾರಾಡುವುದನ್ನು ಷಿ, ಕಂಡಿದ್ದಾರೆ. ತಕ್ಷಣ ಆಕೆ ಸ್ಥಳೀಯ ವನ್ಯ ಜೀವಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಕರೆಗೆ ಸ್ಪಂದಿಸಿದ ಅಧಿಕಾರಿಗಳು ಬಾವಲಿಗಳನ್ನು ಹಿಡಿದುಕೊಂಡು ಹೋಗಿದ್ದಾರೆ.

    ಇದನ್ನೂ ಓದಿ: ಮೊಬೈಲ್​​ ಬಿಟ್ಟು ಓದಿಕೋ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಿಂದ ದುಡುಕಿನ ನಿರ್ಧಾರ

    ಈ ಬಗ್ಗೆ ಮಾತನಾಡಿರುವ ಷಿ, ಒಳ್ಳೆಯ ವಿಚಾರವೇನೆಂದರೆ ಬಾವಲಿಗಳು ಮನೆಯ ಹೊರಭಾಗದಲ್ಲಿ ಒಟ್ಟಿಗೆ ಸೇರಿರುವುದನ್ನು ನೋಡಿದರೆ, ನಗರದ ವಾತಾವರಣ ಉತ್ತಮವಾಗಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ. ಅಲ್ಲದೇ ಬಾವಲಿಗಳನ್ನು ಕಂಡು ಹೆದರಿದ್ದಾಗಿಯೂ ತಿಳಿಸಿದ್ದಾರೆ.

    ವನ್ಯ ಜೀವಿ ಅಧಿಕಾರಿಗಳಿಗೆ ಕೆಲ ಬಾವಲಿಗಳನ್ನು ಮಾತ್ರ ಹಿಡಿಯಲು ಸಾಧ್ಯವಾಗಿದೆ. ಆದರೆ, ಅನೇಕ ಬಾವಲಿಗಳು ಮನೆಯಿಂದ ಹಾರಿಹೋಗಿವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಬಾವಲಿಗಳನ್ನು ಸ್ಪರ್ಶಿಸ ಬೇಡಿ, ಅವುಗಳಿಂದ ವೈರಸ್​ ಹಾಗೂ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದು, ಹಾಗೇನಾದರೂ ಬಾವಲಿಗಳನ್ನು ಕಂಡಲ್ಲಿ ನಮಗೆ ವಿಷಯ ಮುಟ್ಟಿಸಿ ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ದುಬೈನಲ್ಲಿ ದುರಂತ ಸಾವಿಗೀಡಾದ ರಷ್ಯಾ ಸುಂದರಿಯ ಕಣ್ಣೀರ ಕತೆ ಇದು…!

    ಎಲ್​ಪಿಯು ವಿದ್ಯಾರ್ಥಿಗಳಿಗೇ ಆದ್ಯತೆ ನೀಡುತ್ತಿವೆ ಗೂಗಲ್​, ಮೈಕ್ರೋಸಾಫ್ಟ್​ನಂತಹ ಉದ್ಯಮ ದೈತ್ಯ ಸಂಸ್ಥೆಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts