More

    ಸೌಹಾರ್ದತೆಗಾಗಿ ಸರಳ ಸಾಮೂಹಿಕ ವಿವಾಹ

    ದಾವಣಗೆರೆ: ಸಾಮೂಹಿಕ ಸರಳ ವಿವಾಹಕ್ಕೆ ಆದ್ಯತೆ ನೀಡುವ ಮೂಲಕ ಸೌಹಾರ್ದತೆಗೆ ಮುನ್ನುಡಿ ಬರೆಯುವಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

    ಹೊನ್ನಾಳಿಯ ಹಿರೇಕಲ್ಮಠದಲ್ಲಿ ಭಾನುವಾರ ಆಯೊಜಿಸಿದ್ದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ಸರಳ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಗೊಳ್ಳುತ್ತದೆ. ಮುಖ್ಯವಾಗಿ ವರದಕ್ಷಿಣೆ ಪಿಡುಗು ದೂರಾಗಿ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.

    ಇತ್ತೀಚೆಗೆ ಅನೇಕರು ಮದುವೆಯನ್ನು ಐಶ್ವರ್ಯ, ಅಂತಸ್ತು, ಗೌರವ ಪ್ರದರ್ಶನದ ವೇದಿಕೆ ಮಾಡಿಕೊಂಡಿದ್ದಾರೆ. ಅದ್ದೂರಿ ಮದುವೆಗಳಿಂದ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ. ಆಡಂಬರ ಬಿಟ್ಟು ಸರಳತೆ ಮೆರೆದು ಉಳಿದ ಹಣವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಲು ಸಲಹೆ ನೀಡಿದರು.

    ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರು ಮಕ್ಕಳ ಮದುವೆಗೆ ಅನಿವಾರ್ಯವಾಗಿ ಸಾಲ ಮಾಡುತ್ತಾರೆ. ನಂತರ ಆರ್ಥಿಕವಾಗಿ ದಿವಾಳಿಯಾಗುತ್ತಾರೆ ಎಂದು ವಿಷಾದಿಸಿದರು.

    ಖರ್ಚು-ವೆಚ್ಚ ತಗ್ಗಿಸುವ ಹಾಗೂ ವರದಕ್ಷಿಣೆ ದೂರ ಮಾಡುವ ಸರಳ ಮದುವೆಗಳ ಬಗ್ಗೆ ಪೋಷಕರು, ವಧು ವರರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
    ಹಾರ‌್ನಹಳ್ಳಿ ರಾಮಲಿಂಗೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು, ರಾಂಪುರ ಬೃಹನ್ಮಠದ ಶಿವಕುಮಾರ ಹಾಲಸ್ವಾಮೀಜಿ ಹಿತವಚನ ನೀಡಿದರು.

    ಪುರಸಭಾಧ್ಯಕ್ಷೆ ಸುಮಾ ಮಂಜುನಾಥ್ ಇಂಚರ, ಪ್ರಾಚರ್ಯರಾದ ಬಸವರಾಜ ಉಪ್ಪಿನ್, ಪ್ರವೀಣ್, ವೀರಣ್ಣ ಗುಂಡಗಟ್ಟಿ, ಪರಮೇಶ್ ಪಟ್ಟಣಶೆಟ್ಟಿ, ಪುರಸಭಾ ಸದಸ್ಯ ಹೊಸಕೇರಿ ಸುರೇಶ್, ಬಿ. ಸುರೇಶ್, ಶಿವು ಹುಡೇದ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts