More

    ಕೋವಿಡ್​ ರೋಗಿಯ ಜತೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ನರ್ಸ್​: ಪ್ರಕರಣದಲ್ಲಿದೆ ಊಹೆಗೂ ಮೀರಿದ ಸ್ಫೋಟಕ ಟ್ವಿಸ್ಟ್​!

    ಜಕಾರ್ತ: ಪಿಪಿಇ ಕಿಟ್​ ಬಿಚ್ಚಿಟ್ಟು ಕರೊನಾ ವೈರಸ್​ ರೋಗಿಯ ಜತೆ ಸೆಕ್ಸ್​ ಮಾಡಿದ್ದನ್ನು ಒಪ್ಪಿಕೊಂಡ ಇಂಡೋನೇಷ್ಯಾ ಮೂಲದ ನರ್ಸ್ ಅಮಾನತು ಶಿಕ್ಷೆಗೆ ಗುರಿಯಾ​ಗಿರುವುದಾಗಿ ವರದಿಯಾಗಿದೆ.

    ಈ ವರದಿಯಲ್ಲಿರುವ ಸ್ಫೋಟಕ ಟ್ವಿಸ್ಟ್​ ಏನೆಂದರೆ, ನರ್ಸ್​ ಮತ್ತು ಕರೊನಾ ರೋಗಿ ಇಬ್ಬರು ಪುರುಷರಾಗಿದ್ದು, ಆಸ್ಪತ್ರೆಯ ಟಾಯ್ಲೆಟ್​ ರೂಮ್​ನಲ್ಲಿ ಭೇಟಿಯಾಗುತ್ತಿದ್ದುರ ಬಗ್ಗೆ ಸ್ವತಃ ರೋಗಿಯೇ ತನ್ನ ಜಾಲತಾಣದಲ್ಲಿ ಬರೆದುಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ. ನರ್ಸ್​ ಜತೆ ನಡೆಸಿದ ಅಶ್ಲೀಲ ಸಂಭಾಷಣೆಯ ವಾಟ್ಸ್​ಆ್ಯಪ್​ ಸ್ಕ್ರೀನ್​ ಶಾಟ್​ ಅನ್ನು ಜಾಲತಾಣದಲ್ಲಿಯೂ ಅಪ್​ಲೋಡ್​ ಮಾಡಿಕೊಂಡಿದ್ದಾನೆ.

    ಇದನ್ನೂ ಓದಿ: ಪಾಕ್​ ಮಹಿಳೆ ಭಾರತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ! ತನಿಖೆಯಿಂದ ಬಯಲಾಯಿತು ಮಹಿಳೆಯ ನಿಜ ಬಣ್ಣ

    ಇಷ್ಟೇ ಅಲ್ಲದೆ, ಪುರುಷ ನರ್ಸ್​ ಪಿಪಿಇ ಕಿಟ್​ ಆಸ್ಪತ್ರೆಯ ನೆಲದ ಮೇಲೆ ಬಿದ್ದಿರುವ ಫೋಟೋವನ್ನು ಸಹ ಕರೊನಾ ರೋಗಿ ಪೋಸ್ಟ್​ ಮಾಡಿಕೊಂಡಿದ್ದಾನೆ. ಇಬ್ಬರು ಸಲಿಂಗಿಕಾಮಿಗಳನ್ನು ಗುರುತಿಸಲಾಗಿದ್ದು, ತಾವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

    ನರ್ಸ್​ಗೆ ಕರೊನಾ ಪರೀಕ್ಷೆಯನ್ನು ಮಾಡಿಸಲಾಗಿದ್ದು, ನೆಗಿಟಿವ್​ ವರದಿ ಬಂದಿದ್ದರಿಂದ ಆತನನ್ನು ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಕರೊನಾ ರೋಗಿಗೆ ಈಗಲೂ ಪಾಸಿಟಿವ್​ ಇರುವುದರಿಂದ ಆತನನ್ನು ಪ್ರತ್ಯೇಕವಾಗಿ ಇಡಲಾಗಿದೆ.

    ಇದನ್ನೂ ಓದಿ: ಸಿವಿಲ್ ಆಸ್ಪತ್ರೆಯಲ್ಲೇ ಮಹಿಳೆಯ ಮರ್ಡರ್! ಪ್ರೀತಿಸಿ ಮೋಸ ಮಾಡಿದವಳ ಜೀವವನ್ನೇ ತೆಗೆದ ಪಾಗಲ್​ ಪ್ರೇಮಿ!

    ಪ್ರಕರಣವನ್ನು ಕೇಂದ್ರ ಜಕಾರ್ತ ಪೊಲೀಸರಿಗೆ ವರ್ಗಾಯಿಸಲಾಗಿದೆ. ಒಂದು ವೇಳೆ ಅಪರಾಧ ಸಾಬೀತಾದಲ್ಲಿ ಇಂಡೋನೇಷ್ಯಾ ಪೋರ್ನೋಗ್ರಫಿ ಕಾನೂನಿನ ಅಡಿಯಲ್ಲಿ ನರ್ಸ್​ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇನ್ನು ಈ ಘಟನೆ ವಿಸ್ಮ ಅಟ್ಲೆಟ್​ ಎಮರ್ಜೆನ್ಸಿ ಆಸ್ಪತ್ರೆಯಲ್ಲಿ ನಡೆದಿದೆ. (ಏಜೆನ್ಸೀಸ್​)

    3 ವರ್ಷದ ಮಗುವನ್ನು ರೇಪ್​ ಮಾಡಿ ಕೊಂದೇ ಹಾಕಿದ ಪಾಪಿ! ಪೆರೋಲ್​ ಪಡೆದು ಹತ್ತೇ ದಿನದಲ್ಲಿ ಮತ್ತೆ ಅರೆಸ್ಟ್​!

    ಮಗಳ ತಂದೆಯಾದ ನಟ, ಸಂಸದ: ಟ್ವಿಟರ್​ನಲ್ಲಿ ಮಗುವಿನ ಫೋಟೋ ಜತೆ ಸಂತಸ

    ಜಿಯೋ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್​: ದೇಶಾದ್ಯಂತ ಉಚಿತ ಕರೆ ಸೇವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts