More

    ಚೀನಾಕ್ಕೆ ಸೆಡ್ಡು- ಭಾರತದಲ್ಲಿ ತಯಾರಾಯ್ತು ಕೋಟಿಗೂ ಅಧಿಕ ಸ್ವದೇಶಿ ಪಿಪಿಇ ಕಿಟ್​!

    ನವದೆಹಲಿ: ಈಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವದೇಶ ವಸ್ತುಗಳನ್ನು ಬಳಕೆ ಮಾಡುವಂತೆ ಹಾಗೂ ಸಾಧ್ಯವಾದಷ್ಟು ಸ್ವದೇಶಿ ಉತ್ಪನ್ನಗಳನ್ನೇ ತಯಾರು ಮಾಡುವಂತೆ ಕರೆ ಕೊಟ್ಟಿದ್ದರು. ಈ ಕರೆಯ ಬೆನ್ನಲ್ಲೇ ಇದೀಗ ಭಾರತ ಇತಿಹಾಸವನ್ನೇ ಸೃಷ್ಟಿಸಿಬಿಟ್ಟಿದೆ. ಕರೊನಾ ಮಹಾಮಾರಿಯನ್ನು ದೇಶದಿಂದ ತೊಲಗಿಸುವ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿಗೆ ರಕ್ಷಣಾ ಕವಚ ನೀಡುವ ಹೊಸ ಸಾಹಸಕ್ಕೆ ಕೈಹಾಕಿದ್ದ ಭಾರತ ಅಲ್ಪ ಅವಧಿಯಲ್ಲಿಯೇ ಯಶಸ್ಸನ್ನೂ ಸಾಧಿಸಿಬಿಟ್ಟಿದೆ!

    ಹೌದು. ಕರೊನಾ ವೈರಸ್​ ಭಾರತದ ಮೇಲೆ ದಾಳಿ ಮಾಡಿದಾಗಿನಿಂದಲೂ ಈ ವೈರಸ್​ಗೆ ಸಂಬಂಧಪಟ್ಟ ವೈದ್ಯಕೀಯ ಉಪಕರಣಗಳಿಗೆ ಭಾರತ ಸೇರಿದಂತೆ ಹಲವು ದೇಶಗಳು ಕರೊನಾ ತವರು ಚೀನಾದ ಮೇಲೆಯೇ ಅವಲಂಬನೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅದರಲ್ಲಿಯೂ ವೈದ್ಯರಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಪಿಪಿಇ ಕಿಟ್​ಗೂ (ವೈಯಕ್ತಿಕ ರಕ್ಷಣಾ ಕವಚ) ಚೀನಾದ ಮೇಲೆ ಅವಲಂಬನೆ ಹೆಚ್ಚಿತ್ತು.

    ಇದನ್ನೂ ಓದಿ:  ಸರ್ಕಾರದ ವಿರುದ್ಧ ಮಾತನಾಡಿದರೆ ಕಠಿಣ ಶಿಕ್ಷೆ : ಹೊರಟಿದೆ ಹೊಸ ಆದೇಶ

    ಇದೇ ಕಾರಣಕ್ಕೆ ಚೀನಾ ತನ್ನ ಕುತಂತ್ರ ಬುದ್ಧಿ ತೋರಿ ಕಳಪೆ ಗುಣಮಟ್ಟದ ಪಿಪಿಇ ಕಿಟ್​ಗಳನ್ನು ವಿವಿಧ ದೇಶಗಳಿಗೆ ಸರಬರಾಜು ಮಾಡುತ್ತಿದೆ ಎಂಬ ಆರೋಪಗಳೂ ಬಂದಿವೆ. ಮಾತ್ರವಲ್ಲದೇ ಇದಕ್ಕೆ ಅಧಿಕ ಶುಲ್ಕವನ್ನೂ ವಿಧಿಸಬೇಕಾದ ಅನಿವಾರ್ಯತೆ ಬೇರೆ ಬೇರೆ ದೇಶಗಳಿಗೆ ಅನಿವಾರ್ಯವಾಗಿದೆ.

    ಆದರೆ ಚೀನಾಕ್ಕೆ ಸೆಡ್ಡು ಹೊಡೆದಿರುವ ಭಾರತ, ಅತ್ಯಲ್ಪ ಅವಧಿಯಲ್ಲಿಯೇ, ಅತ್ಯುತ್ತಮ ಗುಣಮಟ್ಟದ ಪಿಪಿಇ ಕಿಟ್​ಗಳನ್ನು ತಯಾರಿಸಿದೆ. ಅದರ ಸಂಖ್ಯೆ ಇದೀಗ ಒಂದು ಕೋಟಿಯನ್ನು ಮೀರಿದೆ. ಈ ಕುರಿತು ಜವಳಿ ಸಚಿವಾಲಯ ಟ್ವೀಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ 1 ಕೋಟಿ ಪಿಪಿಇ- ರಕ್ಷ ಕವಚಗಳನ್ನು ಉತ್ಪಾದಿಸಲಾಗಿದೆ. ಆತ್ಮ ನಿರ್ಭರ್ ಭಾರತ್ ಅಭಿಯಾನದ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಲಾಗಿದೆ ಎಂದು ಜವಳಿ ಸಚಿವಾಲಯ ಟ್ವೀಟ್​ನಲ್ಲಿ ಹೇಳಲಾಗಿದೆ. ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

    ಇದನ್ನೂ ಓದಿ:  ಅಬ್ಬಬ್ಬಾ! ಇದು ರೆಡ್​ಝೋನ್​ ಕುದುರೆ: ಹತ್ತಿರ ಹೋದರೆ ಭಾರಿ ಡೇಂಜರ್​!

    ಎರಡು ತಿಂಗಳೊಳಗೆ ಪಿಪಿಇ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕಳೆದ ವಾರವಷ್ಟೇ ಸರ್ಕಾರ ಹೇಳಿತ್ತು. ಅದನ್ನೀಗ ಸಾಧಿಸಿ ತೋರಿಸಿದೆ. ಸದ್ಯ ಈ ಕಿಟ್​ ತಯಾರಿಕೆಯಲ್ಲಿ ಚೀನಾ ವಿಶ್ವದಲ್ಲಿ ನಂಬರ್ 1 ಸ್ಥಾನದಲ್ಲಿದೆ.

    ಆಪ್ತ ಸಲಹೆ: ಗುರಿಗಳು ಸಾಕಷ್ಟಿವೆ, ಓದಲು ಆಗುತ್ತಲೇ ಇಲ್ಲ, ಇದಕ್ಕೆ ಕಾರಣವೇನು? ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts