More

    ನರ್ಸಿಂಗ್​ ಕಲಿತವರಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಹೆಗ್ಗೇರಿಯ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಜಿಎನ್​ಎಂ ಹಾಗೂ ಬಿಎಸ್​ಸಿ ನರ್ಸಿಂಗ್​ ಮಹಾವಿದ್ಯಾಲಯದ ವಿದ್ಯಾಥಿ೯ಗಳಿಗೆ ಶುಕ್ರವಾರ ದೀಪ ಬೆಳಗುವ ಮೂಲಕ ಪ್ರಮಾಣ ಸ್ವೀಕಾರ ಬೋಧಿಸಲಾಯಿತು.
    ಈ ವೇಳೆ ಸಮಿತಿ ಕಾರ್ಯದಶಿ೯ ಡಾ.ಸಂಜೀವ ಜೋಶಿ ಮಾತನಾಡಿ, ನರ್ಸಿಂಗ್ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಭಾರತದ ನರ್ಸಿಂಗ್ ವಿದ್ಯಾಥಿರ್ಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ತ್ಯಾಗ ಮನೋಭಾವದ ವತ್ತಿಯನ್ನು ಆರಿಸಿಕೊಂಡ ವಿದ್ಯಾಥಿ೯ಗಳನ್ನು ಅಭಿನಂದಿಸಿದರು.
    ಡಾ.ಪಿ.ಕೆ.ಗಂಡಮಾಲಿ ಮಾತನಾಡಿ, ಇದೇ ಶೈಕ್ಷಣಿಕ ವರ್ಷದಿಂದ ಬಿಎಸ್​ಸಿ ನರ್ಸಿಂಗ್​ ಪ್ರಾರಂಭಿಸಲಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ವಿದ್ಯಾಥಿರ್ಗಳು ಪ್ರವೇಶಾತಿ ಪಡೆದಿದ್ದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
    ಸಮಿತಿ ಖಜಾಂಚಿ ಎಸ್​.ಆರ್​.ಮಾಮಲೆದೇಶಪಾಂಡೆ, ಆಯುರ್ವೇದ ಮಹಾವಿದ್ಯಾಲದ ಪ್ರಾಚಾರ್ಯ ಡಾ.ಪ್ರಶಾಂತ ಎ.ಎಸ್​., ನರ್ಸಿಂಗ್​ ಕಾಲೇಜಿನ ಪ್ರಾಚಾಯೆ೯ ಸವಿತಾ ಪಿ.ಸಿ., ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts