More

    ಆರು ಸರ್ಕಾರಿ ಬಂಗಲೆ ರಿಪೇರಿಗೆ 2.73 ಕೋಟಿ ರೂ.; 4ಜಿ ರಿಯಾಯಿತಿ!

    ಬೆಂಗಳೂರು: ಮುಖ್ಯಮಂತ್ರಿ, ನಾಲ್ವರು ಸಚಿವರು ಹಾಗೂ ವಿಧಾನಸಭೆ ಸಭಾಧ್ಯಕ್ಷರ ಸರ್ಕಾರಿ ನಿವಾಸದ ರಿಪೇರಿಗೆ 2.73 ಕೋಟಿ ರೂ. ವೆಚ್ಚ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.
    ವಿಶೇಷವೆಂದರೆ ಈ ಮನೆಯ ದುರಸ್ತಿಗಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯ -1999ರ ಕಲಂ 4(ಜಿ) ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಲೋಕೋಪಯೋಗಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಅಂದರೆ, ಟೆಂಡರ್ ಕರೆಯದೇ ಕಾಮಗಾರಿ ಕೈಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
    ಕ್ರಸೆಂಟ್ ರಸ್ತೆಯಲ್ಲಿರುವ ಲೋಕೋಪಯೋಗಿ ಸಚಿವರ ನಿವಾಸಕ್ಕೆ ಬಣ್ಣ, ಟೈಲ್ಸ್ ಪಾಲಿಶ್, ವಾಟರ್ ಪ್ರ್ೂ, ಸೊಳ್ಳೆ ಮೆಶ್ ಅಳವಡಿಕೆಗೆ 47.60 ಲಕ್ಷ ರೂ.,ಸ್ಯಾಂಕಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ನಿವಾಸದ ಒಳಾಂಗಣ, ಹೊರಾಂಗಣಕ್ಕೆ ಬಣ್ಣ, ವಾರ್ಡ್‌ರೋಬ್, ಕೆಲಸಗಾರರ ಕ್ವಾರ್ಟ್‌ರ್ಸ್‌ ರಿಪೇರಿ, ನೆಲಹಾಸು, ಪೈಪ್ ಅಳವಡಿಕೆಗೆಂದು 49.50 ಲಕ್ಷ ರೂ. ವೆಚ್ಚಮಾಡಲಾಗುತ್ತಿದೆ.
    ಸ್ಯಾಂಕಿ ರಸ್ತೆಯಲ್ಲಿರುವ ಸಭಾಧ್ಯಕ್ಷರ ನಿವಾಸದಲ್ಲಿ ಹೊಸ ಶೌಚಾಲಯ, ಪೊಲೀಸ್ ಚೌಕಿ ಸ್ಥಾಪನೆ, ಅಡುಗೆ ಮನೆ ರಿಪೇರಿ, ಮರದ ನೆಲೆಹಾಸು, ವಾಲ್ ಪೇಪರ್, ಾಲ್ಸ್‌ಸೀಲಿಂಗ್, ವೆಟ್ರಿೈಯ್ಡ ಟೈಲ್ಸ್, ಕರ್ಟನ್ ಇತರೆ ಕೆಲಸಕ್ಕೆಂದು 43.90 ಲಕ್ಷ ರೂ., ಕುಮಾರಕೃಪ ರಸ್ತೆಯಲ್ಲಿರುವ ಮುಖ್ಯಮಂತ್ರಿಯವರ ನಿವಾಸಕ್ಕೆ ಆಫೀಸ್ ಬ್ಲಾಕ್, ಪೀಠೋಕರಣ, ಸ್ಕಾೃನಿಂಗ್‌ಗೆ ್ಯಾಬ್ರಿಕೇಶನ್, ಗ್ರಿಲ್ ವರ್ಕ್, ಪಾಲಿಕಾರ್ಬೊನೇಟ್ ಶೀಟ್ ಅಳವಡಿಕೆ ಮತ್ತು ಇತರೆ ಕೆಲಸಕ್ಕೆ 44 ಲಕ್ಷ ರೂ. ವೆಚ್ಚ ಮಾಡಲು ಅವಕಾಶ ನೀಡಲಾಗಿದೆ.
    ಸ್ಯಾಂಕಿ ರಸ್ತೆಯಲ್ಲಿರುವ ವಸತಿ ಸಚಿವರ ವಸತಿಗೃಹಕ್ಕೆ ಬಣ್ಣ, ಪಾಲಿಶಿಂಗ್, ಶೌಚಾಲಯ ರಿಪೇರಿ, ವಾಟರ್ ಪ್ರೂಫಿಂಗ್, ಸೊಳ್ಳೆ ನಿಯಂತ್ರಣಕ್ಕೆ ಮೆಶ್, ಸರ್ವೆಂಟ್ ರೂಂ ನಿರ್ಮಾಣ ಮತ್ತು ಇತರ ಕೆಲಸಕ್ಕೆ 48.25 ಲಕ್ಷ ರೂ., ರೇಸ್ ಕೋರ್ಸ್ ರಸ್ತೆಯಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವರ ನಿವಾಸಕ್ಕೆ ಬಣ್ಣ, ಪಾಲಿಶಿಂಗ್, ವಾಟರ್ ಪ್ರೂಫಿಂಗ್, ವಾರ್ಡ್‌ರೋಬ್, ನೆಲಹಾಸು, ಪ್ಶೀಟ್ ಶೆಲ್ಟರ್, ಸ್ಯಾನಿಟರಿ, ನೀರಿನ ವ್ಯವಸ್ಥೆ ಫಿಟ್ಟಿಂಗ್, ಕೀಟನಾಶಕ ನಿಯಂತ್ರಣ ಸೇವೆ ಮತ್ತು ಇತರ ಕೆಲಸಕ್ಕೆ 39.90 ಲಕ್ಷ ರೂ. ವೆಚ್ಚಮಾಡಲು ಅನುಮತಿ ಪಡೆದುಕೊಳ್ಳಲಾಗಿದೆ.
    ಸೋಶಿಯಲ್ ಮೀಡಿಯಾ ನಿರ್ವಹಣೆ
    ಮುಖ್ಯಮಂತ್ರಿಯವರ ಸಾಮಾಜಿಕ ಮಾಧ್ಯಮ ನಿರ್ವಹಣೆ, ಟಿವಿ ಮಾನಿಟರಿಂಗ್, ನ್ಯೂಸ್ ಪೇಪರ್ ಕ್ಲಿಪಿಂಗ್, ಪಿ.ಆರ್‌ಸೇವೆ ಮತ್ತು ಸರ್ವರ್ ನಿರ್ವಹಣೆಗೆ ಮಾಸಿಕ 7.19 ಲಕ್ಷ ರೂ.ಗೆ ನೀಡಲು ಅಧಿಸೂಚನೆ ಪ್ರಕಟವಾಗಿದೆ. ಕಿಯಾನಿಕ್ಸ್ ಮೂಲಕ, ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 4ಜಿ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. 2023ರ ಡಿಸೆಂಬರ್ 15ರಿಂದ 2025ರ ಜುಲೈ 31ರವರೆಗೆ ಈ ತೀರ್ಮಾನ ಅನ್ವಯವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts