More

    ಮಮತಾ ಮಾತ್ರ ಏಕೆ, ನಾನೂ ಬಿಡ್ತೇನೆ ಅಂತ ಸ್ಕೂಟರ್ ಏರಿದ ಬಿಜೆಪಿ ನಾಯಕಿ

    ಕೊಲ್ಕತಾ: ರಾಜಕೀಯ ಸಮರದಲ್ಲಿ ಎದುರಾಳಿಯನ್ನು ಅವನದೇ ಪಟ್ಟಿನಲ್ಲಿ ಸೋಲಿಸಬೇಕು ಎನ್ನುತ್ತಾರೆ. ಇದನ್ನು ಪದಶಃ ಅಳವಡಿಸಿಕೊಂಡುದರ ಉದಾಹರಣೆ ಚುನಾವಣೆಗೆ ಸಜ್ಜಾಗಿರುವ ಪಶ್ಚಿಮ ಬಂಗಾಳದಲ್ಲಿ ನಡೆದಿದೆ! ನಿನ್ನೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಗಾಗಿ ಟಿಎಂಸಿ ನಾಯಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಏರಿದ್ದರು. ಇಂದು ಬಂಗಾಳದಲ್ಲಿ ಬಿಜೆಪಿ ಪ್ರಚಾರಕ್ಕೆ ನಡೆಸಿದ ರಾಲಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬೈಕ್ ಓಡಿಸುತ್ತಾ ಕಾಣಿಸಿಕೊಂಡರು.

    ಚುನಾವಣಾ ಆಯೋಗವು ಬಂಗಾಳ ಮತ್ತು ನಾಲ್ಕು ಇತರ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದ ದಿನವಾದ ಇಂದು ಬಂಗಾಳದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾದ ರಾಜನಾಥ ಸಿಂಗ್ ಮತ್ತು ಸ್ಮೃತಿ ಇರಾನಿ ಪ್ರಚಾರ ನಡೆಸಿದರು. ರಕ್ಷಣಾ ಸಚಿವ ರಾಜನಾಥ ಸಿಂಗ್ ಬಲೂರ್ಘಾಟ್​ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ – ಟೆಕ್ಸ್​ಟೈಲ್ಸ್ ಸಚಿವರಾದ ಇರಾನಿ ಅವರು ಪಕ್ಷದ ರಾಲಿಯಲ್ಲಿ ಭಾಗವಹಿಸಿದರು.

    ಇದನ್ನೂ ಓದಿ: ಬಾಯಲ್ಲೇನು ಇಟ್ಕೊಂಡಿದೀರಾ ಎನ್ನುತ್ತಾ ಸ್ಕೂಟರ್​ ಸವಾರಿ ಹೊರಟ ದೀದಿ!

    ಬಿಜೆಪಿ ರಾಜ್ಯದ್ಯಂತ ನಡೆಸುತ್ತಿರುವ ‘ಪೊರಿಬೊರ್ತನ್ ಯಾತ್ರ’ದ ಭಾಗವಾಗಿ, ಘೋಷಣೆ ಮತ್ತು ನಾಯಕರ ಚಿತ್ರಗಳಿಂದ ಅಲಂಕೃತವಾದ ಬಸ್​ ಆದ “ರಥ” ಯಾತ್ರೆಯನ್ನು ಇರಾನಿ ನೇತೃತ್ವದಲ್ಲಿ ಗಂಗಾಜೋರಾದಿಂದ ಆರಂಭಿಸಲಾಯಿತು. ಬಿಜೆಪಿ ಸಂಸದರಾದ ರೂಪ ಗಂಗೂಲಿ ಮತ್ತು ಅಗ್ನಿಮಿತ್ರ ಪೌಲ್ ಅವರೂ ಈ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡರು. ಆದರೆ ಸ್ವಲ್ಪ ದೂರ ಸಾಗುತ್ತಿದ್ದಂತೆ, ರಥದಿಂದ ಕೆಳಗಿಳಿದ ಸ್ಮೃತಿ ಇರಾನಿ, ಕಪ್ಪು ಹೆಲ್ಮೆಟ್ ಧರಿಸಿ ಸ್ಕೂಟರ್ ಏರಿದರು.

    ರಾಜ್ಯದ ಬಿಜೆಪಿ ಯುವ ಕಾರ್ಯಕರ್ತರೊಂದಿಗೆ ಮೋಟರ್​ಸೈಕಲ್ ರಾಲಿಯಲ್ಲಿ ಪಾಲ್ಗೊಂಡ ಸ್ಮೃತಿ ಇರಾನಿ ಬೈಕ್ ಓಡಿಸುತ್ತಿರುವ ಚಿತ್ರಗಳು ಈಗ ವೈರಲ್ ಆಗಿವೆ. ಕೊಲ್ಕತ್ತಾದ ಹೊರವಲಯದಲ್ಲಿರುವ ಬರುಯಿಪುರ-ಸೊನಾರಪುರ ಪ್ರದೇಶದ ಚಿಕ್ಕ ರಸ್ತೆಗಳ ಮೇಲೆ ಇರಾನಿ ಅವರೊಂದಿಗೆ ದ್ವಿಚಕ್ರವಾಹನಗಳಲ್ಲಿ ಸಾಗಿದ ಕಾರ್ಯಕರ್ತರು “ಜೈ ಶ್ರೀ ರಾಮ್” ಮತ್ತು “ಖೇಲಾ ಹೋಬೇ” (ಆಟ ಶುರುವಾಗಿದೆ) ಎನ್ನುವ ಘೋಷಣೆಗಳನ್ನು ಹೇಳುತ್ತಾ ಸಾಗಿದರು. ಈ ಪ್ರದೇಶವು ಟಿಎಂಸಿಯ ಹಿಡಿತದಲ್ಲಿರುವ ಕ್ಷೇತ್ರವೆನಿಸಿರುವ ದಕ್ಷಿಣ 24 ಪರಗಣ ಜಿಲ್ಲೆಗೆ ಸೇರಿದ್ದಾಗಿದೆ.

    ಇದನ್ನೂ ಓದಿ: “ಚುನಾವಣೆ ಮುಗಿಯೋ ಮುನ್ನ ಮಮತಾ ಬ್ಯಾನರ್ಜಿ ಜೈ ಶ್ರೀ ರಾಮ್ ಅಂತಾರೆ”

    ಗುರುವಾರ ಕೇಂದ್ರದ ಬಿಜೆಪಿ ಸರ್ಕಾರವನ್ನು ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯ ವಿಷಯವಾಗಿ ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ, ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪ್ರಯಾಣ ಮಾಡಿದ್ದರು. ಬಂಗಾಳದ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಂ ಬ್ಯಾಟರಿ ಚಾಲಿತ ಸ್ಕೂಟರ್ ಓಡಿಸಿದರೆ, ಬ್ಯಾನರ್ಜಿ ಅವರ ಹಿಂದೆ ಪಿಲಿಯನ್ ರೈಡರ್ ಆಗಿ ಸಾಗಿದ್ದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮೈಸೂರು ಮೇಯರ್ ಚುನಾವಣೆ : ಶಾಸಕ ತನ್ವೀರ್ ಸೇಠ್​ಗೆ ಡಿಕೆಶಿ ಬುಲಾವ್

    ಮದುವೆ ಮಂಟಪವಾಗಿ ಬದಲಾದ ಜೈಲು! ವಿಚಾರಣಾಧೀನ ಖೈದಿಯ ವಧು ಯಾರು ಗೊತ್ತೆ?

    ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts