More

    ನಾಯಕತ್ವ ಬೆಳೆಸಲು ಎನ್​.ಎಸ್​.ಎಸ್​. ಸಹಾಯಕಾರಿ: ಎಂ. ಎಸ್​. ಮುಲ್ಲಾ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಕೆ.ಎಲ್​.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಎನ್​ಎಸ್​ಎಸ್​. ಟಕದ ಕಾರ್ಯಚುವಟಿಕೆಗಳ ಉಧ್ಘಾಟನ ಕಾರ್ಯಕ್ರಮ ಜರುಗಿತು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಭಾಗೀಯ ಎನ್​ಎಸ್​ಎಸ್​ ಅಧಿಕಾರಿ ಎಂ.ಎಸ್​. ಮುಲ್ಲಾ ಮಾತನಾಡಿ, ವಿಷೇಶ ಶಿಬಿರಗಳು ನಾಯಕತ್ವ, ವ್ಯಕ್ತಿತ್ವ ವಿಕಸನ, ಸಮಾಜದಲ್ಲಿ ಬದುಕುವುದನ್ನು ಕಲಿಸುತ್ತವೆ. ಸಮಯ ಪಾಲನೆ, ಶಿಸ್ತು, ಗುರುಹಿರಿಯರಿಗೆ ಗೌರವ ಕೊಡುವುದನ್ನು ಎನ್​ಎಸ್​ಎಸ್​. ಕಲಿಸುತ್ತದೆ ಎಂದರು.
    ಮಹಾವಿದ್ಯಾಲಯದ ಪ್ರಚಾರ್ಯಡಾ. ಎ. ಕೆ. ಮಠ ಮಾತನಾಡಿ, ಎನ್​ಎಸ್​ಎಸ್​ ವಿದ್ಯಾಥಿರ್ಗಗಳು ಶಿಬಿರದಲ್ಲಿ ಭಾಗವಹಿಸುವುದರಿಂದ ಗ್ರಾಮಗಳೊಂದಿಗೆ ನಿಕಟ ಸಂಪರ್ಕ ಹೊಂದಲು ಸಹಕಾರಿ. ಗ್ರಾಂಗಳ ಕುಂದು ಕೊರತೆಗಳ ಬಗ್ಗೆ ಅರಿವು ಉಂಟಾಗುತ್ತದೆ. ಯಾವುದೆ ಪ್ರತಿಲ ಅಪೇಸದೆ ಸ್ವಯಂಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ ಮತ್ತು ವಿದ್ಯಾಥಿರ್ಗಳು ತಮ್ಮ ಪ್ರತಿಭೆ ಹೊರ ಹಾಕಲು ಸೂಕ್ತವಾದ ವೇದಿಕೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ “ಚೆನ್ನವಿರ ಕಣವಿ’ ರಾಷ್ಟ್ರ ಪ್ರಶಸ್ತಿ ಪಡೆದ ಮಹಾವಿದ್ಯಾಲಯದ ವಿದ್ಯಾಥಿರ್ ಗಣೇಶಗೌಡ ಪಾಟೀಲ್​ ಅವರನ್ನು ಸನ್ಮಾನಿಸಲಾಯಿತು. ಎನ್​ಎಸ್​ಎಸ್​ ಟಕದ ಅಧಿಕಾರಿ ಡಾ. ವಿಠ್ಠಲ್​ ಕೊಳಿ ಪ್ರಾಸ್ತಾವಿಕ ಮಾತನಾಡಿದರು. ಸಾ ಹೊಸಮಠ, ದೀಪಕ್​ ನಿಲೂಗಲ್​ ಸೇರಿದಂತೆ ಹಲವರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts