More

    ಶುಶ್ರೂಷಕರ ಕಾರ್ಯ ಶ್ಲಾಘನೀಯ, ಸಿದ್ದರಾಮ ಶರಣರು ಹೇಳಿಕೆ

    ಸಿಂಧನೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಶುಶ್ರೂಷಕರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿರುವುದು ಶ್ಲಾಘನೀಯ ಎಂದು ವೆಂಕಟಗಿರಿ ಕ್ಯಾಪ್‌ನ ಸಿದ್ಧಾಶ್ರಮದ ಸಿದ್ದರಾಮ ಶರಣರು ಹೇಳಿದರು.

    ನಗರದಲ್ಲಿ ಶನಿವಾರ ಸನ್‌ರೈಸ್ ಸ್ಕೂಲ್ ಆಫ್ ನರ್ಸಿಂಗ್ ರಾಷ್ಟ್ರೀಯ ಶುಶ್ರೂಷಕರ ದಿನ ಹಾಗೂ ರಕ್ತ ಪರೀಕ್ಷಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ನರ್ಸಿಂಗ್ ಕ್ಷೇತ್ರದಲ್ಲಿ ಬಹಳ ಅವಕಾಶಗಳಿದ್ದು, ನರ್ಸಿಂಗ್ ವಿದ್ಯಾರ್ಥಿಗಳು ಒಳ್ಳೆಯ ಸೇವೆಯೊಂದಿಗೆ ಹೆಸರು ಪಡೆಯಬೇಕು ಎಂದರು.

    ಇದನ್ನೂ ಓದಿ: ನರ್ಸಿಂಗ್​ ಕಲಿತವರಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ

    ಸನ್‌ರೈಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇರ್ಫಾನ್ ಕೆ.ಮಾತನಾಡಿ, ಶುಶ್ರೂಷಕರ ಕಾರ್ಯ ತುಂಬಾ ದೊಡ್ಡದು. ಸಮಾಜದಲ್ಲಿ ಅವರಿಗೆ ವಿಶೇಷ ಗೌರವವಿದೆ ಎಂದರು. ಬಿ.ಎ. ಕರೀಂಸಾಬ್ ಕವಿತಾಳ ಅಧ್ಯಕ್ಷತೆ ವಹಿಸಿದ್ದರು.

    ಶಾಂತಗೌಡ ಪಾಟೀಲ್, ಡಾ.ರಾಜಶೇಖರ ಹಿರೇಮಠ, ರಾಚೋಟಿ, ಅಮೃತಮ್ಮ, ಹಿರಿಯ ನರ್ಸಿಂಗ್ ಅಧಿಕಾರಿ ಪುಷ್ಪಾರಾಣಿ, ಹಿರಿಯ ಫಾರ್ಮಸಿ ಅಧಿಕಾರಿ ಶಾವಿ, ಹೇಮಲತಾ, ಬಾಲಮ್ಮ, ಪದ್ಮಾ, ಸನ್‌ರೈಸ್ ಸಂಸ್ಥೆ ಕಾರ್ಯದರ್ಶಿ ಇರ್ಷಾದ್ ಕೆ., ಪ್ರಾಚಾರ್ಯ ಸಿರಿಲ್, ಫಾರ್ಮಸಿ ಪ್ರಾಂಶುಪಾಲ ವಾಸೀಮ್ ಹುಸೇನ್, ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಚಾರ್ಯ ಚಕ್ರವರ್ತಿ, ಅನೀಲ್ ಡಿ., ಆಂಜನೇಯ, ನಜೀರ್‌ಸಾಬ್ ಕೋಲಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts