More

    ಕಟಕಟೆ ಏರುತ್ತಿರುವ ಲಿವಿಂಗ್ ಟುಗೆದರ್ ಕ್ವಾಟ್ಲೆ!; ಮಹಿಳಾ ಆಯೋಗ, ಠಾಣೆ ಮೆಟ್ಟಿಲೇರುವ ಕೇಸ್ ಏರಿಕೆ

    | ಪಂಕಜ ಕೆ.ಎಂ. ಬೆಂಗಳೂರು

    ಪಾಶ್ಚಿಮಾತ್ಯ ಪರಿಕಲ್ಪನೆಯ ಲಿವಿಂಗ್ ಟುಗೆದರ್ ಮುಕ್ತ ಜೀವನವನ್ನು ಪ್ರತಿಪಾದಿಸಿದರೂ, ಈ ಜೀವನ ಅಪ್ಪಿಕೊಂಡವರ ಸಂತಸ ನೀರ ಮೇಲಿನ ಗುಳ್ಳೆಯಂತಾಗುತ್ತಿದೆ. ಕುಟುಂಬ, ವಿವಾಹ ಬಂಧನ, ಮನೆ- ಮಕ್ಕಳು ಎಂಬ ಕಟ್ಟುಪಾಡಿನಲ್ಲಿ ಸಿಲುಕಲು ಇಚ್ಛಿಸದೆ ಸ್ವತಂತ್ರ ಹಾಗೂ ಮುಕ್ತ ಜೀವನ ನಡೆಸಲು ಬಯಸುವವರು ‘ಲಿವಿಂಗ್ ಟುಗೆದರ್’ ಅಪ್ಪಿಕೊಳ್ಳುತ್ತಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಭ್ರಮನಿರಸನಗೊಂಡು ವಂಚನೆ ಹಾಗೂ ದೌರ್ಜನ್ಯದ ದೂರುಹೊತ್ತು ಪೊಲೀಸ್ ಠಾಣೆ ಹಾಗೂ ಮಹಿಳಾ ಆಯೋಗದ ಮೆಟ್ಟಿಲೇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಹಿಳಾ ಆಯೋಗದಲ್ಲಿ ದಾಖಲಾಗಿರುವ ದೂರುಗಳಲ್ಲಿ ಶೇ. 40-50 ‘ಲಿವಿಂಗ್ ಟುಗೆದರ್’ ವ್ಯವಸ್ಥೆಯನ್ನು ಒಪ್ಪಿಕೊಂಡ ಹೆಣ್ಣುಮಕ್ಕಳದ್ದೇ ಆಗಿದೆ. ಇವರಲ್ಲಿ ಹೆಚ್ಚಿನವರು ಹಣ ಮತ್ತು ಒಡವೆ ಕಳ್ಳತನ ಹಾಗೂ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಬರುವ ಹೆಣ್ಣುಮಕ್ಕಳು, ಕೆಲಸದ ನಿಮಿತ್ತ ನಗರದಲ್ಲಿ ಒಂಟಿಯಾಗಿ ನೆಲೆಸಿರುವವರು ಇಂತಹ ಸಂಬಂಧ ಒಪ್ಪಿಕೊಂಡು ವಂಚನೆಗೆ ಒಳಗಾದ ನಂತರ ದೂರು ನೀಡಲು ಬರುತ್ತಾರೆ ಎನ್ನುತ್ತಾರೆ ಮಹಿಳಾ ಆಯೋಗದ ಸಿಬ್ಬಂದಿ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಪರಿಚಯವಾಗಿ ಸಹಜೀವನ ನಡೆಸಿದ ನಂತರ ಮೋಸ ಹೋಗುತ್ತಿರುವ ಪ್ರಕರಣಗಳು ಜಾಸ್ತಿಯಾಗಿವೆ.

    ಜಾಲತಾಣಗಳ ಪ್ರಭಾವ: ಕೆಲ ಪ್ರಕರಣಗಳಲ್ಲಿ ಜಾಲತಾಣಗಳ ಪ್ರಭಾವವೂ ಇದ್ದು, ಫೇಸ್​ಬುಕ್, ಇನ್​ಸ್ಟ್ರಾಗ್ರಾಮ್ಲ್ಲಿ ಮೆಸೇಜ್ ಮಾಡುವ ಮೂಲಕ ಪರಿಚಯವಾಗಿ, ಸ್ನೇಹಿತರಾಗುತ್ತಾರೆ. ಬಳಿಕ ತನಗೆ ಆರ್ಥಿಕ ಸಮಸ್ಯೆ ಇದೆ ಎಂದು ಹಣದ ಬೇಡಿಕೆ ಇಡುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲ ಹೆಣ್ಣುಮಕ್ಕಳು ಏನನ್ನೂ ಯೋಚಿಸಿದೆ ಅವರಿಗೆ ಆನ್​ಲೈನ್ ಮೂಲಕ ಹಣ ಕಳುಹಿಸಿ ಮೋಸ ಹೋಗುತ್ತಾರೆ. ಈ ಪ್ರಕರಣಗಳು ಸೈಬರ್ ಕ್ರೖೆಮ್ ಅಧೀನದಲ್ಲಿ ಬರುತ್ತವೆ ಎಂದು ನಾಯ್ಡು ಹೇಳುತ್ತಾರೆ.

    ಜಾಗೃತಿ ಮೂಡಿಸುವ ಕಾರ್ಯ: ಲಿವಿಂಗ್ ಟುಗೆದರ್ ಬಗ್ಗೆ ಕಾನೂನು ಅರಿವಿನ ಕೊರತೆ ಹೆಣ್ಣು ಮಕ್ಕಳು ವಂಚನೆಗೆ ಒಳಗಾಗಲು ಕಾರಣವಾಗಿದೆ. ಈ ಸಂಬಂಧದಲ್ಲಿ ಬಿರುಕು ಉಂಟಾದಾಗ ಬಹಳಷ್ಟು ಹೆಣ್ಣು ಮಕ್ಕಳು ಅತ್ಯಾಚಾರ ಎಂದು ಹೇಳಿ ದೂರು ನೀಡಲು ಬರುತ್ತಾರೆ. ಆದರೆ, ಲಿವಿಂಗ್ ಟುಗೆದರ್ ಎನ್ನುವುದು ಪರಸ್ಪರ ಒಪ್ಪಿಕೊಂಡ ಸಂಬಂಧ. ಹೀಗಾಗಿ ಇದರಲ್ಲಿ ಅತ್ಯಾಚಾರ ಎಂದು ದೂರು ನೀಡಲು ಸಾಧ್ಯವಿಲ್ಲ ಹಾಗೂ ಈ ಸಂಬಂಧದಲ್ಲಿ ಜೀವನಪರ್ಯಂತ ಇಬ್ಬರು ಜೊತೆಯಾಗಿಯೇ ಇರಬೇಕು ಎಂಬ ಕಾನೂನೂ ಇಲ್ಲ. ಈ ಕಾರಣದಿಂದಲೇ ಬಹಳಷ್ಟು ಹೆಣ್ಣಮಕ್ಕಳು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಶಾಲಾ- ಕಾಲೇಜುಗಳು ಹಾಗೂ ಉದ್ಯೋಗ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಹಿಳಾ ಆಯೋಗದಿಂದ ನಡೆಯುತ್ತಿದೆ. ಇಂತಹ ವಂಚನೆಯಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಪಾಲಕರು ಹೆಚ್ಚು ಎಚ್ಚರಿಕೆ ವಹಿಸುವ ಅಗತ್ಯವಿದೆ ಎನ್ನುತ್ತಾರೆ ನಾಯ್ಡು.

    ಮದುವೆ ಬಳಿಕ ಅನ್ಯೋನ್ಯತೆ ಮಾಯ: ಲಿವಿಂಗ್ ಟುಗೆದರ್ ಹೊರತಾಗಿ ವಿವಾಹಪೂರ್ವ ಸಂಬಂಧಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗುವ ಯುವಕ, ಯುವತಿ ಮದುವೆ ಆಗಲು ನಿರ್ಧರಿಸುತ್ತಾರೆ. ಕುಟುಂಬದ ಜತೆಯಲ್ಲಿಯೇ ಇದ್ದರೂ ಮದುವೆಗೂ ಮೊದಲು ಅನ್ಯೋನ್ಯವಾಗಿ ಇರುತ್ತಾರೆ. ನಂತರ ಭಿನ್ನಾಭಿಪ್ರಾಯ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಕರಣಗಳು ಹೆಚ್ಚಾಗುತ್ತಿವೆ.

    ಅತ್ಯಾಚಾರ ಪ್ರಕರಣಗಳು: ರಾಜ್ಯದಲ್ಲಿ ಪ್ರತಿದಿನ 1 ಅಥವಾ 2 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಆಗಸ್ಟ್​ನಲ್ಲಿ 47 ಮತ್ತು ಸೆಪ್ಟೆಂಬರ್​ನಲ್ಲಿ 46 ಕೇಸ್​ಗಳಾಗಿವೆ. ಜನವರಿಯಿಂದ ಸೆಪ್ಟೆಂಬರ್-30ರ ವರೆಗೆ ರಾಜ್ಯದಲ್ಲಿ 417 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 235 ಪ್ರಕರಣಗಳಲ್ಲಿ ಪರಿಚಿತ ವ್ಯಕ್ತಿಯಿಂದಲೇ ಅತ್ಯಾಚಾರ ನಡೆದಿದೆ. ಉಳಿದಂತೆ ಸಂಬಂಧಿಕರಿಂದ 38 ಮತ್ತು ಅಕ್ಕಪಕ್ಕದ ಮನೆಯವರಿಂದ ನಡೆದ ಪ್ರಕರಣಗಳು 39 ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ.

    ಲಿವಿಂಗ್ ಟುಗೆದರ್ ಸಂಬಂಧ ಬಹುತೇಕ ವಂಚನೆಯಲ್ಲಿ ಕೊನೆಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಆಯೋಗಕ್ಕೆ ಬರುತ್ತಿರುವ ದೂರುಗಳಲ್ಲಿ ಇವುಗಳ ಸಂಖ್ಯೆಯೇ ಹೆಚ್ಚು. ಇದಕ್ಕೆ ಕಾರಣ ಆಕರ್ಷಣೆ ಹಾಗೂ ಕಾನೂನು ಅರಿವಿನ ಕೊರತೆ. ಹೀಗಾಗಿ ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

    | ಪ್ರಮೀಳಾ ನಾಯ್ಡು ಅಧ್ಯಕ್ಷೆ, ಮಹಿಳಾ ಆಯೋಗ

    ನಗರದ ಉದ್ಯೋಗಸ್ಥರೇ ಹೆಚ್ಚು?: ಲಿವಿಂಗ್ ಟುಗೆದರ್ ಸಂಬಂಧದಿಂದ ವಂಚನೆಗೆ ಒಳಗಾದವರಲ್ಲಿ ನಗರ ಪ್ರದೇಶದವರೇ ಹೆಚ್ಚಿನವರಿದ್ದು, ವಿದ್ಯಾವಂತ ಹಾಗೂ ಉದ್ಯೋಗಸ್ಥ ಹೆಣ್ಣುಮಕ್ಕಳೇ ಹೆಚ್ಚಿದ್ದಾರೆ. ವ್ಯಕ್ತಿಯ ಪೂರ್ಣ ಪರಿಚಯ, ಹಿನ್ನೆಲೆ ಇದ್ಯಾವುದನ್ನೂ ತಿಳಿಯದೆ ಕೆಲವೇ ದಿನಗಳ ಪರಿಚಯದಿಂದ ಆಕರ್ಷಣೆಗೆ ಒಳಗಾಗಿ ಲಿವಿಂಗ್ ಟುಗೆದರ್ ಒಪ್ಪಿಕೊಳ್ಳುತ್ತಾರೆ. ದಿನ ಕಳೆದಂತೆ ಇಬ್ಬರ ನಡುವೆ ಹೊಂದಾಣಿಕೆ ಆಗದಿದ್ದಾಗ ಜಗಳ, ಹಲ್ಲೆ ಪ್ರಕರಣಗಳು ಸಾಮಾನ್ಯವಾಗುತ್ತವೆ. ಈವರೆಗೂ ವರ್ಷಕ್ಕೆ ಇಂತಹ 8-10 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಈ ವರ್ಷ ಈ ಸಂಖ್ಯೆ 20-25ಕ್ಕೆ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮಹಿಳಾ ಆಯೋಗದಲ್ಲಿ ಪ್ರೇಮ ವೈಫಲ್ಯಕ್ಕೆ ಸಂಬಂಧಿಸಿದಂತೆ 98 ದೂರುಗಳು ದಾಖಲಾಗಿದ್ದು, ಇವುಗಳಲ್ಲಿ ಶೇ.40-50 ಲಿವಿಂಗ್ ಟುಗೆದರ್ ಹಾಗೂ 21 ಪ್ರಕರಣಗಳು ಸೈಬರ್ ಕ್ರೖೆಮ್ೆ ಸಂಬಂಧಿಸಿದೆ. ಇವುಗಳಲ್ಲಿ ಆಯೋಗವು 23 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 75 ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

    ಭೀಕರ ಅಪಘಾತ: ಟ್ರಕ್​-ಆಟೋ ಮುಖಾಮುಖಿ ಡಿಕ್ಕಿ, ಐವರು ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts