More

    ಟೆಲಿಗ್ರಾಮ್​ ಮೂಲಕ ಬೆತ್ತಲೆ ವಿಡಿಯೋ ಕಾಲ್​: 5 ಲಕ್ಷ ರೂ. ಕಳೆದುಕೊಂಡ ಯುವಕ, ಕೊನೆಗೂ ಸಿಕ್ಕಿಬಿದ್ದ ಕಿರಾತಕಿ

    ವಯನಾಡು: ಟೆಲಿಗ್ರಾಮ್​ನಲ್ಲಿ ಬೆತ್ತಲೆ​ ವಿಡಿಯೋ ಕಾಲ್ ಮಾಡುವ ಮೂಲಕ ಯುವಕನೊಬ್ಬನಿಗೆ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ರಾಜಸ್ಥಾನ ಮೂಲದ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಬಂಧಿತಳನ್ನು ಮನಿಷಾ ಮೀನಾ (28) ಎಂದು ಗುರುತಿಸಲಾಗಿದೆ. ಈಕೆ ರಾಜಸ್ಥಾನದ ಸವಾಯಿ ಮದೇಪುರ ಬಳಿಯ ಜೆರವಾಡ ಮೂಲದವಳು. ವಯನಾಡು ಸೈಬರ್​ ಪೊಲೀಸರು ಜೈಪುರದಲ್ಲಿ ಬಂಧನ ಮಾಡಿದ್ದಾರೆ. ಕೇರಳದ ಬಥೇರಿ ಮೂಲದ ಯುವಕನನ್ನು ಬೆದರಿಸಿ ಬರೋಬ್ಬರಿ 5 ಲಕ್ಷ ರೂಪಾಯಿಯನ್ನು ಸುಲಿಗೆ ಮಾಡಿದ್ದಾಳೆ.

    ಯುವಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಏಳು ತಿಂಗಳ ಕಾಲ ತನಿಖೆ ನಡೆಸಿ ಮನಿಷಾ ಮೀನಾಳನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಕಳೆದ ವರ್ಷ ಜುಲೈನಲ್ಲಿ ನಡೆದಿತ್ತು. ಆರೋಪಿ ಯುವತಿ ಪಂಜಾಬ್ ಮೂಲದ ವ್ಯಕ್ತಿಯ ಹೆಸರಿನಲ್ಲಿ ಸಿಮ್ ಕಾರ್ಡ್ ಬಳಸಿ ಟೆಲಿಗ್ರಾಮ್​ ಖಾತೆ ತೆರೆದಿದ್ದಾಳೆ. ನಕಲಿ ಬ್ಯಾಂಕ್ ಖಾತೆಗಳ ಮೂಲಕ ಯುವಕನಿಂದ ಹಣ ಪಡೆದಿದ್ದಾಳೆ. ಕೇರಳ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಮನೀಶಾ ಹಣವನ್ನು ಯುವಕನಿಗೆ ಹಿಂದಿರುಗಿಸಿದ್ದಾಳೆ.

    ಸೈಬರ್ ಪೊಲೀಸರ ಪ್ರಕಾರ, ಅಪರಿಚಿತ ಸಂಖ್ಯೆಗಳಿಂದ ಮೆಸೇಜ್​ ಮತ್ತು ವಿಡಿಯೋ ಕರೆಗಳನ್ನು ಸ್ವೀಕರಿಸುವ ಜನರು ಇಂತಹ ಅಪರಾಧಗಳಿಗೆ ಬಲಿಯಾಗುತ್ತಾರೆ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಅದು ಬೇಕು ಅನಿಸಿದಾಗ ಮದುವೆ ಆಗುತ್ತೇನೆ! ಖ್ಯಾತ ನಟಿ ಕೌಶಲ್ಯ ಓಪನ್​ ಟಾಕ್​

    ಮೆಟ್ರೋ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; FIR ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts