More

    VIDEO & PHOTOS: ಚಿಟ್ಟೆಯಲ್ಲ ಇದು, ಹೆಣ್ಣಿನ ಬೆತ್ತಲೆ ದೇಹದ ಮೇಲೆ ಸೃಷ್ಟಿಯಾದ ಭ್ರಮೆ; ದಿಟ್ಟಿಸಿ ನೋಡಿ ನಗ್ನ ಯುವತಿಯನ್ನು ಕಾಣುತ್ತೀರಿ…!

    ಈ ಫೋಟೋವನ್ನು ನೋಡಿ. ಒಂದು ಚಿಟ್ಟೆ..ಸೂರ್ಯಕಾಂತಿ ಹೂವಿನ ಮೇಲೆ ಕುಳಿತಿದೆ. ಅಬ್ಬಾ.! ಅದೆಷ್ಟು ಸೊಗಸಾಗಿದೆ, ನವಿರಾಗಿದೆ ಬಣ್ಣದ ಪಾತರಗಿತ್ತಿ ಎಂದೆನಿಸುತ್ತದೆ.

    ಇದು ನೈಜ ಚಿಟ್ಟೆಯೂ ಅಲ್ಲ, ಕ್ಯಾನ್ವಾಸ್​ ಪೇಂಟಿಂಗ್ ಕೂಡ ಅಲ್ಲ. ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಆ ಹಳದಿ ಬಣ್ಣದ ಹೂವಿನ ಮೇಲೆ ಒಬ್ಬಳು ನಗ್ನ ಯುವತಿ ಕಾಣಿಸುತ್ತಾಳೆ. ಥೇಟ್​ ಚಿಟ್ಟೆಯಾಕಾರದಲ್ಲಿಯೇ ಕುಳಿತು, ನಾಜೂಕಾಗಿ ಸುಳಿದಾಡುತ್ತಿದ್ದಾಳೆ.

    ಯುವತಿಯ ಸುಂದರ ಬೆತ್ತಲೆ ದೇಹಕ್ಕೆ ಅಷ್ಟು ಸೊಗಸಾಗಿ ಬಣ್ಣ ಬಳಿದು ಚಿಟ್ಟೆಯಾಗಿ ಮಾರ್ಪಡಿಸಿದ್ದು ಉತ್ತರ ಇಟಲಿ ಮೂಲದ ಚಿತ್ರಕಲಾವಿದ ಜೋಹಾನ್ಸ್ ಸ್ಟಟ್ಟರ್ ಎಂಬುವರು.

    ರೂಪದರ್ಶಿಯ ನಗ್ನ ದೇಹದ ಮುಂಭಾಗದಲ್ಲಿ ಇಂಚಿಂಚೂ ಬಣ್ಣಗಳಿಂದ ಬರೆದ ರೇಖೆಗಳಿವೆ. ತಲೆಯಿಂದ, ಕಾಲ ಬೆರಳ ತುದಿವರೆಗೂ ಯಥಾಪ್ರಕಾರ ಚಿಟ್ಟೆಯಂತೆ ಚಿತ್ರಿಸಲಾಗಿದೆ. ಆ ಯುವತಿಯೂ ಕೂಡ ಅಷ್ಟೇ ಕಲಾವಿದ ಹೇಳಿದ ಭಂಗಿಯಲ್ಲೆಲ್ಲ ನಿಂತು, ಕುಳಿತು ಶ್ರದ್ಧೆಯಿಂದ ಪೇಂಟಿಂಗ್​ ಮಾಡಿಸಿಕೊಂಡಿದ್ದಾರೆ. ಚಿತ್ರ ಕಲಾವಿದ ಮತ್ತು ರೂಪದರ್ಶಿ ಇಬ್ಬರ ಶ್ರಮವೂ ವ್ಯರ್ಥವಾಗಲಿಲ್ಲ. ಅದೊಂದು ಮೇರುಮಟ್ಟದ ಪೇಂಟಿಂಗ್​ ಆಗಿ ಹೊರಹೊಮ್ಮಿದೆ. ಮಹಿಳೆಯ ಬೆತ್ತಲೆ ದೇಹದ ಮೇಲೆ ಭ್ರಮೆಯೊಂದು ಸೃಷ್ಟಿಯಾಗಿದೆ…!

    ಇದಕ್ಕೆ ದಿ ಬಟರ್​ಫ್ಲೈ ಎಂದು ಹೆಸರಿಟ್ಟಿರುವ ಕಲಾವಿದ ಜೋಹಾನ್ಸ್ ಸ್ಟಟ್ಟರ್ ಅವರು ತಮ್ಮ ಕೆಲಸದ ಬಗ್ಗೆ ಸಂತೃಪ್ತಿ ಇದೆ ಎಂದಿದ್ದಾರೆ. ಇದು ನನ್ನ ಅತ್ಯುತ್ತಮ ಪೇಂಟಿಂಗ್​ ಸೃಷ್ಟಿ ಎಂದು ಹೇಳಿದ್ದಾರೆ.

    ಯುವತಿಯ ದೇಹದ ಮೇಲೆ ಹೇಗೆ ಚಿಟ್ಟೆಯನ್ನು ಚಿತ್ರಿಸಿದೆ ಎಂಬ ಬಗ್ಗೆ ಕಲಾವಿದ ವಿವರಿಸಿದ್ದಾರೆ. ಮೊದಲು ಚಿಟ್ಟೆಯ ಆಕೃತಿಯ ಒಂದು ಪೆನ್ಸಿಲ್​ ಸ್ಕೆಚ್​ ಹಾಕಿಕೊಂಡೆ. ನಂತರ ಅದೇ ಭಂಗಿಯಲ್ಲಿ ಯುವತಿಯನ್ನು ಕೂರಿಸಿ ಆಕೆಯ ಮೈಮೇಲೆ ರೇಖೆಗಳನ್ನು ಚಿತ್ರಿಸುತ್ತ ಹೋದೆ. ಅದರೊಳಗೆ ಬಣ್ಣಗಳನ್ನು ತುಂಬಿದೆ. ಅಂತ್ಯದಲ್ಲಿ ನನ್ನ ಮನಸಿನ ಕಲ್ಪನೆಯಲ್ಲಿ ಇದ್ದ ಚಿಟ್ಟೆಯ ಆಕೃತಿಯೇ ಹೊರಹೊಮ್ಮಿತು ಎಂದು ತಿಳಿಸಿದ್ದಾರೆ.

    ಹಾಗೇ ಒಂದು ಹಳದಿ ಹೂವಿನ ಚಿತ್ರವನ್ನೂ ಪೇಂಟ್​ ಮಾಡಿ, ಅದರ ಮೇಲೆ ಯುವತಿ ಚಿಟ್ಟೆಯ ಭಂಗಿಯಲ್ಲಿ ಕುಳಿತುಕೊಳ್ಳುವಂತೆ ರೂಪಿಸಿದೆ ಎಂದಿದ್ದಾರೆ.

    ಫೋಟೋ, ವಿಡಿಯೋಗಳನ್ನು ನೋಡಿದ ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನಲ್ಲಿ ಕಲ್ಪನೆ, ಯೋಜನೆಗಳು ಹುಟ್ಟಲು ಕೆಲವೇ ಕ್ಷಣ ಸಾಕಾಯಿತು. ಆದರೆ ಅದನ್ನು ಕಾರ್ಯಗತಗೊಳಿಸಲು ಹೆಚ್ಚಿನ ಸಮಯ ಹಿಡಿಯಿತು. ಇದೊಂದು ದೀರ್ಘಾವಧಿ ಪೇಂಟಿಂಗ್​ ಆಗಿತ್ತು ಎಂದು ಕಲಾವಿದ ತಿಳಿಸಿದ್ದಾರೆ.

    ಅದರಲ್ಲೂ ಚಿಟ್ಟೆಯಂತೆ ಕುಳಿತುಕೊಳ್ಳುವುದು, ಹಳದಿ ಹೂವಿನ ಮೇಲೆ ಕುಳಿತು ದೇಹವನ್ನು ನಾಜೂಕಿನಿಂದ ಅಲ್ಲಾಡಿಸಿ, ಪಾತರಗಿತ್ತಿ ಕಲ್ಪನೆ ಕಟ್ಟಿಕೊಡುವುದು ಆ ರೂಪದರ್ಶಿ ಯುವತಿಗೂ ದೊಡ್ಡ ಸವಾಲೇ ಆಗಿತ್ತು. ಅದಕ್ಕೆ ಪ್ರಯತ್ನವೂ ಬೇಕಾಗಿತ್ತು ಎಂದು ತಮ್ಮ ಪೇಂಟಿಂಗ್​ ಜರ್ನಿಯ ಬಗ್ಗೆ ಹೇಳಿದ್ದಾರೆ.

    ನಗ್ನವಾಗಿ ನಿಂತು ಚಿಟ್ಟೆಯನ್ನು ಹೋಲುವಂತೆ ಪೇಂಟಿಂಗ್ ಮಾಡಿಸಿಕೊಂಡ ರೂಪದರ್ಶಿ ಹೆಸರು ಲಾರಾ. ನನ್ನಲ್ಲಿ ಚಿಟ್ಟೆ ಪರಿಕಲ್ಪನೆ ಹುಟ್ಟಿದ ಕೂಡಲೇ ಕಣ್ಣೆದುರು ಬಂದಿದ್ದೇ ಲಾರಾ. ಅವರೂ ಅದಕ್ಕೆ ಖುಷಿಯಿಂದಲೇ ಒಪ್ಪಿಕೊಂಡು, ಶ್ರದ್ಧೆಯಿಂದ ಸಾಥ್​ ನೀಡಿದರು ಎಂದು ಜೋಹಾನ್ಸ್ ತಿಳಿಸಿದ್ದಾರೆ.

    ಲಾರಾ ನಿಜಕ್ಕೂ ಸುಂದರಿ. ತುಂಬ ಒಳ್ಳೆಯ ಸ್ವಭಾವದವರು ಮತ್ತು ಅತ್ಯಂತ ತಾಳ್ಮೆಯುಳ್ಳ ಮಾಡೆಲ್​.
    ಚಿಟ್ಟೆಯ ಭಂಗಿಯಲ್ಲಿ ತುಂಬ ಹೊತ್ತು ಕುಳಿತುಕೊಳ್ಳುವುದು ಕಷ್ಟ. ಅದನ್ನು ಲಾರಾ ತುಂಬ ಚೆನ್ನಾಗಿ, ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts