More

    ಸೆಮಿಫಿನಾಲೆಯಲ್ಲೂ ಬೌಲಿಂಗ್​ ಮಾಡಲಿದ್ದಾರ ಕಿಂಗ್​ ಕೊಹ್ಲಿ; ಬೌಲಿಂಗ್ ಕೋಚ್​ ಹೇಳಿದ್ದಿಷ್ಟು

    ಮುಂಬೈ: 2023ರ ಏಕದಿನ ವಿಶ್ವಕಪ್​ ಸೆಮಿಫಿನಾಲೆಗೆ ದಿನಗಣನೆ ಶುರುವಾಗಿದ್ದು, ಮೊದಲ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್​ ತಂಡಗಳು ಸೆಣಸಾಡಲಿವೆ. ಪ್ರಸ್ತುತ ಭಾರತ ತಂಡವು ಎಲ್ಲರ ಹಾಟ್​ ಫೇವರಿಟ್​ ಆಗಿದ್ದು, 13 ವರ್ಷಗಳ ಬಳಿಕ ಭಾರತ ಫಿನಾಲೆ ಪ್ರವೇಶಿಸುವುದು ಬಹುತೇಕ ಖಚಿತ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ತಂಡವು ಲೀಗ್​ ಹಂತದ ಎಲ್ಲಾ ಪಂದ್ಯಗಳಲ್ಲಿ ಭರ್ಜರಿ ನಿರ್ಹವಣೆ ಮೂಲಕ ಸೆಮಿಫಿನಾಲೆ ಪ್ರವೇಶಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಲಿದ್ದಾರೆ ಎಂದು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಖಚಿತಪಡಿಸಿದ್ದಾರೆ.

    ನೆದರ್​ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಮೂರು ಓವರ್ ಬೌಲಿಂಗ್ ಮಾಡಿದ್ದ ಕೊಹ್ಲಿ 13 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಇದೀಗ ಇದೇ ತಂತ್ರವನ್ನು ನ್ಯೂಜಿಲೆಂಡ್ ವಿರುದ್ಧ ಕೂಡ ಪ್ರಯೋಗಿಸಲು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಪ್ಲ್ಯಾನ್ ರೂಪಸಿದ್ದಾರೆ. ವಿರಾಟ್ ಕೊಹ್ಲಿಯ ಬೌಲಿಂಗ್ ಅನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ಎಂಬುದರ ಕುರಿತು ನಾನು ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದೇನೆ. ಕೊಹ್ಲಿ ಹೊಸ ಚೆಂಡಿನೊಂದಿಗೆ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಪವರ್​ಪ್ಲೇನಲ್ಲೇ ಬೌಲಿಂಗ್ ಮಾಡಿಸಬಹುದು ಎಂದು ಹೇಳಿದ್ದಾರೆ.

    Bowling Coach

    ಇದನ್ನೂ ಓದಿ: ಹೊಂಬಾಳೆ ಫಿಲಂಸ್​ ಮೂಲಕವೇ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ ಸಲಾರ್

    ವಿರಾಟ್ ಕೊಹ್ಲಿಗೆ ಮಧ್ಯಮ ಓವರ್‌ಗಳೇ ದೊಡ್ಡ ಸವಾಲು. ಇದಾಗ್ಯೂ ಅವರು ನೆದರ್​ಲೆಂಡ್ಸ್​ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ನಾವು ಡೆತ್ ಓವರ್‌ಗಳಲ್ಲಿಯೂ ಅವರಿಗೆ ಅವಕಾಶ ನೀಡಬಹುದು. ಹೀಗಾಗಿ ಅಂತಹ ಪರಿಸ್ಥಿತಿ ಎದುರಾದರೆ ಖಂಡಿತವಾಗಿಯೂ ವಿರಾಟ್​ ಕೊಹ್ಲಿ ಸೆಮಿಫಿನಾಲೆಯಲ್ಲೂ ಬೌಲಿಂಗ್​ ಮಾಡಲಿದ್ದಾರೆ ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಹೇಳಿದ್ದಾರೆ.

    ಏಕದಿನ ಕ್ರಿಕೆಟ್​ ಮಾದರಿಯಲ್ಲಿ 5 ವಿಕೆಟ್​ ಕಬಳಿಸಿರುವ ವಿರಾಟ್​ ಕೊಹ್ಲಿ, ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡದ ನಾಯಕನ ವಿಕೆಟ್​ ಪಡೆಯುವ ಮೂಲಕ ವಿಶ್ವಕಪ್​ನಲ್ಲೂ ವಿಕೆಟ್ ಖಾತೆ ತೆರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ವಿರಾಟ್ ಕೊಹ್ಲಿಯನ್ನು ಹೆಚ್ಚುವರಿ ಬೌಲರ್​ ಆಗಿ ಬಳಸಿಕೊಳ್ಳಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ವಿರಾಟ್​ ಕಮಾಲ್​ ಮಾಡಲಿದ್ದಾರ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts